ಗೋವಾ ಕನ್ನಡಿಗರ ರಕ್ಷಣೆಗೆ ಧಾವಿಸಲು ಕರವೇ ಮನವಿ

KannadaprabhaNewsNetwork |  
Published : Apr 16, 2024, 01:06 AM ISTUpdated : Apr 16, 2024, 12:56 PM IST
15 ಜಿಕೆಕೆ-1 | Kannada Prabha

ಸಾರಾಂಶ

ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಲು ಗೋವಾ ಸರ್ಕಾರಕ್ಕೆ ಒತ್ತಡ ಹೇರುವಂತೆ ಆಗ್ರಹಿಸಿ ಕರವೇ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

 ಗೋಕಾಕ : ನಿರಾಶ್ರಿತ ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಲು ಗೋವಾ ಸರ್ಕಾರಕ್ಕೆ ಒತ್ತಡ ಹೇರುವಂತೆ ಆಗ್ರಹಿಸಿ ಕರವೇ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ ಹಲವಾರು ವರ್ಷಗಳಿಂದ ಗೋವಾದಲ್ಲಿ ವಾಸವಾಗಿರುವ ಕನ್ನಡಿಗರನ್ನು ವಿನಾಕಾರಣ ಗೋವಾ ಸರಕಾರ ಮನೆಗಳನ್ನು ತೆರವುಗೊಳಿಸಿ ತೊಂದರೆ ನೀಡುತ್ತಿರುವುದು ಖಂಡನೀಯವಾಗಿದೆ. ಸುಮಾರು 40 ವರ್ಷಗಳಿಂದ ಗೋವಾ ವಾಸ್ಕೋ, ಝರಿ, ಮಡಗಾಂವ, ಜುವಾರಿ ನಗರ ಹಾಗೂ ಸಾಂಗೋಲ್ಡಾದಲ್ಲಿ ಸಾವಿರಾರು ಜನ ಕನ್ನಡಿಗರು ಉದ್ಯೋಗಕ್ಕಾಗಿ ಗೋವಾ ರಾಜ್ಯವನ್ನು ಅವಲಂಬಿಸಿದ್ದಾರೆ. ಹೀಗೆ ಗೋವಾದಲ್ಲಿ ಆಶ್ರಯ ಪಡೆದ ಕನ್ನಡಿಗರಿಗೆ ಗೋವಾ ಸರಕಾರ , ವಿದ್ಯುತ್, ನೀರು ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಕಲ್ಪಿಸಿದೆ. ಆದರೆ, ಇತ್ತೀಚೆಗೆ ಯಾವುದೇ ಮುನ್ಸೂಚನೆ ಇಲ್ಲದೆ ಸಾಂಗೋಲ್ಡಾದಲಿ ವಾಸಿಸುವ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿ ಯಾವುದೇ ಪುನರ್ವಸತಿ ಕಲ್ಪಿಸಿಲ್ಲ. ಹಾಗಾಗಿ ಸಾಂಗೋಲ್ಡಾದಲಿ ವಾಸವಿದ್ದ ಕನ್ನಡಿಗರು ಬೀದಿಪಾಲಾಗಿದ್ದಾರೆ . ಆದ್ದರಿಂದ ತಕ್ಷಣ ಮಧ್ಯೆ ಪ್ರವೇಶಿಸಿ ಕರ್ನಾಟಕ ಒಬ್ಬ ಸಚಿವರನ್ನು ಗೋವಾ ರಾಜ್ಯಕ್ಕೆ ಕಳುಹಿಸಿ ಕನ್ನಡಿಗರ ಹಿತ ಕಾಪಾಡಿ ಗೀವಾ ಸರ್ಕಾರ ಪುನರ್ವಸತಿ ಕಲ್ಪಿಸುವಂತೆ ನೋಡಿಕೋಳ್ಳಬೇಕೆಂದು ಮನವಿಯಲ್ಲಿ ವಿನಂತಿಸಿದೆ.

ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ನಿಜಾಮ ನಧಾಪ, ಮುಗುಟ ಪೈಲವಾನ, ಶ್ರೀಶೈಲ ಕುಂಬಾರ, ಬಾಹುಬಲಿ ಖಾರೆಪಠಾಣ, ಮಲ್ಲಪ್ಪ ತೃಲಪ್ಪಗೋಳ, ಆಲ್ಲಪ ನಂದಿ, ಸತಾರ ಬೇಪಾರಿ, ಹನುಮಂತ ಅಮ್ಮಣ್ಣಗಿ, ಶಿವಾನಂದ ಖಂಡ್ರೆ, ಚಿದಾನಂದ ಮಲ್ಲನಾಡದವರ, ಮೊಸೀನ ಮಕಾಂದಾರ, ಆನಂದ ಖಾನಪ್ಪನವರ, ಸಿದ್ದು ಖಾನಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ಪೂರೈಕೆ ಸುಧಾರಣೆ: ಸಪ್ಲೈ ಶೇ.20ರಷ್ಟು ಏರಿಕೆ
ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ