ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ

KannadaprabhaNewsNetwork | Published : Feb 26, 2025 1:03 AM

ಸಾರಾಂಶ

ಕ್ರೈಸ್ತ ಧರ್ಮೀಯರಿಗೆ ಪವಿತ್ರವಾದ ಸ್ಥಳವಾಗಿರುವ ಶಿಲುಬೆ ಬೆಟ್ಟದ ಜಾಗವನ್ನು ಗಣಿಗಾರಿಕೆಗೆ ಕೊಟ್ಟಿರುವುದು ಸರಿಯೇ ಎಂದು ಪ್ರಶ್ನಿಸಿ ಹಾಗೂ ಕೂಡಲೇ ಕೆಲಸ ನಿಲ್ಲಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಶೆಟ್ಟಿ ಬಣ ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮಂಗಳವಾರ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಇದೇ ವೇಳೆ ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಮಾತನಾಡಿ, ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ಮೇಲೆ ಕೆಲಸ ಸ್ಥಗಿತಗೊಳಿಸಬೇಕು. ಆದರೆ ಸಬೂಬು ಹೇಳುವುದನ್ನು ಮಾಡಬಾರದು. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇರುವುದರಿಂದ ಅವರಿಗೆ ನೋಟಿಸ್ ನೀಡಿ ಗಣಿಗಾರಿಕೆ ನಿಲ್ಲಿಸಬೇಕು. ಕೂಡಲೇ ಶಿಲುಬೆ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಗಣಿಗಾರಿಕೆಗೆ ಭಾರಿ ಗಾತ್ರದ ವಾಹನಗಳನ್ನು ಬಳಸಿರುವುದರಿಂದ ರಸ್ತೆ ಹಾಳಾಗಿದ್ದು, ಶಾಲಾ ವಾಹನಗಳು ಮಕ್ಕಳನ್ನು ಕರೆದುಕೊಂಡು ಹೋಗಲು ಬರುವುದಕ್ಕೆ ನಿರಾಕರಿಸುತ್ತಿದ್ದಾರೆ. ಕೃಷಿ ಭೂಮಿಗೆ ಕಲುಷಿತ ನೀರು ಮತ್ತು ಧೂಳು ಬಂದು ಸೇರಿಕೊಳ್ಳುತ್ತಿದೆ. ಇದರಿಂದ ಜಮೀನುಗಳಲ್ಲಿ ಕಾಫಿ, ಭತ್ತ ಹಾಗೂ ಇತರೆ ಬೆಳೆಗಳು ಕಲುಷಿತಗೊಂಡು ಹಾಳಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಮೇಲಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಶಾಶ್ವತವಾಗಿ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಆದೇಶವನ್ನು ಹೊರಡಿಸಬೇಕೆಂದು ಮನವಿ ಮಾಡಿದರು. ಇನ್ನೂ ಉಳಿದ ತಮ್ಮ ಹಕ್ಕೊತ್ತಾಯಗಳೆಂದರೇ ಜಿಲ್ಲೆಯಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಕೂಡಲೇ ಮಂಜೂರು ಮಾಡಬೇಕು. ಆನೆಗಳ ಹಾವಳಿ ಹೆಚ್ಚು ಇದ್ದು, ಕಾಡಿನ ಒಳಗೆ ನೆಲೆಯನ್ನು ಮನುಷ್ಯರಾದ ನಾವು ಅವರ ನೆಮ್ಮದಿ ಹಾಳು ಮಾಡಿದ ಪರಿಣಾಮ ಊರೊಳಗೆ ಬರುತ್ತಿದೆ. ಇದರ ಬಗ್ಗೆ ಸರ್ಕಾರವು ಜವಾಬ್ದಾರಿ ತೆಗೆದುಕೊಂಡು ಶಾಶ್ವತ ಪರಿಹಾರ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ರಾಜ್ಯ ಸಂಚಾಲಕ ಮಹಮದ್ ಸಾಧಿಕ್, ಷಾಭಾಶ್, ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಇತರರು ಇದ್ದರು.

Share this article