ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಹಾಗೂ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ದೇಶಭಕ್ತಿಯ ಕುರಿತು ಮಾತನಾಡಿದ ಅವರು, ಎದೆ ತಟ್ಟಿ ಹೇಳು ಭಾರತೀಯನೆಂದು ಗರ್ವದಿಂದ ಹೇಳು. ಏಕೆಂದರೆ ಶತ್ರು ರಾಷ್ಟ್ರಗಳು ದಾಳಿ ಮಾಡಿದ್ದಕ್ಕೆ ಪ್ರತಿದಾಳಿ ಮಾಡಿ ತಕ್ಕ ಪಾಠವನ್ನು ಕಲಿಸಿದ ಹಾಗೂ ಕಾರ್ಗಿಲ್ ಬೆಟ್ಟವನ್ನು ಮರಳಿ ಪಡೆದ ದಿನವಿಂದು ನಾವು ಕಾರ್ಗಿಲ್ ವಿಜಯದಿವಸ ಎಂದು ಆಚರಿಸುತ್ತೇವೆ ಎಂದು ತಿಳಿಸಿದರು.ಈ ವೇಳೆ ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೊ.ಬಿ.ವಿ.ಹಿರೇಮಠ, ಪ್ರೊ.ಬಿ.ಎ.ಕುಲಕರ್ಣಿ, ಪ್ರೊ.ಜಿ.ಎಸ್.ಬಗಲಿ, ಪ್ರೊ.ಎನ್.ಎಸ್.ಹರನಾಳ, ಪ್ರೊ.ಎಸ್.ಎಂ.ಚುಂಚೂರ, ಪ್ರೊ.ಶ್ರೀಶೈಲ ತರಳಗಟ್ಟಿ, ಪ್ರೊ.ಆರ್.ಎಸ್.ಚಲವಾದಿ, ಪ್ರೊ.ಜಿ.ಎ.ಮೇಟಿ, ಪ್ರೊ.ವಿದ್ಯಾ ಅಂಗಡಿ, ಎಂ.ಟಿ.ಶೇಲಾರ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.