ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್‌

KannadaprabhaNewsNetwork |  
Published : Jul 27, 2024, 12:46 AM IST
ಚಿತ್ರ 26ಬಿಡಿಆರ್50 | Kannada Prabha

ಸಾರಾಂಶ

ಬೀದರ್ ನಗರದ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ್ ದಿವಸ ನಿಮಿತ್ತ ವೀರಯೋಧರಿಗೆ ನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ನಗರದ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ್ ದಿವಸ ಆಚರಿಸಿ ಯೋಧರಿಗೆ ನಮನ ಸಲ್ಲಿಸಲಾಯಿತು.

ಸಂಸ್ಥೆ ನಿರ್ದೇಶಕ ಡಾ.ಸಂಗಮೇಶ ಕುನೆಕೇರಿ ಮತ್ತು ಡಾ.ರಘು ಕೃಷ್ಣ ಮೂರ್ತಿ ಭಾಗವಹಿಸಿ ಇದೇ ವೇಳೆ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿ ಹುತಾತ್ಮರಾದ ವೀರ ಯೋಧರಿಗೆ ಜವಾನ್ ಜ್ಯೋತಿ ಬೆಳಗಿಸಿ, ಪುಷ್ಪ ನಮನ ಸಲ್ಲಿಸಿ ಗೌರವ ವಂದನೆ ನೀಡಿ ಸ್ಮರಿಸಲಾಯಿತು.

ನಂತರ ಕಾರ್ಗಿಲ್ ಯುದ್ಧದ ಇತಿಹಾಸ ಕುರಿತು ಶಿಕ್ಷಕರಾದ ಹರ್ಷವರ್ಧನ್ ಮಠಪತಿ, ಆಶಾ ಮತ್ತು ಮಕ್ಕಳು ಭಾಷಣ ನೀಡಿದರು. ಮಕ್ಕಳಿಂದ ದೇಶಭಕ್ತಿ ಗೀತ ಗಾಯನ ಅತೀ ಮಧುರವಾಗಿ ಮೂಡಿತು, ದೇಶಭಕ್ತಿ ಮೂಡಿಸುವ ಮಕ್ಕಳ ನೃತ್ಯವು ಮೈ ರೋಮಾಂಚನಗೊಳಿಸಿತು.

ಸಂಸ್ಥೆ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪೂರೆ ಅವರು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದು ಸಂಸ್ಥೆಗೆ ಹಾಗೂ ಬೀದರ್ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಪ್ರತಿ ವರ್ಷ ಅಧ್ಯಕ್ಷರು ಕಾರ್ಗಿಲ್ ಯುದ್ಧದ ಕುರಿತು ಮಕ್ಕಳಿಗೆ ವಿವರಿಸುತ್ತಿದ್ದರು, ಈ ವರ್ಷ ಅವರು ಕೆನಡಾಕ್ಕೆ ತೆರಳಿದ್ದು ಅಲ್ಲಿಂದಲೇ ಸಂಸ್ಥೆ ಎಲ್ಲಾ ಸಿಬ್ಬಂದಿಗೆ ಹಾಗೂ ಮಕ್ಕಳಿಗೆ ಕಾರ್ಗಿಲ್ ವಿಜಯ್ ದಿವಸದ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ ಎಂದರು.

ಡಾ.ರಘು ಕೃಷ್ಣ ಮೂರ್ತಿ ಮಾತನಾಡಿ, ಇಂದು ನಾವು ವೀರಯೋಧರ ಸ್ಮರಿಸುವ ದಿನವಾಗಿದೆ. ಈ ದಿನ ಮಕ್ಕಳಿಂದ ಮೂಡಿ ಬಂದ ವಿಭಿನ್ನ ಚಟುವಟಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಡಾ. ಸಂಗಮೇಶ ಕುನೆಕೇರಿ ಮಾತನಾಡಿ, ಅನೇಕ ವೀರರನ್ನು ನೆನೆದು ಇವರ ವೀರ ಶೂರ ಹೋರಾಟದಿಂದ ಕಾರ್ಗಿಲ್ ವಿಜಯವಾಯಿತು ಇದು ನಮಗೆ ಹೆಮ್ಮೆಯ ವಿಷಯ ಎಂದರು.

ಮುಖ್ಯ ಗುರುಗಳಾದ ಜ್ಯೋತಿ ರಾಗಾ, ಡಾ. ಮನಿಷಾ, ಸುಬೇದಾರ್ ಮಡೇಪ್ಪ ಸುಬೇದಾರ್ ಧನರಾಜ್, ಮಾಜಿ ಸೈನಿಕರಾದ ಚಂದ್ರಶೆಖರ ಮಠಪತಿ, ಇರಾರೆಡ್ಡಿ, ಅಶೊಕ ಪಾಟೀಲ, ಡಾ. ಗಹನಿನಾಥ್, ಶಿಕ್ಷಕಿ ಸಬಾ, ಪೂಜಾ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ