ಜೊಂಡಲಗಟ್ಟಿಗೆ ಬಸ್‌ ಸೌಕರ್ಯಕ್ಕಾಗಿ ಗ್ರಾಮಸ್ಥರಿಂದ ರಸ್ತೆ ತಡೆ

KannadaprabhaNewsNetwork |  
Published : Jul 28, 2024, 02:11 AM ISTUpdated : Jul 28, 2024, 02:12 AM IST
ಪೊಟೋ ಪೈಲ್ ನೇಮ್ ೨೭ಎಸ್‌ಜಿವಿ೧   ಹಾವೇರಿ ಜಿಲ್ಲೆಯ  ಶಿಗ್ಗಾವಿ ತಾಲೂಕಿನ ಕಟ್ಟಕಡೆಯ ಕೊನೆಯ ಗ್ರಾಮವಾದ ಜೊಂಡಲಗಟ್ಟಿಗೆÀ ಸಾರಿಗೆ ವ್ಯವಸ್ಥೆಯನ್ನು  ಕಲ್ಪಿಸಿ  ಸಾರಿಗೆ ಅಧಿಕಾರಿಗಳ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ  ಗಜಸೇನೆ ಕಾರ್ಯಕರ್ತರು ತಡಸ – ಗೋಂದಿ  ಹೆದ್ದಾರಿಯನ್ನು  ಅರಟಾಳ ಕ್ರಾಸ ಹತ್ತಿರ ತಡೆದು ಬೃಹತ ಪ್ರತಿಭಟ್ಟನೆ ಸಾರಿಗೆ ಹಾಗೂ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದರು. ೨೭ಎಸ್‌ಜಿವಿ೧-೧   ಹಾವೇರಿ ಜಿಲ್ಲೆಯ  ಶಿಗ್ಗಾವಿ ತಾಲೂಕಿನ ಕಟ್ಟಕಡೆಯ ಕೊನೆಯ ಗ್ರಾಮವಾದ ಜೊಂಡಲಗಟ್ಟಿಗೆÀ ಸಾರಿಗೆ ವ್ಯವಸ್ಥೆಯನ್ನು  ಕಲ್ಪಿಸಿ  ಸಾರಿಗೆ ಅಧಿಕಾರಿಗಳ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ  ಗಜಸೇನೆ ಕಾರ್ಯಕರ್ತರು ತಡಸ – ಗೋಂದಿ  ಹೆದ್ದಾರಿಯನ್ನು  ಅರಟಾಳ ಕ್ರಾಸ ಹತ್ತಿರ ತಡೆದು ಬೃಹತ ಪ್ರತಿಭಟ್ಟನೆ ಮಾಡುತ್ತಿರುವದು. | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕಿನ ಕಟ್ಟಕಡೆಯ ಗ್ರಾಮವಾದ ಜೊಂಡಲಗಟ್ಟಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸದ ಸಾರಿಗೆ ಅಧಿಕಾರಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ತಡಸ–ಗೊಂದಿ ಹೆದ್ದಾರಿ ತಡೆದು ಅರಟಾಳ ಕ್ರಾಸ್‌ ಹತ್ತಿರ ಪ್ರತಿಭಟಿಸಿದರು.

ಶಿಗ್ಗಾಂವಿ: ತಾಲೂಕಿನ ಕಟ್ಟಕಡೆಯ ಗ್ರಾಮವಾದ ಜೊಂಡಲಗಟ್ಟಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸದ ಸಾರಿಗೆ ಅಧಿಕಾರಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ತಡಸ–ಗೊಂದಿ ಹೆದ್ದಾರಿ ತಡೆದು ಅರಟಾಳ ಕ್ರಾಸ್‌ ಹತ್ತಿರ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ವೇದಿಕೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ಜೊಂಡಲಗಟ್ಟಿ ಗ್ರಾಮದ ಸುತ್ತಲೂ ಹತ್ತು ಕಿಮೀ ಅರಣ್ಯ ಪ್ರದೇಶವಿದ್ದು, ಶಾಲಾ ಮಕ್ಕಳು ಸೇರಿದಂತೆ ವೃದ್ಧರು ವಿಕಲಚೇತನರು, ಮಹಿಳೆಯರು ಶಾಲಾ ಕಾಲೇಜು, ಗ್ರಾಮ ಪಂಚಾಯಿತಿ, ಬ್ಯಾಂಕ್‌ ಆಸ್ಪತ್ರೆ ಸೇರಿದಂತೆ ತಮ್ಮ ದಿನನಿತ್ಯದ ವ್ಯವಹಾರ ವಹಿವಾಟುಗಳಿಗೆ ಓಡಾಡಲು ತುಂಬಾ ಕಷ್ಟವಾಗಿದೆ ಎಂದರು.

ಕಳೆದ ನಾಲ್ಕು ವರ್ಷಗಳಿಂದ ಓಡಾಡುತ್ತಿದ ಬಸ್‌ನ್ನು ಏಕಾ ಏಕಿ ನಿಲ್ಲಿಸಿರುವುದರಿಂದ ಅಲ್ಲಿ ಮಕ್ಕಳು ಶಾಲಾ ಕಾಲೇಜಿಗೆ ಹೋಗಲು ತುಂಬಾ ಕಷ್ಟಕರವಾಗಿರುವುದರಿಂದ ಹಲವಾರು ಬಾರಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಏನೂ ಪ್ರಯೋಜನವಾಗಿಲ್ಲ ಎಂದರು.

ಸರಕಾರ ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹಲವಾರು ಯೋಜನೆಗಳನ್ನು ರೂಪಿಸಿದೆ. ಅಲ್ಲದೆ ಮಕ್ಕಳಿಗೆ ಕೆಲವು ದಿನಗಳ ಹಿಂದೆ ಉದ್ಯಮಿಯೊಬ್ಬರು ಸಾವಿರದ ಐದನೂರು ಕೋಟಿ ರುಪಾಯಿ ವೆಚ್ಚದಲ್ಲಿ ಮೊಟ್ಟೆ ನೀಡುವುದಕ್ಕೆ ಮುಂದಾಗಿರುವಾಗ ಸಾರಿಗೆ ಅಧಿಕಾರಿಗಳು ಬಸ್‌ ಬಿಡಲು ಹಿಂದೇಟು ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಕೂಡಲೆ ಜೊಂಡಲಗಟ್ಟಿ ಮಾರ್ಗದಿಂದ ಮುಂಡಗೋಡ ಹಾಗೂ ದುಂಡಶಿ ಕಡಗೆ ಬಸ್‌ ಸಂಚಾರ ಪುನರ್‌ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ತಹಸೀಲ್ದಾರ್‌ ಸಂತೋಷ ಹಿರೇಮಠ ಹಾಗೂ ಸಿಪಿಐ ಸುರೇಶ ಕುಂಬಾರ ತಡಸ ಪಿಎಸ್‌ಐ ಆನಂದ ನಾಯ್ಕ, ಸವಣೂರ ಬಸ್‌ ಘಟಕ ವ್ಯವಸ್ಥಾಪಕರು ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಪ್ರತಿಭಟನಾ ನಿರತರ ಮನವಿಯನ್ನು ಆಲಿಸಿ ಕೂಡಲೆ ಬಸ್‌ ಸಂಚಾರ ಪ್ರಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯತ್ತು ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶಂಕರ ಬಡಿಗೇರ, ಸಿದ್ದಯ್ಯ ಹಿರೇಮಠ, ಜಬರಖಾನ್ ಪಠಾಣ, ಈರಣ್ಣ ಸಮಗೊಂಡಾ, ರಾಮು ಗೌಳಿ, ಹನಮಂತಪ್ಪಾ ಮಟ್ಟಿಮನಿ, ಅಜಿಜಸಾಬ ನದಾಫ, ಲೀಲಾವತಿ ಪಡತಾರೆ, ಗುಡಪ್ಪಾ ಮ್ಯಾಗಿನಮನಿ, ವೆಂಕಟೇಶ ಇಂಗಳೆ, ಅದ್ದು ಕೊಲ್ಲಾಪೂರ, ನಾರಾಯಣ ಬಡಿಗೇರ, ಮಹಾವೀರ ಹಳ್ಳಿ, ಮಹ್ಮದ ಇಂಗಳಿಗಿ, ದಾವಲಸಾಬ ಸಿಕಂದರ, ಈರಣ್ಣ ಬೋಸಲೆ, ಮಾರುತಿ ರಾವ ಪಾಟೀಲ, ಗಂಗಾರಾವ ಜೋರೆ, ಶಿವಾಜಿ ರಾವ ಬೋಸಲೆ, ಶೋಭ ಬೋಸಲೆ, ದೀಪಾ ನಿಂಬಳಿಕರ, ವಿಠಲ ನಲವಡಿ, ಬಸವರಾಜ ಕುರಬರ, ಸುನೀತ ಗೌಳಿ, ರಮೇಶ ಪಾಟೀಲ, ಶಶಿಕಲಾ ಗೌಳಿ, ಸಾವಿತ್ರಿ ನಿಂಬಾಲಕರ, ಅಕ್ಕಮ್ಮಾ ಗೌಳಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ