ಕಾರ್ಕಳ: ವಿದ್ಯಾಪೋಷಕ್‌ನ ೬೧ನೇ ಮನೆ ಹಸ್ತಾಂತರ

KannadaprabhaNewsNetwork |  
Published : Jan 08, 2025, 12:16 AM IST
07ವಿದ್ಯಾಪೋಷಕ್‌ | Kannada Prabha

ಸಾರಾಂಶ

ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ ಯೋಜನೆಯ ಪ್ರಥಮ ಪಿಯು ವಿದ್ಯಾರ್ಥಿ, ಕಾರ್ಕಳದ ಪರಪ್ಪಾಡಿಯಲ್ಲಿ ಪ್ರಶಾಂತ ಎಂಬಾತನಿಗೆ, ಸುರತ್ಕಲ್‌ನ ಕುಮಾರಚಂದ್ರ ರಾವ್ ಅವರು ತಮ್ಮ ಪತ್ನಿಯ ನೆನಪಿನಲ್ಲಿ ನಿರ್ಮಿಸಿದ ‘ಜಯಲಕ್ಷ್ಮೀ’ ಮನೆಯನ್ನು ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ ಯೋಜನೆಯ ಪ್ರಥಮ ಪಿಯು ವಿದ್ಯಾರ್ಥಿ, ಕಾರ್ಕಳದ ಪರಪ್ಪಾಡಿಯಲ್ಲಿ ಪ್ರಶಾಂತ ಎಂಬಾತನಿಗೆ, ಸುರತ್ಕಲ್‌ನ ಕುಮಾರಚಂದ್ರ ರಾವ್ ಅವರು ತಮ್ಮ ಪತ್ನಿಯ ನೆನಪಿನಲ್ಲಿ ನಿರ್ಮಿಸಿದ ‘ಜಯಲಕ್ಷ್ಮೀ’ ಮನೆಯನ್ನು ಹಸ್ತಾಂತರಿಸಿದರು.

ಪರೋಪಕಾರಿಯಾಗಿ ಬಾಳಿದ ನನ್ನ ಮಡದಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದಳು. ಈ ಮನೆ ನಿರ್ಮಿಸುವ ಮೂಲಕ ಆಕೆಯ ಸಂಕಲ್ಪ ನೆರವೇರಿಸಿದಂತಾಯಿತು ಎಂದು ಈ ಸಂದರ್ಭ ಕುಮಾರಚಂದ್ರ ರಾವ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಲಾರಂಗದ ಕಾರ್ಯಕರ್ತರ ತಂಡ ಮೌನವಾಗಿ ಮಾಡುತ್ತಿರುವ ಕೆಲಸಗಳು ಸಾಮಾಜಿಕ ಸಂಘಟನೆಗಳಿಗೆ ಮಾದರಿಯಾಗಿವೆ ಎಂದರು.

ನಿವೃತ್ತ ಮುಖ್ಯೋಪಾಧ್ಯಾಯರು, ಶ್ರೇಷ್ಠ ಗಮಿಕಿಗಳೂ ಆಗಿದ್ದ ಕುಮಾರ ಚಂದ್ರರ ಸಹೋದರ ಪಿ.ಸಿ. ವಾಸುದೇವ ರಾವ್ ಅವರ ಪುತ್ರಿಯರಾದ ಸುಮಂಗಲಾ ಆರ್. ರಾವ್, ಸುಭದ್ರಾ ರಾವ್ ಮತ್ತು ಅಳಿಯಂದಿರಾದ ರಘುಪತಿ ರಾವ್, ರವಿರಾಜ್ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು.

ಕಲಾರಂಗದ ಉಪಾಧ್ಯಕ್ಷ ಎಸ್.ವಿ. ಭಟ್, ಸದಸ್ಯರಾದ ಯು.ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಎ. ಅನಂತರಾಜ ಉಪಾಧ್ಯ, ನಟರಾಜ ಉಪಾಧ್ಯಾಯ, ವಿದ್ಯಾಪ್ರಸಾದ್, ದಿನೇಶ ಪಿ. ಪೂಜಾರಿ, ಅಶೋಕ ಎಂ.ಕೆ., ಅಜಿತ್ ಕುಮಾರ್, ಗಣೇಶ ಬ್ರಹ್ಮಾವರ, ದಾನಿಗಳಾದ ಚಂದ್ರಕಲಾ ಎಂ. ರಾವ್, ವೈಜಯಂತಿ ಕಾಮತ್ ಮತ್ತು ಪಂಚಾಯಿತಿ ಅಧ್ಯಕ್ಷರಾದ ಅಶೋಕ ಪೂಜಾರಿ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್.ಎನ್. ಶೃಂಗೇಶ್ವರ್ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!