ಕಾರ್ಕಳ ಮಿಯ್ಯಾರು ಕಂಬಳಕ್ಕೆ ಚಾಲನೆ

KannadaprabhaNewsNetwork |  
Published : Jan 04, 2026, 03:15 AM IST
32 | Kannada Prabha

ಸಾರಾಂಶ

ಕಾರ್ಕಳದ ಮಿಯ್ಯಾರಿನಲ್ಲಿ ನಡೆದ ಕಂಬಳಕ್ಕೆಕಂಬಳದ ಕರೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಯಿತು. ಶಾಸಕ ಸುನೀಲ್ ಕುಮಾರ್ ಜ್ಯೋತಿ ಬೆಳಗಿಸಿ ಕಂಬಳ ಉದ್ಘಾಟಿಸಿದರು.

ಕಾರ್ಕಳ: ಕಾರ್ಕಳದ ಮಿಯ್ಯಾರಿನಲ್ಲಿ ನಡೆದ ಲವ ಕಂಬಳಕ್ಕೆ ಕಂಬಳದ ಕೆರೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಯಿತು. ಬಳಿಕ ಶಾಸಕ ವಿ. ಸುನೀಲ್ ಕುಮಾರ್ ಅವರು ಜ್ಯೋತಿ ಬೆಳಗಿಸಿ ಕಂಬಳ ಉದ್ಘಾಟಿಸಿದರು.ವೇದಿಕೆಯಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್, ಮಿಯ್ಯಾರು ಚರ್ಚ್ ಧರ್ಮಗುರು ರೆ. ಫಾ. ಕ್ಯಾನ್ವಿಟ್ ಬರ್ಬೋಜಾ, ಮಿಯ್ಯಾರು ಲವ ಕುಶ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಜೀವನ್ ದಾಸ್ ಅಡ್ಯಂತಾಯ, ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗೂ ಕಂಬಳದ ಭೀಷ್ಮ ಪ್ರೊ. ಗುಣಪಾಲ್ ಕಡಂಬ, ಕೋಶಾಧಿಕಾರಿ ಶ್ಯಾಮ್ ಎನ್. ಶೆಟ್ಟಿ, ಸಹ ಕೋಶಾಧಿಕಾರಿ ರವೀಂದ್ರ ಕುಮಾರ್ ಕುಕ್ಕುಂದೂರು, ಕಾರ್ಯದರ್ಶಿ ದಯಾನಂದ ಬಂಗೇರ, ಉಪಾಧ್ಯಕ್ಷ ಅಂಥೋನಿ ಡಿಸೋಜಾ ನಕ್ರೆ, ಉದಯ ಎಸ್. ಕೋಟ್ಯಾನ್, ಜೊತೆ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ ಉಪಸ್ಥಿತರಿದ್ದರು.

ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಬಜಗೋಳಿ, ಉದ್ಯಮಿ ಸುನಿಲ್ ಬಜಗೋಳಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಬಿಜೆಪಿ ಅಧ್ಯಕ್ಷ ನವೀನ್ ನಾಯ್ಕ್, ಮಿಯ್ಯಾರು ಗ್ರಾ.ಪಂ. ಅಧ್ಯಕ್ಷೆ ಸನ್ಮತಿ ನಾಯಕ್ ಹಾಗೂ ಸದಸ್ಯರಾದ ಮಾಧವ ಕಾಮತ್, ಸ್ವರ್ಣ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಬ್ಬೀರ್ ಅಹ್ಮದ್ (ಮಿಯ್ಯಾರು), ಮುಂಬೈ ಉದ್ಯಮಿ ಅರುಣ್ ಮಹಾಬಲ ಪೂಜಾರಿ, ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಬಿ.ಆರ್. ಮಂಜಪ್ಪ, ಕಾರ್ಕಳ ನಗರ ಠಾಣಾ ಪಿಎಸ್ಐ ಮುರಳೀಧರ, ಪಿಎಸ್ಐ ಶಿವಕುಮಾರ್ ಎಸ್.ಆರ್., ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ, ಉದ್ಯಮಿಗಳಾದ ಜಯರಾಮ್ ಪ್ರಭು, ಉಮೇಶ್ ರಾವ್ ಚಿರಾಗ್, ರಾಜು ಎಂ. ಶೆಟ್ಟಿ, ನಿತೇಶ್ ಕುಮಾರ್, ಪ್ರಮೋದ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದೇ ವರ್ಷದಲ್ಲಿ ರನ್ಯಾಳಿಂದ 1.27 ಕ್ವಿಂಟಲ್‌ ಚಿನ್ನ ಸ್ಮಗ್ಲಿಂಗ್!
ತಾಂತ್ರಿಕ ಶಿಕ್ಷಣದ ಕೊರತೆ ನೀಗಿಸಲು ಶ್ರಮಿಸಿ