ಕಾರ್ಕಳ–ಹೆಬ್ರಿಯಲ್ಲಿ ಭಾರಿ ಮಳೆ: ಮನೆಗಳಿಗೆ ಹಾನಿ, ಲಕ್ಷಾಂತರ ನಷ್ಟ

KannadaprabhaNewsNetwork |  
Published : Mar 26, 2026, 02:45 AM IST
ಪೆಟ್ರೋಲ್‌ ಬಂಕ್‌ಗಳಲ್ಲಿ ರಶ್‌ | Kannada Prabha

ಸಾರಾಂಶ

ಕಾರ್ಕಳ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಸಿಡಿಲಿನ ಪರಿಣಾಮವಾಗಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.

ಕಾರ್ಕಳ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಸಿಡಿಲಿನ ಪರಿಣಾಮವಾಗಿ ಹಲವಾರು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.

ಎರ್ಲಪಾಡಿ ಗ್ರಾಮದ ಸುಶೀಲಾ ಶೆಟ್ಟಿ ಅವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು, ಸುಮಾರು ₹70,000 ನಷ್ಟ ಉಂಟಾಗಿದೆ. ಕಡ್ತಲ ಗ್ರಾಮದ ಸುಶೀಲಾ ಕೊ ಶೀನ ಅವರ ಮನೆ ಮಳೆಯಿಂದ ಹಾನಿಗೊಳಗಾಗಿ ₹15,000 ನಷ್ಟವಾಗಿದೆ. ಕೆರುವಾಶೆ ಗ್ರಾಮದ ಯುವರಾಜ್ ಭಂಡಾರಿ ಅವರ ಮನೆಗೆ ಸಿಡಿಲು ಬಡಿದು ಸುಮಾರು ₹20,000 ಹಾನಿ ಸಂಭವಿಸಿದೆ.

ಇನ್ನು ಹೆಬ್ರಿ ತಾಲೂಕಿನ ಅಂಡಾರು ಗ್ರಾಮದ ಸುರೇಶ್ ಸೇರ್ವೆಗಾರ್ (ಬಿನ್ ಶ್ರೀನಿವಾಸ ಸೇರ್ವೆಗಾರ್) ಅವರ ಮನೆಗೂ ಮಳೆಯಿಂದ ಹಾನಿಯಾಗಿದ್ದು, ₹80,000 ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಭಾರಿ ಮಳೆಯ ಹಿನ್ನೆಲೆ ಕಾರ್ಕಳ ತಾಲೂಕಿನಲ್ಲಿ 6.2 ಸೆ.ಮೀ. ಮಳೆಯಾಗಿದ್ದು, ಹೆಬ್ರಿ ತಾಲೂಕಿನಲ್ಲಿ 4.7 ಸೆ.ಮೀ. ಮಳೆಯಾಗಿದೆ. ಮಳೆಯ ತೀವ್ರತೆಯಿಂದಾಗಿ ಕೆಲವೆಡೆ ಮರಗಳು ಬಿದ್ದು, ಸಿಡಿಲು ಬಡಿದ ಪರಿಣಾಮ ಮನೆಗಳಿಗೆ ಹಾನಿ ಉಂಟಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಸ್ವಾವಲಂಬಿ ಜೀವನ ಗ್ರಾಮೀಣ ಅಭಿವೃದ್ಧಿಗೆ ಪೂರಕ
ಕಿತ್ತು ಹೋದ ತೂಬು: ಜೀವ ಜಲ ಪೋಲು