ಕಾರ್ಕಳದಲ್ಲಿ 2027ರಲ್ಲಿ ಐತಿಹಾಸಿಕ ಶ್ರೀ ಬಾಹುಬಲಿ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ದೇಶ ವಿದೇಶಗಳಿಂದ ಸಹಸ್ರಾರು ಯಾತ್ರಾರ್ಥಿಗಳು, ಪ್ರವಾಸಿಗರು ಕಾರ್ಕಳ ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಕಾರ್ಕಳ: ಕಾರ್ಕಳದಲ್ಲಿ 2027ರಲ್ಲಿ ಐತಿಹಾಸಿಕ ಶ್ರೀ ಬಾಹುಬಲಿ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ದೇಶ ವಿದೇಶಗಳಿಂದ ಸಹಸ್ರಾರು ಯಾತ್ರಾರ್ಥಿಗಳು, ಪ್ರವಾಸಿಗರು ಕಾರ್ಕಳ ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರ್‍ಯಕ್ರಮದ ಪೂರ್ವಭಾವಿಯಾಗಿ ಶ್ರೀ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಮಹಾವೀರ ಹೆಗ್ಡೆ ಅವರ ನೇತೃತ್ವದಲ್ಲಿ ಮಾಜಿ ಸಚಿವ, ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಹಾಗೂ ಸಮುದಾಯದ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು.ಈ ಹಿನ್ನೆಲೆಯಲ್ಲಿ ಕಾರ್ಕಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅನೇಕ ಜೈನ ಬಸದಿಗಳು, ಕೆರೆಗಳು, ದೇವಸ್ಥಾನಗಳು, ಯಾತ್ರಿ ನಿವಾಸಗಳ ಜೊತೆಗೆ ಅನೇಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ವಿವಿಧ ಕಾಮಗಾರಿಗಳು ಮತ್ತು ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ದೃಷ್ಠಿಯಲ್ಲಿ, ಜೊತೆಗೆ ಕಾರ್‍ಯಕ್ರಮದ ಯಶಸ್ಸಿನ ಉದ್ದೇಶದಿಂದ ಜೈನ ಸಮಾಜದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಹಿರಿಯರಾದ ಅನಂತರಾಜ ಪೂವಣಿ, ಮೋಹನ್ ಪಡಿವಾಳ್ , ಸಿಎ ಪ್ರಭಾತ್ ಕುಮಾರ್, ಎಂ.ಕೆ. ಸುವ್ರತ್ ಕುಮಾರ್, ಸುನಿಲ್ ಕುಮಾರ್ ಬಜಗೋಳಿ, ಭರತ್ ಕುಮಾರ್ ಜೈನ್ ಇರ್ವತ್ತೂರು, ಶೀತಲ್ ಜೈನ್ ಶಿರ್ಲಾಲು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.