ಕರ್ಕೇಶ್ವರ ಗ್ರಾಪಂಗೆ ಮಕ್ಕಳ ಬೇಸಿಗೆ ಬೆಸುಗೆ ಶಿಬಿರದಲ್ಲಿ ಮೊದಲ ಸ್ಥಾನ

KannadaprabhaNewsNetwork |  
Published : Jul 23, 2026, 02:00 AM IST
 ಚಿಕ್ಕಮಗಳೂರಿನಲ್ಲಿ ನಡೆದ ಪಂಚಾಯತ್ ರಾಜ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ನರಸಿಂಹರಾಜಪುರ ತಾಲೂಕಿನ  ಕರ್ಕೇಶ್ವರ ಗ್ರಾಮ ಪಂಚಾಯಿತಿಗೆ ಬೇಸಿಗೆ ಬೆಸುಗೆ ಶಿಬಿರ ಅತ್ಯುತ್ತಮವಾಗಿ ಆಯೋಜನೆ ಮಾಡಿರುವುದರಿಂದ ಜಿಲ್ಲೆಯಲ್ಲೇ ಪ್ರಥಮ ಸ್ಥಾನದ ಪ್ರಶಸ್ತಿಯನ್ನು  ಜಿಲ್ಲಾಧಿಕಾರಿ ಬನ್ವರ್ ಸಿಂಗ್, ಜಿಲ್ಲಾ ಪಂಚಾಯಿತಿ ಸಿ.ಓ.ಕೀರ್ತನಾ ಅವರು ತಾಲೂಕು ಪಂಚಾಯಿತಿ ಇ.ಓ ನವೀನ್ ಕುಮಾರ್ ಅವರಿಗೆ ವಿತರಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರತಾಲೂಕಿನ ಕರ್ಕೇಶ್ವರ ಗ್ರಾ.ಪಂ ಈ ಬಾರಿ ಬೇಸಿಗೆಯಲ್ಲಿ ಗ್ರಂಥಾಲಯ ಮಕ್ಕಳಿಗೆ ಉತ್ತಮವಾಗಿ ಆಯೋಜಿಸಿದ್ದ ಬೇಸಿಗೆ ಬೆಸುಗೆ ಶಿಬಿರ ಅತ್ಯಂತ ಯಶಸ್ವಿಯಾಗಿದ್ದರಿಂದ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದೆ ಎಂದು ತಾ.ಪಂ. ಇಓ ಎಚ್.ಡಿ. ನವೀನ್‌ಕುಮಾರ್ ತಿಳಿಸಿದ್ದಾರೆ.

ತಾ.ಪಂ. ಇಓ ಎಚ್.ಡಿ. ನವೀನ್‌ಕುಮಾರ್ ಮಾಹಿತಿ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ತಾಲೂಕಿನ ಕರ್ಕೇಶ್ವರ ಗ್ರಾ.ಪಂ ಈ ಬಾರಿ ಬೇಸಿಗೆಯಲ್ಲಿ ಗ್ರಂಥಾಲಯ ಮಕ್ಕಳಿಗೆ ಉತ್ತಮವಾಗಿ ಆಯೋಜಿಸಿದ್ದ ಬೇಸಿಗೆ ಬೆಸುಗೆ ಶಿಬಿರ ಅತ್ಯಂತ ಯಶಸ್ವಿಯಾಗಿದ್ದರಿಂದ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದೆ ಎಂದು ತಾ.ಪಂ. ಇಓ ಎಚ್.ಡಿ. ನವೀನ್‌ಕುಮಾರ್ ತಿಳಿಸಿದ್ದಾರೆ.

ತಾಲೂಕು ಮಟ್ಟದಲ್ಲಿ ಎಲ್ಲಾ ಗ್ರಾಪಂಗಳ ಬೇಸಿಗೆ ಬೆಸುಗೆ ಚಟುವಕೆ ಪರಿಶೀಲಿಸಿದಾಗ ತಾಲೂಕು ಮಟ್ಟದಲ್ಲೂ ಕರ್ಕೇಶ್ವರ ಗ್ರಾ.ಪಂಯೇ ಮೊದಲ ಸ್ಥಾನ ಪಡೆದಿದೆ. ನಂತರ ಜಿಲ್ಲಾ ಮಟ್ಟಕ್ಕೂ ಶಿಫಾರಸ್ಸು ಮಾಡಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಕರ್ಕೇ ಶ್ವರ ಗ್ರಾಪಂ ಗ್ರಂಥಾಲಯದಲ್ಲಿ ಬೇಸಿಗೆ ಬೆಸುಗೆ ಆಯೋಜಿಸಿದ್ದ ಚಟುವಟಿಕೆ ಪರಿಶೀಲಿಸಿ ಕಾರ್ಯಕ್ರಮದ ಮಾನ ದಂಡಗಳ ಪ್ರಕಾರ ಜಿಲ್ಲಾ ಮಟ್ಟದಲ್ಲೂ ಪ್ರಥಮ ಸ್ಥಾನ ಗಳಿಸಿರುವುದು ತಾಲೂಕಿಗೇ ಹೆಮ್ಮೆಯ ವಿಷಯ.

ಹಾಗೆಯೇ ತಾಲೂಕಿನ ಬಿ.ಕಣಬೂರು ಗ್ರಾ.ಪಂ ಉತ್ತಮ ಬೇಸಿಗೆ ಬೆಸುಗೆ ಶಿಬಿರಕ್ಕೆ ಪ್ರಶಸ್ತಿ ಪಡೆದಿದೆ. ಗ್ರಾ.ಪಂಗಳ ಗ್ರಾಮಸ್ಥರು, ಮಾಜಿ ಜನಪ್ರತಿನಿಧಿಗಳು , ಪಿಡಿಒ ಹಾಗೂ ಗ್ರಂಥಾಲಯದ ಮೇಲ್ವಿಚಾರಕರ ಸಹಕಾರದಿಂದ ಶಿಬಿರ ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.ಕಂದಾಯ ವಸೂಲಾತಿಯಲ್ಲಿ ಬಿ.ಕಣಬೂರು ಗ್ರಾಪಂ ಜಿಲ್ಲೆಗೆ ಅತೀ ಹೆಚ್ಚು ಕಂದಾಯ ವಸೂಲಿ ₹86,15,745 ಹಾಗೂ ಕರ್ಕೇಶ್ವರ ಮತ್ತು ಬಾಳೆ ಗ್ರಾಪಂಗಳು ಶೇಕಡವಾರು ವಸೂಲಾತಿ ಯಲ್ಲಿ ಜಿಲ್ಲೆಗೆ ಶೇ. 100 ರಷ್ಟು ವಸೂಲಿ ಮಾಡಿದ ಪ್ರಶಸ್ತಿ ಪಡೆದಿದೆ. ಕಳೆದ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲೆಗೆ 2025-26 ನೇ ಸಾಲಿಗೆ ವಾರ್ಷಿಕ ಗುರಿ 1,20,000 ಮಾನವ ದಿನಕ್ಕೆ 1,17,785 ಮಾನವ ದಿನ ಶ್ರಮಿಸಿ ಶೇ. 98 ರಷ್ಟು ಪ್ರಗತಿ ಸಾಧಿಸಿ ಜಿಲ್ಲೆಗೆ 2ನೇ ಸ್ಥಾನದ ಪ್ರಶಸ್ತಿ ಲಭಿಸಿದೆ. ನರೇಗಾ ಯೋಜನೆಯಲ್ಲಿನ ಉತ್ತಮ ಪ್ರಗತಿಗೆ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ್ ಗೆ ತೃತೀಯ ಸ್ಥಾನದ ಲಭಿಸಿದೆ. ಈ ಪ್ರಶಸ್ತಿ ಮುಡಿಗೇರಿಸಿಕೊಂಡ ಗ್ರಾ.ಪಂ. ಪಿಡಿಓ, ಸಿಬ್ಬಂದಿ ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಅಭಿನಂದನೆ ತಿಳಿಸಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಪೊಲೀಸ್‌ ಇಲಾಖೆ ಹದ್ದಿನಕಣ್ಣು
ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ಸರ್ವರ್‌ ಕಿರಿಕಿರಿ!