ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ, ಮಹಿಳಾ ಮಂಡಳಿ ಸನ್ಮಾನ

KannadaprabhaNewsNetwork | Published : Mar 2, 2025 1:21 AM

ಸಾರಾಂಶ

ಮೂಲ್ಕಿಯ ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿ ವತಿಯಿಂದ ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ವೇದಿಕೆಯಲ್ಲಿ 41ನೇ ವರ್ಷದ ಮಹಾಶಿವರಾತ್ರಿ -2025 ಪ್ರಯುಕ್ತ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಲು ಸಾಧ್ಯವೆಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ ಹೇಳಿದ್ದಾರೆ.

ಮೂಲ್ಕಿಯ ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿ ವತಿಯಿಂದ ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ವೇದಿಕೆಯಲ್ಲಿ 41ನೇ ವರ್ಷದ ಮಹಾಶಿವರಾತ್ರಿ -2025 ಪ್ರಯುಕ್ತ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಎಚ್ ಅರವಿಂದ ಪೂಂಜಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಭಾರತಿಯ ಸೇನೆಯ ನಿವೃತ್ತ ಸುಬೇದಾರ್ ಮೇಜರ್ ನಾರಾಯಣ ರೈ ಕುಬೆವೂರು, ಖ್ಯಾತ ಕ್ರಿಕೆಟ್ ಆಟಗಾರ ನಿತಿನ್ ಮೂಲ್ಕಿ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಜಯರಾಜ್ ಹಾಗೂ ಸಂಸ್ಥೆಯ ಹಿರಿಯ ಸದಸ್ಯ ದಯಾನಂದ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ಶ್ರೇಷ್ಠ ಸಾಧಕರಾದ ಯಶ್ವಿತ್ ಡಿ ಕಾಂಚನ್ ಚಿತ್ರಾಪು, ಹರ್ಷಿತಾ ಎಸ್ ಎಸ್ ಬಪ್ಪನಾಡು, ಪ್ರಜ್ಞಾ ಎನ್ , ಎಸ್‌ವಿಟಿ, ಆಶ್ರಯ ಎಲ್. ಸುವರ್ಣ, ದಿಶಾ ಆರ್ ಶೆಟ್ಟಿ ಸಮೀಕ್ಷಾ ಎ ಕೋಟ್ಯಾನ್ ಕಾರ್ನಾಡ್ ಅವರನ್ನು ಗೌರವಿಸಲಾಯಿತು.

ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮುಂಬೈ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಭಾಸ್ಕರ ಎಂ.ಸಾಲ್ಯಾನ್, ಉದ್ಯಮಿಗಳಾದ ಅರುಣ್ ಕುಮಾರ್ ಶರ್ಮಾ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಗ್ರಾಮ ಸಮಿತಿ ಗೌರವಾಧ್ಯಕ್ಷ ಗುಣನಾಥ ಜಿ ಬಂಗೇರ, ನಿವೃತ್ತ ಅರಣ್ಯ ಅಧಿಕಾರಿ ರಮಾನಂದ ಎಸ್ ರಾವ್ ಕಾರ್ನಾಡ್, ಕಾರ್ನಾಡ್ ಶ್ರೀ ಹರಿಹರ ಕ್ಷೇತ್ರದ ಮೊಕ್ತೇಸರ ರಾಘವೇಂದ್ರ ಟಿ, ಯುವಕ ವೃಂದದ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಕಾರ್ಯದರ್ಶಿ ವಸಂತ್ ಕೋಟ್ಯಾನ್, ಮಹಿಳಾ ಮಂಡಳಿ ಉಪಾಧ್ಯಕ್ಷೆ ರೇವತಿ ಎನ್ ಪೂಜಾರಿ, ಕಾರ್ಯದರ್ಶಿ ಗೀತಾ ಎಚ್ ಸಾಲ್ಯಾನ್, ಸುರೇಶ್ ರಾವ್, ಸುದರ್ಶನ್ ಭಟ್, ಶೈಲೇಶ್ ಶೆಟ್ಟಿ, ದೀಪಕ್ ಪಡುಬೈಲು, ಕಿಶೋರ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಕೋಲ್ನಾಡ್ ನಿರೂಪಿಸಿದರು.

Share this article