ಕನ್ನಡಪ್ರಭ ವಾರ್ತೆ ಮಂಗಳೂರು
ಶನಿವಾರ ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯು 1500 ಕೋಟಿ ರು.ಗಳಲ್ಲಿ ಬಾಕಿ ಉಳಿದ 700 ಕೋಟಿ ರು.ಗಳನ್ನು ಸಂಗ್ರಹಿಸಲು ಅನುಮೋದನೆ ನೀಡಿದೆ. ಆದ್ಯತೆಯ ವಿಧಾನಗಳ ಮೂಲಕ 100 ಕೋಟಿ ರು.ವರೆಗಿನ ಮೊತ್ತ ಮತ್ತು 600 ಕೋಟಿ ರು.ಗಳನ್ನು ಕಾನೂನು ಅನುಮತಿಸಿದ ವಿಧಾನಗಳ ಮೂಲಕ ಸಂಗ್ರಹಿಸಲು ಅನುಮೋದಿಸಿದೆ.
ಆದ್ಯತೆಯ ಆಧಾರದಲ್ಲಿ 10 ರು. ಮುಖಬೆಲೆಯ 37,72,730 ಈಕ್ವಿಟಿ ಷೇರುಗಳನ್ನು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್‌ಗೆ, ಪ್ರತಿ ಈಕ್ವಿಟಿ ಷೇರಿಗೆ (ಪ್ರೀಮಿಯಂ ಸೇರಿದಂತೆ) 265.06 ರು. ದರದಲ್ಲಿ ವಿತರಿಸಲು ಅನುಮೋದಿಸಲಾಗಿದೆ. ಉಳಿದಂತೆ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ-2015ರ ನಿಯಮಗಳ ಪ್ರಕಾರ ಅನುಮತಿಸಲಾದ ಹೂಡಿಕೆದಾರರಿಗೆ 10 ರು. ಮುಖಬೆಲೆಯ ಈಕ್ವಿಟಿ ಷೇರುಗಳನ್ನು ವಿತರಿಸಲು ಮತ್ತು ಹಂಚಿಕೆ ಮಾಡಲು ಮಂಡಳಿಯು ಅನುಮೋದಿಸಿದೆ.ಈ ಪ್ರಸ್ತಾವಿತ ವಿಚಾರವು ಬ್ಯಾಂಕಿನ ಭವಿಷ್ಯದ ಬೆಳವಣಿಗೆಗೆ ತನ್ನ ಆರ್ಥಿಕ ಅಡಿಪಾಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರ ಆದಾಯವನ್ನು ಬೆಳೆಯುತ್ತಿರುವ ದೀರ್ಘಾವಧಿಯ ಬಂಡವಾಳ ಅಗತ್ಯತೆ ಸೇರಿದಂತೆ ಬ್ಯಾಂಕಿನ ವ್ಯವಹಾರದ ಅಗತ್ಯತೆಗಳನ್ನು ಪೂರೈಸಲು ಬಳಸಲಾಗುತ್ತದೆ.
ಕರ್ಣಾಟಕ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮಾತನಾಡಿ, ಉದ್ದೇಶಿತ ಬಂಡವಾಳ ಹೆಚ್ಚಳದಿಂದ ಬ್ಯಾಂಕ್‌ನ ಬೆಳವಣಿಗೆ ಮತ್ತು ನಾವೀನ್ಯತೆಯ ಪ್ರಯಾಣವು ಮತ್ತಷ್ಟು ವೇಗ ಪಡೆಯಲಿದೆ. ಬ್ಯಾಂಕ್‌ನ ಬೆಳವಣಿಗೆಗೆ ಹೊಸ ಆಯ್ಕೆಗಳನ್ನು ಅನ್ವೇಷಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು, ಡಿಜಿಟಲ್ ರೂಪಾಂತರವನ್ನು ಅಳವಡಿಸಿಕೊಳ್ಳಲು, ಪಾಲುದಾರಿಕೆಗಳನ್ನು ಬೆಂಬಲಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.