ಕರ್ಣಾಟಕ ಬ್ಯಾಂಕ್‌ ಪ್ರಥಮ ತ್ರೈಮಾಸಿಕ: 400.33 ಕೋಟಿ ರು. ನಿವ್ವಳ ಲಾಭ ದಾಖಲೆ

KannadaprabhaNewsNetwork |  
Published : Jul 25, 2024, 01:25 AM IST
ಕೆಬಿಎಲ್‌ ಎಂಡಿ ಶ್ರೀಕೃಷ್ಣನ್‌ | Kannada Prabha

ಸಾರಾಂಶ

ಒಟ್ಟು 1,00164 ಕೋಟಿ ರು. ಠೇವಣಿ ಗಳಿಸಿದ್ದು, ಕಳೆದ ಅವಧಿಯಲ್ಲಿ 86,960 ಕೋಟಿ ರು. ಠೇವಣಿ ಹೊಂದಿತ್ತು, ಶೇ.15.18 ಪ್ರಗತಿ ಸಾಧಿಸಿದೆ

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ಣಾಟಕ ಬ್ಯಾಂಕ್‌ 2024-25ನೇ ಹಣಕಾಸು ವರ್ಷದಲ್ಲಿ ಜೂನ್‌ ಅಂತ್ಯದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 400.33 ಕೋಟಿ ರು.ಗಳ ದಾಖಲೆಯ ನಿವ್ವಳ ಲಾಭ ಗಳಿಸಿದೆ.

ಬ್ಯಾಂಕ್‌ನ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ಬುಧವಾರ ವ್ಯವಸ್ಥಾಪಕ ನಿರ್ದೇಶಕ ಶ್ರೀಕೃಷ್ಣನ್‌ ಎಚ್‌. ಅವರ ಅಧ್ಯಕ್ಷತೆಯಲ್ಲಿ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಮೊದಲ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಅನುಮೋದಿಸಲಾಯಿತು. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 370.70 ಕೋಟಿ ರು. ಲಾಭ ಗಳಿಸಿತ್ತು. ಈ ಬಾರಿಗೆ ಹೋಲಿಸಿದರೆ ಶೇ.7.99ರ ಹೆಚ್ಚಳ ಸಾಧಿಸಿದಂತಾಗಿದೆ.

ಒಟ್ಟು 1,00164 ಕೋಟಿ ರು. ಠೇವಣಿ ಗಳಿಸಿದ್ದು, ಕಳೆದ ಅವಧಿಯಲ್ಲಿ 86,960 ಕೋಟಿ ರು. ಠೇವಣಿ ಹೊಂದಿತ್ತು, ಶೇ.15.18 ಪ್ರಗತಿ ಸಾಧಿಸಿದೆ. ಬ್ಯಾಂಕಿನ ಒಟ್ಟು ಮುಂಗಡ 75,455 ಕೋಟಿ ರು. ಆಗಿದ್ದು, ಕಳೆದ ಅವಧಿಯಲ್ಲಿ ಇದು 63,012 ಕೋಟಿ ರು. ಆಗಿದ್ದು, ಈ ಬಾರಿ ಶೇ. 19.75 ಪ್ರಗತಿ ಕಂಡಿದೆ. ಬ್ಯಾಂಕಿನ ನಿರ್ವಹಣಾ ಲಾಭ 558.59 ಕೋಟಿ ರು. ಆಗಿದೆ ಮತ್ತು ನಿವ್ವಳ ಬಡ್ಡಿ ಆದಾಯ 903.36 ಕೋಟಿ ರು. ಆಗಿದೆ. ಇದು ಕಳೆದ ಅವಧಿಗೆ ಹೋಲಿಸಿದರೆ ಶೇ.3.68 ಆಗಿದ್ದು, ಕಳೆದ ಅವಧಿಯಲ್ಲಿ ಇದು ಶೇ. 3.54 ಆಗಿತ್ತು. ಅನುತ್ಪಾದಕ ಸೊತ್ತುಗಳ ಪ್ರಮಾಣ ಶೇ. 1.43ಕ್ಕೆ ಇಳಿಕೆಯಾಗಿದೆ. ಕಳೆದ ಬಾರಿ ಇದು ಶೇ.1.66 ರಷ್ಟಿತ್ತು. ಬ್ಯಾಂಕಿನ ಬಂಡವಾಳ ಅನುಪಾತ ಈ ಬಾರಿ ಶೇ.17.64 ಇದ್ದು, ಕಳೆದ ಬಾರಿ ಶೇ. 17 ಆಗಿತ್ತು. ಈ ಬ್ಯಾಂಕ್‌ 1.75 ಲಕ್ಷ ಕೋಟಿ ರು. ವ್ಯವಹಾರದ ವಹಿವಾಟಿನಲ್ಲಿ ಆರ್ಥಿಕ ಸಾಧನೆಯಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ. ಒಟ್ಟಾರೆಯಾಗಿ 1 ಲಕ್ಷ ಕೋಟಿ ರು. ತಲುಪಿದ್ದೇವೆ. ಠೇವಣಿ ಮತ್ತು ಒಟ್ಟು ಮುಂಗಡಗಳಲ್ಲಿ 75 ಲಕ್ಷ ಕೋಟಿ ರು.ಗಳು. ಈ ದೃಢವಾದ ಕಾರ್ಯಕ್ಷಮತೆಯು ನಮ್ಮ ಡಿಜಿಟಲ್ ಮತ್ತು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವುದರ ದ್ಯೋತಕವಾಗಿದೆ.

-ಶ್ರೀಕೃಷ್ಣನ್‌ ಎಚ್‌., ವ್ಯವಸ್ಥಾಪಕ ನಿರ್ದೇಶಕರು

ಮಾರುಕಟ್ಟೆಯ ಏರಿಳಿತದ ನಡುವೆಯೂ ಈ ಬ್ಯಾಂಕ್ ದೃಢವಾದ ಆರ್ಥಿಕ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಡಿಜಿಟಲ್ ರೂಪಾಂತರ, ಗ್ರಾಹಕ ಸೇವೆ ವರ್ಧನೆ ಮತ್ತು ಹೊಸ ಉತ್ಪನ್ನಗಳ ಬಿಡುಗಡೆಯಂತಹ ಪ್ರಮುಖ ಕ್ಷೇತ್ರಗಳಲ್ಲಿನ ನಮ್ಮ ಕಾರ್ಯತಂತ್ರದ ಉಪಕ್ರಮಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಾರಂಭಿಸಿವೆ. ಈ ವರ್ಷದಲ್ಲಿ ನಾವು ‘ಭಾರತ್ ಕಾ ಕರ್ಣಾಟಕ ಬ್ಯಾಂಕ್’ ಬ್ರ್ಯಾಂಡ್ ಅನ್ನು ಮತ್ತಷ್ಟು ಪುನರುಜ್ಜೀವನಗೊಳಿಸುತ್ತೇವೆ. ನಮ್ಮ ಡಿಜಿಟಲ್ ಕೊಡುಗೆಗಳು ಮತ್ತು ಉಪಸ್ಥಿತಿಯನ್ನು ಸುಧಾರಿಸುತ್ತೇವೆ.

-ಶೇಖರ ರಾವ್‌, ಕಾರ್ಯನಿರ್ವಾಹಕ ನಿರ್ದೇಶಕರು

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?