ಕರ್ಣಾಟಕ ಬ್ಯಾಂಕ್‌: ಒಎನ್‌ಡಿಸಿ ವೈಯಕ್ತಿಕ ಸಾಲ ಸೌಲಭ್ಯ ಜಾರಿ

KannadaprabhaNewsNetwork |  
Published : Aug 31, 2024, 01:40 AM IST
11 | Kannada Prabha

ಸಾರಾಂಶ

ಒಎನ್‌ಡಿಸಿ ನೆಟ್‌ವರ್ಕ್‌ನಲ್ಲಿ ಖರೀದಿದಾರರ ಆ್ಯಪ್‌ ಗಳ ಮೂಲಕ ವೈಯಕ್ತಿಕ ಸಾಲಗಳನ್ನು ನೀಡುಲಿದೆ. ಇದು ಬ್ಯಾಂಕ್‌ನ ಹಾಲಿ ಗ್ರಾಹಕರಿಗೆ ಮಾತ್ರವಲ್ಲ ಹೊಸ ಗ್ರಾಹಕರಿಗೂ ಅನ್ವಯವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಖಾಸಗಿ ರಂಗದ ಅಗ್ರಗಣ್ಯ ಬ್ಯಾಂಕ್‌ ಆಗಿರುವ ಕರ್ಣಾಟಕ ಬ್ಯಾಂಕ್‌ ಓಪನ್ ನೆಟ್‌ವರ್ಕ್‌ನಲ್ಲಿ ಸಾಲವನ್ನು ನೀಡುವ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಗ್ರಾಹಕರಿಗೆ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್(ಒಎನ್‌ಡಿಸಿ) ಅಡಿಯಲ್ಲಿ ವೈಯಕ್ತಿಕ ಸಾಲ ಸೌಲಭ್ಯವನ್ನು ಘೋಷಿಸಿದೆ.

ಒಎನ್‌ಡಿಸಿ ನೆಟ್‌ವರ್ಕ್‌ನಲ್ಲಿ ಖರೀದಿದಾರರ ಆ್ಯಪ್‌ ಗಳ ಮೂಲಕ ವೈಯಕ್ತಿಕ ಸಾಲಗಳನ್ನು ನೀಡುಲಿದೆ. ಇದು ಬ್ಯಾಂಕ್‌ನ ಹಾಲಿ ಗ್ರಾಹಕರಿಗೆ ಮಾತ್ರವಲ್ಲ ಹೊಸ ಗ್ರಾಹಕರಿಗೂ ಅನ್ವಯವಾಗಲಿದೆ.

ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್ ಎಚ್, ಕರ್ನಾಟಕ ಬ್ಯಾಂಕ್ ಒಎನ್‌ಡಿಸಿಯ ಹಳಿಗಳಿಗೆ ಸಂಯೋಜಿಸಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದಿದ್ದಾರೆ.

ಕರ್ಣಾಟಕ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ಹಣಕಾಸು ಸೇವೆಗಳಿಗಾಗಿ ಒನ್‌ಡಿಸಿಯ ಆರಂಭಿಕ ಅಳವಡಿಕೆದಾರರಾಗಲು ನಾವು ಉತ್ಸುಕರಾಗಿದ್ದೇವೆ. ಗ್ರಾಹಕರಿಗೆ ಈ ಕೊಡುಗೆ ಉತ್ತಮ ಆಯ್ಕೆಯಾಗಲಿದೆ ಎಂದರು.

ಒನ್‌ಎಡಿಸಿ ಎಂಡಿ ಮತ್ತು ಸಿಇಒ ಟಿ. ಕೋಶಿ, ಒಎನ್‌ಡಿಸಿಯ ಉದ್ದೇಶವು ಆರ್ಥಿಕ ಉತ್ಪನ್ನಗಳ ಕಡಿಮೆ-ವೆಚ್ಚದ ವಿತರಣೆಯನ್ನು ಸಕ್ರಿಯಗೊಳಿಸುವುದು. ಹಾಗೂ ನೆಟ್‌ವರ್ಕ್‌ಗಳನ್ನು ರಚಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಭಾರತದಲ್ಲಿ ಹಣಕಾಸು ಸೇವೆಗಳನ್ನು ಉತ್ತಮಗೊಳಿಸುವುದಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ