ಹಿರೇಕೆರೂರು: ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣವಾಗಿ 50 ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿರುವ ಕರ್ನಾಟಕ ಸಂಭ್ರಮ-50 ರಥ ಬುಧವಾರ ಪಟ್ಟಣಕ್ಕೆ ಆಗಮಿಸಿತು.
ಸಿಇಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಾಟೀಲ್ ಮಾತನಾಡಿ, ಕರ್ನಾಟಕವೆಂದು ನಾಮಕರಣವಾಗಿ 50 ವರ್ಷ ಪೂರೈಸಿದ ಪ್ರಯುಕ್ತ ಕನ್ನಡ ನಾಡಿನಾದ್ಯಂತ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ-50 ರಥ ಕನ್ನಡ ನಾಡು ಸಂಸ್ಕೃತಿ ಹಾಗೂ ವೈವಿಧ್ಯತೆ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕನ್ನಡಿಗರಾದ ನಾವೆಲ್ಲರೂ ಒಂದೆ ಎಂಬ ಸೌಹಾರ್ದ ಸಂದೇಶ ಸಾರುವ ಈ ರಥವು ಕನ್ನಡತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಕರ್ನಾಟಕದ ಎಲ್ಲರ ಮನೆ ಮನ ಬೆಳಗಲಿದೆ. ಕನ್ನಡ ನಮ್ಮ ಉಸಿರು. ಸುಮಾರು 2000 ವರ್ಷಗಳ ಇತಿಹಾಸ ಹೊಂದಿದ ಕರ್ನಾಟಕ ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಭವ್ಯ ಪರಂಪರೆ ಹೊಂದಿದೆ. ಅಂತಹ ಭವ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದೆ ಈ ಕರ್ನಾಟಕ ಸಂಭ್ರಮ-50ರ ಆಶಯವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ಸುರೇಶಕುಮಾರ ಮಾತನಾಡಿ, ವಿವಿಧ ಭಾಷೆಗಳ ಆಧಾರದಲ್ಲಿ ಹಂಚಿಹೋಗಿದ್ದ ಕನ್ನಡ ನೆಲವನ್ನೆಲ್ಲ ಒಗ್ಗೂಡಿಸುವ ಪ್ರಯತ್ನಕ್ಕೆ ಪ್ರೇರಕವಾಗಿ ಕನ್ನಡ, ಕನ್ನಡಿಗರಲ್ಲಿ ಏಕತೆ ಕಾಪಾಡಲು ಈ ಕನ್ನಡ ರಥ ಸಫಲವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾಕರ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮ್‌ರಾಯ್, ಕನ್ನಡ ಸಾಹಿತ್ಯ ಅಭಿಮಾನಿಗಳಾದ ರಮೇಶ ಕೋಡಿಹಳ್ಳಿ, ಬಸವರಾಜ ಚಿಂದಿ, ರಾಮಣ್ಣ ತೆಂಬದ್, ಬಸವರಾಜ ಪೂಜಾರ, ಎಸ್.ಎಚ್. ನರಗುಂದಮಠ, ವೀರಣ್ಣ ಚಿಟ್ಟೂರು, ಬಿ.ಪಿ. ಹಳ್ಳೇರ, ಕೆ.ಆರ್. ಲಮಾಣಿ, ಆರ್.ಎಚ್. ಬೆಟ್ಟಳ್ಳೆರ್, ಆರ್.ಎಚ್. ಪೂಜಾರ, ಆರ್.ಎಂ. ಕರೆಗೌಡ್ರ, ಪಿ.ಎಂ. ಡಮ್ಮಳ್ಳಿ, ಸತೀಶ ಬಣಕಾರ, ಬಿ.ಎಸ್. ಪಾಟೀಲ್, ಜಿ.ಎಸ್. ಗಂಗಾಧರ, ಬಸವರಾಜ ಪುಜಾರ ಇದ್ದರು. ಸಹಸ್ರಾರು ವಿದ್ಯಾರ್ಥಿಗಳು ರಥಯಾತ್ರೆಗೆ ಮರುಗು ತಂದರು.