ಹಳಿಯಾಳದ ಗೌಳಿಕೆರೆ ಅಭಿವೃದ್ಧಿ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ

KannadaprabhaNewsNetwork |  
Published : Jan 24, 2025, 12:45 AM IST
ಹಳಿಯಾಳದಲ್ಲಿ ಪುರಸಭೆಯ ಅಧಿಕಾರಿಗಳಿಗೆ ಕರವೇ ವತಿಯಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕೆರೆಯ ಹೂಳನ್ನು ತೆಗೆಯಬೇಕು. ಕೆರೆಯ ಒಳಗಡೆ ಒಳಚರಂಡಿ ಯೋಜನೆಯಲ್ಲಿ ನಿರ್ಮಿಸಿದ 8 ಮ್ಯಾನ್‌ಹೋಲ್‌ ಚೆಂಬರ್‌ಗಳನ್ನು ಬೇರೆಡೆ ಸ್ಥಳಾಂತರಿಸಿ, ಕೆರೆಯ ಸುತ್ತ ವಾಕಿಂಗ್ ಪಾತ್‌ ನಿರ್ಮಾಣ, ಕೆರೆಯ ಸೌಂದರ್ಯಿಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ಆಗ್ರಹಿಸಿದೆ.

ಹಳಿಯಾಳ: ಪಟ್ಟಣದ ಹೃದಯ ಭಾಗದಲ್ಲಿರುವ ಗೌಳಿಕೆರೆ(ಗುತ್ತಿಗೇರಿ ಕೆರೆ)ಯ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಿ ಸಂರಕ್ಷಿಸಬೇಕೆಂದು ತಾಲೂಕು ಕರವೇ ಘಟಕ ಆಗ್ರಹಿಸಿದೆ.

ಗುರುವಾರ ತಾಲೂಕು ಕರವೇ ಘಟಕದ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಮುಂದಾಳತ್ವದಲ್ಲಿ ಘಟಕದ ಪದಾಧಿಕಾರಿಗಳ ಹಾಗೂ ಸ್ಥಳೀಯ ನಿವಾಸಿಗಳ ನಿಯೋಗವು ಪುರಸಭೆ ಹಾಗೂ ತಾಲೂಕಾಡಳಿತ ಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.ಪುರಸಭೆಯ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸುವಾಗ ಸಂಗ್ರಹಿಸಿದ ಕೆರೆ ಅಭಿವೃದ್ಧಿ ಕರ ಖಾತೆಯಲ್ಲಿ ಸಂದಾಯವಾಗಿರುವ ₹36.21 ಲಕ್ಷವನ್ನು ಇನ್ನೂವರೆಗೂ ಯಾವುದೇ ಕೆರೆಯ ಅಭಿವೃದ್ಧಿಗಾಗಿ ವಿನಿಯೋಗಿಸದೇ ಪುರಸಭೆಯು ಶಿಲ್ಕು ಇಟ್ಟುಕೊಂಡಿದೆ. ಈ ಹಣವನ್ನು ವಿನಿಯೋಗಿಸಿ ಕೆರೆಯ 2 ಎಕರೆ 12 ಗುಂಟೆ ಕ್ಷೇತ್ರವನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು. ಕೆರೆಯ ಹೂಳನ್ನು ತೆಗೆಯಬೇಕು. ಕೆರೆಯ ಒಳಗಡೆ ಒಳಚರಂಡಿ ಯೋಜನೆಯಲ್ಲಿ ನಿರ್ಮಿಸಿದ 8 ಮ್ಯಾನ್‌ಹೋಲ್‌ ಚೆಂಬರ್‌ಗಳನ್ನು ಬೇರೆಡೆ ಸ್ಥಳಾಂತರಿಸಿ, ಕೆರೆಯ ಸುತ್ತ ವಾಕಿಂಗ್ ಪಾತ್‌ ನಿರ್ಮಾಣ, ಕೆರೆಯ ಸೌಂದರ್ಯಿಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಪದಾಧಿಕಾರಿಗಳಾದ ವಿಜಯ ಫಡ್ನೀಸ್, ವಿನೋದ ದೊಡ್ಮನಿ, ಚಂದ್ರಕಾಂತ ದುರ್ವೆ, ರೈತ ಘಟಕದ ಅಧ್ಯಕ್ಷ ಸುರೇಶ ಕೊಕಿತಕರ, ರಾಮಾ ಜಾವಳೇಕರ, ಸುಧಾಕರ ಕುಂಬಾರ, ಚಂದ್ರು ಅರಶಿನಗೇರಿ, ವಿನೋದ ಗಿಂಡೆ, ಶಿವಾನಂದ ಡಮ್ಮಣಗಿಮಠ, ಲಕ್ಷ್ಮಣ ಪೆಡನೇಕರ, ಈರಣ್ಣ ಹಿರೇಮಠ, ಮಾರುತಿ ಜೀವಣ್ಣನವರ, ತಿಪ್ಪಣ್ಣ ಕಲಗುಡಿ, ಆನಂದ ಮಠಪತಿ ಇದ್ದರು. 26ರಂದು ಭುವನಗಿರಿಯಲ್ಲಿ ಸಂಗೀತ ಮಹೋತ್ಸವ

ಸಿದ್ದಾಪುರ: ತಾಲೂಕಿನ ಭುವನಗಿರಿ ಭುವನೇಶ್ವರಿ ದೇವಾಲಯದಲ್ಲಿ ಸ್ಥಳೀಯ ಸುಷಿರ ಸಂಗೀತ ಪರಿವಾರದ ಸಂಯೋಜನೆಯಲ್ಲಿ ಶಿರಸಿ ರಾಜದೀಪ ಟ್ರಸ್ಟ್ ಮತ್ತು ಸಿದ್ದಾಪುರದ ಧರ್ಮಶ್ರೀ ಫೌಂಡೇಶನ್‌ನ ಸಹಕಾರದೊಂದಿಗೆ ಜ. ೨೬ರಂದು ೨೩ನೇ ಸಂಗೀತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸುಷಿರ ಸಂಗೀತ ಪರಿವಾರದ ಸಂಯೋಜಕ ನಾರಾಯಣ ಹೆಗಡೆ ಕಲ್ಲಾರೆಮನೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜ. ೨೬ರ ಸಂಜೆ ೬ ಗಂಟೆಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಆರಂಭದಲ್ಲಿ ಸುವರ್ಣಾ ಹೆಗಡೆ ಎಮ್ಮೆನೊಂಡ ಅವರಿಂದ ಸಂಗೀತ ಕಾರ್ಯಕ್ರಮವಿದ್ದು, ನಿತಿನ್ ಹೆಗಡೆ ಕಲಗದ್ದೆ ತಬಲಾದಲ್ಲಿ ಮತ್ತು ಜಯರಾಂ ಭಟ್ ಹೆಗ್ಗಾರಳ್ಳಿ ಹಾರ್ಮೋನಿಯಂದಲ್ಲಿ ಸಹಕರಿಸಲಿದ್ದಾರೆ.ಸಂಜೆ ೬.೩೫ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಪತ್ರಕರ್ತ ಮೋಹನ ಹೆಗಡೆ ಉದ್ಘಾಟಿಸುವರು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಅಧ್ಯಕ್ಷತೆ ವಹಿಸುವರು. ಅಭ್ಯಾಗತರಾಗಿ ನ್ಯಾಯವಾದಿ ರವಿ ಹೆಗಡೆ ಹೂವಿನಮನೆ ಮತ್ತು ಶಿರಸಿ ರಾಜದೀಪ ಟ್ರಸ್ಟ್‌ನ ಅಧ್ಯಕ್ಷ ದೀಪಕ ದೊಡ್ಡೂರು ಭಾಗಿಯಾಗುವರು. ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಸಾಧಕರಾದ ದೀಪಾ ರವೀಂದ್ರ ಭಟ್ಟ ಐನಕೈ ಮತ್ತು ಸಿದ್ದಾಪುರ ನಿವೇದಿತಾ ಮಹಿಳಾ ಮಂಡಳಿಯ ಅಧ್ಯಕ್ಷೆ ಗ್ರಾಯತ್ರಿ ವೆಂಕಟ್ರಮಣ ಭಟ್ಟ ಕೊಳಗಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸುಷಿರ ಸಂಗೀತ ಪರಿವಾರದ ಗಿರೀಶ ಹೆಗಡೆ ಕರಮನೆ, ಪ್ರಶಾಂತ ಹೆಗಡೆ ಕಾಶೀಗದ್ದೆ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...