ಬರ ಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ: ಇಂದು ಕಲಬುರಗಿ ಬಂದ್‌ ಕರೆ

KannadaprabhaNewsNetwork |  
Published : Aug 20, 2026, 03:15 AM IST
ನಾಗೇಂದ್ರನ ತಪ್ಪಿದ್ದರೆ ಆತನನ್ನು ಹೊರಹಾಕಿ, ಇಲ್ಲದಿದ್ದರೆ ಸಿದ್ಧರಾಮಯ್ಯನನ್ನು ಹೊರಹಾಕಿ: ಸಂಸದ ಜಿಗಜಿಣಗಿ | Kannada Prabha

ಸಾರಾಂಶ

Karnataka, demand, crop, insurance, money, drought relief,

ಕಲಬುರಗಿ: ಬರಗಾಲ ಘೋಷಿಸಿ ಬರ ಪರಿಹಾರಕ್ಕಾಗಿ ಬೆಳೆ ವಿಮೆ ಹಣ ಕೊಡಿ ಸಾಲ ಮನ್ನಕ್ಕಾಗಿ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಗರುವಾರ ಕಲಬುರಗಿ ಬಂದ್‌ಗೆ ಕರೆ ನೀಡಿದೆ. ಈ ಕರೆಗೆ ಹಲವು ಸಂಘಟನೆಗಳವರು ಬೆಂಬಲಿಸಿದ್ದಾರೆ. ನಗರದಲ್ಲಿ ಆಟೋದಲ್ಲಿ ಪ್ರಚಾರ ನಡೆಸಿದ ಸಂಯುಕ್ತ ಹೋರಾಟ ಸಮಿತಿ ರೈತರ ಪರವಾಗಿ ಬಂದ್‌ ಗೆ ಬಲಿಸುವಂತೆ ಕೋರಿದರು. ಗುರುವಾರ ಬೆಳಿಗ್ಗೆ 6 ಗಂಟೆಯಿ 11 ಗಂಟೆಯವರೆಗೆ ಕೇಂದ್ರೀಯ ಬಸ್ ನಿಲ್ದಾಣ ಹತ್ತಿರ, ನಂತರ ನೆಹೆರು ಗಂಜ್ ನಗರೇಶ್ವರ ಶಾಲೆಯಿಂದ ರೈತರ ಮೆರವಣಿಗೆ ಹೊರಟು ಸ್ಥಳ ಸೂಪರ್ ಮಾರ್ಕೆಟ್ ಜನತಾ ಬಜಾರ ಹತ್ತಿರ ರೈತರ ಸಭೆ ನಡೆಸಿ ಮಧ್ಯಾಹ್ನ 2:30 ಕ್ಕೆ ಜಿಲ್ಲಾಧಿಕಾರಿಗಳು ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಸಂಯುಕ್ತ ಹೋರಾಟ ಸಮೀತಿ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ ಹೇಳಿದ್ದಾರೆ.

------------------

ಬಂದ್ ಗೆ ಹೋಟೆಲ್ ಸಂಘದ ಬೆಂಬಲ

ಮಳೆಯ ಅಭಾವದಿಂದ ತೀವ್ರ ಬರಗಾಲ ಎದುರುಸುತ್ತಿರುವ ಕಲಬುರಗಿ ಜಿಲ್ಲೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿ ಕರೆ ನೀಡಿರುವ ಬಂದ್ ಗೆ ಜಿಲ್ಲಾ ಹೋಟೆಲ್ ವಸತಿ ಮತ್ತು ಬೇಕರಿ ಮಾಲೀಕರ ಸಂಘವು ಬೆಂಬಲ ವ್ಯಕ್ತಪಡಿಸಿದೆ. ಬಂದ್ ಮಾಡಲು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ನೇತೃತ್ವದಲ್ಲಿ ಕರೆ ನೀಡಿರುವುದರಿಂದ ಸಂಘವು ಬೆಂಬಲಿಸಲು ನಿರ್ಧಾರ ಕೈಗೊಂಡಿದೆ ಎಂದು ಅಧ್ಯಕ್ಷ ನರಸಿಂಹ ಮೆಂಡನ್ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಎಲ್ ನಿನೋ ಕಾರಣದಿಂದ ಮಳೆ ಕೊರತೆ ಉಂಟಾಗಿದ್ದು, ರೈತರು ಸಂಕಷ್ಟಕ್ಜೆ ಸಿಲುಕ್ಕಿದ್ದಾರೆ. ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದರೆ ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ. ಹೋಟೆಲ್ ಸಂಘ ಯಾವತ್ತೂ ರೈತರ ಪರವಾಗಿ ನಿಲ್ಲಲಿದೆ ಎಂದು ಮೆಂಡನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರಿಗೆ ಜಾನುವಾರು ಹಿತರಕ್ಷಣೆಗೆ ಸರ್ಕಾರ ಬದ್ಧ: ಬಸವರಾಜ ಪಾಟೀಲ್ ಊಡಗಿ
ರಾಜ್ಯಕ್ಕೆ ಬರ ಅಧ್ಯಯನ ತಂಡ ಕಳುಹಿಸಲು ಮಲತಾಯಿ ಧೋರಣೆ