ಕರ್ನಾಟಕ ಜೀವವೈವಿಧ್ಯತೆಯ ಸ್ವರ್ಗ: ಡಾ. ಬಿ.ಜಿ. ಜವಳಿ

KannadaprabhaNewsNetwork |  
Published : Nov 06, 2025, 02:45 AM IST
4ಎಂಡಿಜಿ2, ಮುಂಡರಗಿ ಪಟ್ಟಣದ ಕ.ರಾ. ಬೆಲ್ಲದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಹಾಗೂ ಕನ್ನಡ ನಾಡು, ನುಡಿ, ನೆಲ, ಜಲಗಳಿಗೆ ಸಂಬಂಧಿಸಿದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ವೇಷಭೂಷನಗಳಲ್ಲಿ ಪಾಲ್ಗೊಂಡಿದ್ದರು.  | Kannada Prabha

ಸಾರಾಂಶ

ರಾಜ್ಯವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಸರ್ಕಾರವು ಬೆಂಗಳೂರನ್ನು ಬೃಹತ್ ಬೆಂಗಳೂರು ಎನ್ನುವ ಬದಲು ಬೃಹತ್ ಕರ್ನಾಟಕ ಎಂದು ಬದಲಿಸಬೇಕು.

ಮುಂಡರಗಿ: ದೇಶದಲ್ಲಿ ಕರ್ನಾಟಕ ಸಾಂಸ್ಕೃತಿಕ ರಾಜ್ಯವಾಗಿದೆ. ಅಲ್ಲದೇ ಜೀವವೈವಿಧ್ಯತೆಯ ಸ್ವರ್ಗವಾಗಿದ್ದು, ಏಕತೆಯನ್ನು ಪ್ರದರ್ಶಿಸುತ್ತದೆ ಎಂದು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ತಿಳಿಸಿದರು.

ಮಂಗಳವಾರ ಪಟ್ಟಣದ ಕ.ರಾ. ಬೆಲ್ಲದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಸರ್ಕಾರವು ಬೆಂಗಳೂರನ್ನು ಬೃಹತ್ ಬೆಂಗಳೂರು ಎನ್ನುವ ಬದಲು ಬೃಹತ್ ಕರ್ನಾಟಕ ಎಂದು ಬದಲಿಸಬೇಕು ಎಂದರು. ಕಾಲೇಜಿನ ಕಾರ್ಯಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊರಗಿನ ಜ್ಞಾನಕ್ಕೆ ಇಂಗ್ಲಿಷ್ ಕಲಿಯಬೇಕು. ಆದರೆ ಕನ್ನಡ ತಾಯಿ ಭಾಷೆಯಾಗಿದ್ದು, ಕನ್ನಡವನ್ನು ಹೆಚ್ಚಾಗಿ ಬಳಸಿ ಬೆಳೆಸಬೇಕು ಎಂದರು.

ಪ್ರೊ. ಕಾವೇರಿ ಬೋಲಾ ಮಾತನಾಡಿ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಗದಗ ಜಿಲ್ಲೆಯ ಪಾತ್ರ ಪ್ರಮುಖವಾಗಿರುವುದನ್ನು ಎಂದಿಗೂ ಮರೆಯುವಂತಿಲ್ಲ ಎಂದರು.

ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ರೀಡಾ ವಿಭಾಗದ ಮುಖ್ಯೆಸ್ಥ ಡಾ. ಮನೋಜ್ ಕೋಪರ್ಡೆ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಉಪಕಾರ್ಯಾಧ್ಯಕ್ಷ ವಿ.ಎಫ್. ಗುಡದಪ್ಪನವರ, ಟಿ.ಬಿ. ದಂಡಿನ, ಡಾ. ಅಮರೇಶ ಶಿವಶೆಟ್ಟಿ, ಶೌಕತ್ ಅಲಿ, ಸುರೇಶ ನ್ಯಾಮತಿ, ಡಾ. ಕುಮಾರ ಜೆ., ಡಾ. ವನಜಾಕ್ಷಿ ಭರಮಗೌಡರ, ಡಾ. ಆರ್.ಎಚ್. ಜಂಗಣವಾರಿ, ಡಾ. ಸಚಿನ್ ಉಪ್ಪಾರ ಇತರರು ಇದ್ದರು.ಪ್ರಾಚಾರ್ಯ ಡಾ. ಸಂತೋಷ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ನಂದಿತಾ ಟೆಂಕದ ಸ್ವಾಗತಿಸಿದರು. ಲಕ್ಷ್ಮೀ ಕನಕಪ್ಪನವರ ನಿರೂಪಿಸಿದರು. ಈರಮ್ಮ ಬಂಡಿವಡ್ಡರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ