ನಗರದ ರಾಮನಹಳ್ಳಿಯ ಡಿಎಆರ್ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಅಪರಾಧ ಪತ್ತೆಯಲ್ಲಿ ಕರ್ನಾಟಕ ಪೊಲೀಸ್ ಅಳವಡಿಸಿರುವ ತಂತ್ರಜ್ಞಾನ ಇಡೀ ದೇಶಕ್ಕೆ ಮಾದರಿಯಾಗಿದೆ. ದೇಶದ ವಿವಿಧ ರಾಜ್ಯದ ಪೊಲೀಸ್ ಅಧಿಕಾರಿ, ಸಿಬ್ಬಂದಿ ರಾಜ್ಯಕ್ಕೆ ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಹೇಳಿದರು.ಚಿಕ್ಕಮಗಳೂರು ನಗರದ ರಾಮನಹಳ್ಳಿಯ ಡಿಎಆರ್ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿ ಕರ್ನಾಟಕ ಪೊಲೀಸ್ ಅಪರಾಧ ಪತ್ತೆಯಲ್ಲಿ ದೇಶದಲ್ಲೇ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಅನೇಕ ನಿರ್ದಶನಗಳಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ಕಾರ್ಯನಿರ್ವಹಿಸುತ್ತಾ ಪ್ರತಿ ದಿನ ಸೈಬರ್ ಕ್ರೈಮ್ ನಡಿ ಹಣ ಕಳೆದುಕೊಂಡವರಿಗೆ ಮರಳಿ ಹಣ ಕೊಡಿಸುವ ಕಾರ್ಯವನ್ನು ತಂತ್ರಜ್ಞಾನ ಬಳಕೆಯಿಂದ ಪೊಲೀಸ್ ಇಲಾಖೆ ಮಾಡುತ್ತಿದೆ.ರಾಜ್ಯ ಪೊಲೀಸ್ ದೇಶದಲ್ಲಿ ಮೊದಲ ಡ್ರೋಣ್ ಪಡೆ ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಜಿಪಂ ಸಿಇಒ ಎಚ್.ಎಸ್. ಕೀರ್ತನಾ ಮಾತನಾಡಿ, ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿ ಒಂದು ಹಬ್ಬ ಆಚರಣೆ ಮಾಡದೇ ಸಮಾಜಕ್ಕೆ ದುಡಿಯುತ್ತಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿ ಹುಟ್ಟುಹಬ್ಬ ಆಚರಣೆಗೂ ಆದೇಶ ಬರಬೇಕಾದ ವ್ಯವಸ್ಥೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಾಗರಿಕರು ಜವಾಬ್ದಾರಿಯಿಂದ ನಡೆದುಕೊಂಡರೆ ಪೊಲೀಸರಿಗೆ ಸ್ವಲ್ಪಮಟ್ಟಿಗೆ ಕಾರ್ಯದ ಒತ್ತಡ ಕಡಿಮೆ ಆಗಬಹುದು ಎಂದು ಅಭಿಪ್ರಾಯಪಟ್ಟರು.ಈ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ್, ಮುಖ್ಯ ಅತಿಥಿಯಾಗಿ ನಿವೃತ್ತ ಎಆರ್‌ಎಸ್ ಐ ತೌಫಿಕ್ ಅಹಮದ್, ಸಿಡಿಎ ಅಧ್ಯಕ್ಷ ಮಂಜೇಗೌಡ ಸೇರಿದಂತೆ ಮೊದಲಾದವರಿದ್ದರು.
ಜಿಲ್ಲಾ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯಲ್ಲಿ ₹38.99 ಲಕ್ಷ
2025-26ನೇ ಸಾಲಿನಲ್ಲಿ ಪೊಲೀಸ್ ಧ್ವಜ ಮಾರಾಟದಿಂದ ₹26.52 ಲಕ್ಷ ಸಂಗ್ರಹವಾಗಿದ್ದು, ಈ ಪೈಕಿ ಶೇ.50 ರಷ್ಟು ನಿಧಿ ಯನ್ನು ಕೇಂದ್ರ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಸಲ್ಲಿಸಲಾಗಿದೆ. ₹37.49 ಲಕ್ಷ ಉಳಿದಿದೆ.
ಉಳಿದಂತೆ ಉಳಿತಾಯ ಖಾತೆಯಲ್ಲಿ ₹29.37 ಲಕ್ಷ, ಎಫ್‌ಡಿ(ನಿಶ್ಚಿತ ಠೇವಣಿ) ಖಾತೆಯಲ್ಲಿ ₹9.61 ಲಕ್ಷ ಸೇರಿದಂತೆ ಒಟ್ಟು ₹38.99 ಲಕ್ಷ ರು. ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯಲ್ಲಿ ಇದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಧ್ವಜ ದಿನಾಚರಣೆಯಲ್ಲಿ 8 ತುಕಡಿ ಭಾಗಿ
ಇನ್ನೂ ಧ್ವಜಪಡೆ ನಾಯಕತ್ವವನ್ನು ಆರ್‌ಎಸ್‌ಐ ವಿಠ್ಠಲ್ ಗುಡಿ ವಹಿಸಿದ್ದರು. ಪ್ರಕಾಶ್ ಎಸ್,ನಾಯ್ಕ್ (ರಾಷ್ಟ್ರಧ್ವಜ), ಸಂತೋಷ್ ಕುಮಾರ್ ಮಹಾದೇವಹಳ್ಳಿ (ಪೊಲೀಸ್ ಧ್ವಜ), ಧನರಾಜ್ ನಾಯ್ಕ್, ಪವನ್ ಕುಮಾರ್, ಪವನ್ ನಾಯ್ಕ್,ಜಿಎಂ ರೋಹಿತ್ ಬೆಂಗಾವಲು ಪಡೆಯಲ್ಲಿ ಕಾರ್ಯನಿರ್ವಹಿಸಿದರು.(ಫೋಟೋ: ಎರಡು ಫೋಟೋ ಬಳಸಬಹುದು)