ಫೋಟೋ- 2ಎಂವೈಎಸ್3
----
ಕನ್ನಡಪ್ರಭ ವಾರ್ತೆ ಮೈಸೂರುನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ (ಕೆಪಿಎ) 38ನೇ ತಂಡದ ಮೂವರು ಪ್ರೊಬೆಷನರಿ ಪೊಲೀಸ್ ಉಪಾಧೀಕ್ಷಕರು ಮತ್ತು ಮೂವರು ಅಬಕಾರಿ ಉಪಾಧೀಕ್ಷಕರು ಸೇರಿದಂತೆ ಒಟ್ಟು 6 ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥಸಂಚಲನವು ಶನಿವಾರ ಜರುಗಿತು.
ನಿರ್ಗಮನ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿದ ತರಬೇತಿ ಹೆಚ್ಚುವರಿ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ಅಧಿಕಾರಿಗಳು ಕಾನೂನು ಬದ್ಧರಾಗಿ, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ನಿಷ್ಪಕ್ಷಪಾತವಾಗಿ ಸಮಾಜ ಹಾಗೂ ದೇಶ ಸೇವೆಯನ್ನು ಮಾಡುವಂತೆ ಕರೆ ನೀಡಿದರು.
ಕೆಪಿಎ ನಿರ್ದೇಶಕ ಲೋಕೇಶ್ ಭ ಜಗಲಾಸರ್, ಉಪ ನಿರ್ದೇಶಕ ಎನ್. ನಿರಂಜನ ರಾಜ್ ಅರಸ್, ಸಹಾಯಕ ನಿರ್ದೇಶಕರಾದ ಟಿ. ಕುಮಾರ, ಎಂ. ಶಿವಶಂಕರ್, ನರಸಿಂಹ ವಿ. ತಾಮ್ರಧ್ವಜ, ಎಂ.ಎಚ್. ಖಾನ್, ಎಚ್.ಎಸ್. ರೇಣುಕಾರಾಧ್ಯ, ಎಸ್. ವೆಂಕಟೇಶ್, ಕೆ.ಎಂ. ಸೋಮಶೇಖರ್, ಎನ್. ಸುದರ್ಶನ ಮೊದಲಾದವರು ಇದ್ದರು.
----ಬಾಕ್ಸ್...
ಪ್ರೊ. ಡಿವೈಎಸ್ಪಿ(ಸಿವಿಲ್) ವಿಜಯಕ್ರಾಂತಿ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪಡೆದರು. ಮುಖ್ಯಮಂತ್ರಿಗಳು ಟ್ರೋಫಿ ಹಾಗೂ ಮುಖ್ಯಮಂತ್ರಿಗಳ ಖಡ್ಗ, ಡಿಜಿ ಮತ್ತು ಐಜಿಪಿ ಅವರ ಬೇಟನ್, ನಿವೃತ್ತ ಡಿಜಿ ಮತ್ತು ಐಜಿಪಿ ಗರುಡಾಚಾರ್ ನಗದು ಬಹುಮಾನ ಪಡೆದರು. ಅಲ್ಲದೆ, ಉತ್ತಮ ಫೈರಿಂಗ್ ಬಹುಮಾನ, ಹೊರಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ- ಡಿಜಿ ಮತ್ತು ಐಜಿಪಿ ಕಪ್ ಹಾಗೂ ಒಳಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಸಹ ವಿಜಯಕ್ರಾಂತಿ ತಮ್ಮದಾಗಿಸಿಕೊಂಡರು.