ಕನ್ನಡಪ್ರಭ ವಾರ್ತೆ ಮೈಸೂರು
ನಗರದಲ್ಲಿ ಸದರ್ನ್ ಸ್ಟಾರ್ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ಪವರ್ ಎಂಜಿನಿಯರ್ಸ್‌ಅಕಾಡೆಮಿಯು ಮಂಗಳವಾರ ಆಯೋಜಿಸಿದ್ದ ಎಂ.ಎಲ್. ಶೇಷಾದ್ರಿ ವಿರಚಿತ ‘ಎಲೆಕ್ಟ್ರಿಕಲ್ ಅರ್ಥಿಂಗ್’, ಹೇಮಂತ್‌ಲಿಂಗಪ್ಪ ರಚನೆಯ ‘ಮತ್ತೆ ಮತ್ತೆ ಮಳೆ’ ಕವನ ಸಂಕಲನ ಹಾಗೂ ‘ತಾಂತ್ರಿಕ ಜರ್ನಲ್’ ಬಿಡುಗಡೆ ಕಾರ್ಯಕ್ರಮದಲ್ಲಿಅವರುಮಾತನಾಡಿದರು.
ಅರ್ಥಿಂಗ್‌ಮತ್ತು ಗ್ರೌಂಡಿಂಗ್‌ವಿದ್ಯುತ್‌ಸ್ಥಾಪನೆಯ ಬಹುಮುಖ್ಯ ಅಂಗವಾಗಿದ್ದು, ಅಪಾಯಗಳ ವಿರುದ್ಧ ರಕ್ಷಣೆ ನೀಡುವ ಪ್ರಮುಖ ವ್ಯವಸ್ಥೆಗಳು. ಗ್ರೌಂಡಿಂಗ್- ವಿದ್ಯುತ್ ಆಘಾತ, ಬೆಂಕಿ ಮತ್ತು ಉಪಕರಣಗಳು ಮತ್ತು ಸಲಕರಣೆಗಳ ಹಾನಿಯ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಅವರು ಹೇಳಿದರು.ಎಲೆಕ್ಟ್ರಿಕಲ್ ಅರ್ಥಿಂಗ್ ಕೃತಿ ಮತ್ತು ಸಂಸ್ಥೆಯ ಜರ್ನಲ್‌ಹೊರ ತಂದಿರುವುದು ಯುವ ಎಂಜಿನಿಯರ್ ಗಳಿಗೆ ಪ್ರೇರಣೆಯಾಗಲಿದೆ. ಇದರಿಂದ ಸಂಸ್ಥೆಯ ಕಾರ್ಯ ಚಟುವಟಿಕೆ ತಿಳಿದುಕೊಳ್ಳಲು, ಸಲಹೆ ನೀಡಲು ಉಪಯುಕ್ತವಾಗಲಿದೆ. ಮೊಬೈಲ್ ಬಳಕೆಯಿಂದ ಜೀವನ ನಿಷ್ಕ್ರಿಯವಾಗುತ್ತಿದೆ. ಬರವಣಿಗೆ ಕಲೆ ರೂಢಿಸಿಕೊಳ್ಳಬೇಕು. ನಿತ್ಯದ ಕೆಲಸದ ಜೊತೆ ಹೊರಗಿನಪ್ರಪಂಚ ತಿಳಿಯಬೇಕು. ಪುಸ್ತಕ ಓದಬೇಕು ಎಂದು ಅವರು ಸಲಹೆ ನೀಡಿದರು.
ಎಲ್ಲಾ ಎಸ್ಕಾಂಗಳಿಗಿಂತ ಸೆಸ್ಕ್ ಮುಂಚೂಣಿಯಲ್ಲಿದೆ. ಹೊಸ ಕೆಲಸ ಮಾಡುವುದಕ್ಕಿಂತ ಇರುವ ಕೆಲಸಗಳನ್ನು ಸಮರ್ಪಕವಾಗಿ ಮಾಡಿದರೆ ಸಾಕಷ್ಟು ಸಮಸ್ಯೆಗಳು ನಿವಾರಣೆ ಆಗಲಿದೆ. ಫೀಡರ್ ನಿರ್ವಹಣೆಯಲ್ಲಿ ಸೆಸ್ಕ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. 3 ತಿಂಗಳಲ್ಲಿ ಒಮ್ಮೆ ಈ ಕಾರ್ಯಕ್ರಮ ಮಾಡಿದರೆ ಒಳ್ಳೆಯದು. ಇದರಿಂದ ನಮ್ಮ ಎಂಜಿನಿಯರ್ ಗಳಿಗೂ ಹಾಗೂ ನಮ್ಮಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಅವರು ತಿಳಿಸಿದರು.
ಅಕಾಡೆಮಿಯ ಕಾರ್ಯದರ್ಶಿ ಎಂ.ಎಚ್. ಜಗದೀಶ್, ಖಜಾಂಚಿ ಎಂ.ಜಿ. ಹಾಲಸ್ವಾಮಿ, ಜಂಟಿ ಕಾರ್ಯದರ್ಶಿ ಧನಂಜಯ, ಕೆಪಿಟಿಸಿಎಲ್‌ಮೈಸೂರು ವಲಯ ಎಸ್‌ಇಇ ರಂಗರಾಜು ಮೊದಲಾದವರು ಇದ್ದರು.