ಕನ್ನಡಪ್ರಭ ವಾರ್ತೆ ವಿಜಯಪುರ: ಗೋವಾದ ಪಣಜಿಯ ಕಂಪಾಲ ಮೈದಾನದಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್ ಬಾಲ್ ಪುರುಷರ ಟೆನ್ನಿಸ್‌ಬಾ್ ಕ್ರಿಕೆಟ್ ಚಾಂಪಿಯನಶಿಪ್‌ನಲ್ಲಿ ಅತಿಥೇಯ ಗೋವಾ ತಂಡದ ವಿರುದ್ಧ ಅಂತಿಮ ಪಂದ್ಯದಲ್ಲಿ 26 ಓಟಗಳಿಂದ ಸೋಲು ಪಂದ್ಯಾವಳಿಯ ಫೇವರೇಟ್ ಆಗಿದ್ದ ಕರ್ನಾಟಕ ರಾಜ್ಯ ತಂಡ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ನಾಯಕ ಮುರಳಿ ಹಾಗೂ ಸತತ 4 ಸಿಕ್ಸರ್ ಬಾರಿಸಿ ಗೆಲುವಿನ ಆಸೆ ಚಿಗುರಿಸಿದ ಫಹಾದ ಹುಸೇನ್ ಅವರ ಹೋರಾಟ ಫಲ ಕೊಡಲಿಲ್ಲ. ಕೊನೆಗೆ ನಿಗದಿತ 8 ಓವರ್‌ನಲ್ಲಿ 8 ಹುದ್ದರಿಗಳನ್ನು 89 ಓಟಗಳಿಸಿ ಸೋಲೊಪ್ಪಿಕೊಂಡಿತು. ಪಂದ್ಯಾವಳಿಯುದ್ದಕ್ಕೂ ಅಮೋಘ ಆಲರಉ್ಡ್ ಆಟದಿಂದ ಸರಣಿ ಪುರುಷ ಪ್ರಶಸ್ತಿ ಪಡೆದರು.ರನ್ನರ್ಸ್ ಅಪ್ ಸ್ಥಾನ ಪಡೆದ ಕರ್ನಾಟಕ ರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ತಂಡದ ನಾಯಕ ಮುರಳಿ, ಮುಖ್ಯ ತರಬೇತುದಾರ ಡಾ.ಅಶೋಕಕುಮಾರ ಜಾಧವ, ರಾಜ್ಯ ಸಂಸ್ಥೆಯ ಅಧ್ಯಕ್ಷೆ ಶಹೀದಾ ಬೇಗಂ ಹಕೀಮ ಇದ್ದರು.