ಕರ್ನಾಟಕ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹ್ಯಾಕ್‌

KannadaprabhaNewsNetwork |  
Published : May 16, 2025, 02:12 AM IST
ಕರ್ನಾಟಕ ವಿಶ್ವವಿದ್ಯಾಲಯ | Kannada Prabha

ಸಾರಾಂಶ

2024ನೇ ಸಾಲಿನ 75ನೇ ವಾರ್ಷಿಕ ಘಟಿಕೋತ್ಸವಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಂತರ್ಜಾಲ www.kud.ac.in ತಾಣದಲ್ಲಿ ಲಿಂಕ್ ಮೂಲಕ ಆಹ್ವಾನಿಸಲಾಗಿತ್ತು. ಆದರೆ, ಕೆಲವು ಅನಾಮದೇಯ ವ್ಯಕ್ತಿಗಳು ಕವಿವಿ ವೆಬ್‌ಸೈಟ್ ನಕಲು ಮಾಡಿ ವಿದ್ಯಾರ್ಥಿಗಳಿಂದ ಶುಲ್ಕದ ಮೊತ್ತವನ್ನು ತಮ್ಮ ಖಾತೆಗೆ ಭರಿಸಿಕೊಳ್ಳುತ್ತಿರುವ ವಿಷಯವು ಗಮನಕ್ಕೆ ಬಂದಿದೆ.

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಹ್ಯಾಕ್‌ ಆಗಿದ್ದು, ಕವಿವಿ ವಿದ್ಯಾರ್ಥಿಗಳಿಗೆ ಈ ಕುರಿತು ಕೆಲವು ಸೂಚನೆ ನೀಡಿದೆ.

2024ನೇ ಸಾಲಿನ 75ನೇ ವಾರ್ಷಿಕ ಘಟಿಕೋತ್ಸವಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಂತರ್ಜಾಲ www.kud.ac.in ತಾಣದಲ್ಲಿ ಲಿಂಕ್ ಮೂಲಕ ಆಹ್ವಾನಿಸಲಾಗಿತ್ತು. ಆದರೆ, ಕೆಲವು ಅನಾಮದೇಯ ವ್ಯಕ್ತಿಗಳು ಕವಿವಿ ವೆಬ್‌ಸೈಟ್ ನಕಲು ಮಾಡಿ ವಿದ್ಯಾರ್ಥಿಗಳಿಂದ ಶುಲ್ಕದ ಮೊತ್ತವನ್ನು ತಮ್ಮ ಖಾತೆಗೆ ಭರಿಸಿಕೊಳ್ಳುತ್ತಿರುವ ವಿಷಯವು ಗಮನಕ್ಕೆ ಬಂದಿದೆ. ಆದ್ದರಿಂದ ಸಂಬಂಧಪಟ್ಟ ವಿದ್ಯಾರ್ಥಿಗಳು ಘಟಿಕೋತ್ಸವದ ಶುಲ್ಕಗಳನ್ನು 2024 ಕ್ಕಿಂತ ಮುಂಚೆ ಉತ್ತೀರ್ಣರಾದ ಪದವಿಧರರು ಕವಿವಿ ಅಧಿಕೃತ ಅಂತರ್ಜಾಲ www.kud.ac.inದಲ್ಲಿ ಲಭ್ಯವಿರುವ ಎಸ್‌ಬಿಐ ಪೋರ್ಟಲ್‌ ಮುಖಾಂತರ ಮಾತ್ರ ಭರಿಸಬೇಕು. ಜತೆಗೆ 2024ರ ನಂತರ ಉತ್ತೀರ್ಣರಾದ ಪದವಿಧರರು UUCMS ತಂತ್ರಾಂಶದ ಮುಖಾಂತರ ಮಾತ್ರ ಶುಲ್ಕ ಭರಿಸಲು ತಿಳಿಸಲಾಗಿದೆ. ಅನ್ಯ ಮಾರ್ಗದಲ್ಲಿ ಶುಲ್ಕ ಭರಿಸಿದಲ್ಲಿ ವಿಶ್ವವಿದ್ಯಾಲಯವು ಹೊಣೆಯಾಗಿರುವುದಿಲ್ಲ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''