ಕನ್ನಡಪ್ರಭ ವಾರ್ತೆ ಕಲಬುರಗಿ
ವಿಶೇಷವಾಗಿ 12 ನೇ ಶತಮಾನದ ವಚನಕಾರರಾದ ಬಸವಣ್ಣ ಪಾತ್ರಧಾರಿಯಾಗಿ ಪೂಜ್ಯ ದೊಡ್ಡಪ್ಪ ಎಸ. ಅಪ್ಪಾ ಹಾಗೂ ಕಿತ್ತೂರು ರಾಣಿ ಚೆನ್ನಮ್ಮಳಾಗಿ ಕುಮಾರಿ ಮಹೇಶ್ವರಿ ಎಸ. ಅಪ್ಪಾ ಆಕರ್ಷಕ ಮತ್ತು ಭಾವನಾತ್ಮಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.ಅತಿಥಿಗಳಾಗಿ ಮಹಾದೇವಯ್ಯ ಕರದಳ್ಳಿ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಶಂಕರಗೌಡ ಹೊಸಮನಿ, ವಿಭಾಗ ಸಂಯೋಜಕ ಜೋಸೆಫ್ ವರ್ಗೀಸ್, ಶ್ರೀಮತಿ ಆಶಾರಾಣಿ ಪಾಟೀಲ್, ವೃಷಾಲಿ, ಶಿವಲೀಲಾ ಪೂಜಾರಿ ಹಾಗೂ ಚಟುವಟಿಕೆ ಸಂಯೋಜಕಿ ಅಕ್ಷತಾ ಕುಲಕರ್ಣಿ ಪಾಲ್ಗೊಂಡಿದ್ದರು.
ಕನ್ನಡವನ್ನು ಕೇವಲ ಮಾತನಾಡುವುದರಿಂದ ಮಾತ್ರ ಕನ್ನಡಿಗರಾಗುವುದಿಲ್ಲ; ಕನ್ನಡದ ಸಂಸ್ಕೃತಿ, ಸಾಹಿತ್ಯ, ಇತಿಹಾಸ ಮತ್ತು ಜೀವನ ಮೌಲ್ಯಗಳನ್ನು ತಿಳಿದುಕೊಳ್ಳುವುದರಿಂದ ಕನ್ನಡದ ನಿಜವಾದ ಆತ್ಮವನ್ನು ಅರಿಯಲು ಸಾಧ್ಯ” ಎಂದು ತಿಳಿಸಿದರು. ಕನ್ನಡ ಎಲ್ಲರೊಟ್ಟಿಗೆ, ಎಲ್ಲರೊಂದಿಗೆ ಬೆಳೆಯಲಿ; ಕನ್ನಡದ ಸಂಸ್ಕೃತಿ, ಸಾಹಿತ್ಯ ಮತ್ತು ಚಿಂತನೆ ವಿಶ್ವದಾದ್ಯಂತ ಪಸರಿಸಲಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಭಿಪ್ರಾಯಪಟ್ಟರು.ಕನ್ನಡದ ಸಂಸ್ಕೃತಿ, ಇತಿಹಾಸ, ಪರಂಪರೆ, ಸಾಹಿತ್ಯ ಹಾಗೂ ಮೌಲ್ಯಗಳ ಅರಿತುಕೊಳ್ಳುವ ಅಗತ್ಯವಿದೆ. ಕರ್ನಾಟಕದ ಈ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಬಸವಣ್ಣನ್ನ ಕಾಲದದಿಂದಲೂ ಅಸ್ತಿತ್ವದಲ್ಲಿದ್ದ ಮಾನವೀಯ ಮೌಲ್ಯಗಳನ್ನು ಇಂದಿನ ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಾಗಿದೆ. ಇಂತಹ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವ ಮೂಲಕ ಅವರಲ್ಲಿ ಹೆಮ್ಮೆ ಮತ್ತು ಶಾಂತಿಯುತ ಸಹಬಾಳ್ವೆಯ ಮನೋಭಾವ ಬೆಳೆಸಬೇಕಾಗಿದ್ದು, ಕರ್ನಾಟಕ ವೈಭವ ಒಂದು ಪ್ರಯತ್ನವಾಗಿದೆ ಎಂದು ಅಪ್ಪಾ ಪಬ್ಲಿಕ್ ಶಾಲೆ ಪ್ರಾಚಾರ್ಯ ಶಂಕರಗೌಡ ಹೊಸ್ಮನಿ ಹೇಳಿದರು. ಅನನ್ಯ ಸ್ವಾಗತಿಸಿದರು. ಆರಾಧ್ಯ ಅತಿಥಿ ಪರಿಚಯಿಸಿದರು. ಸಾನ್ವಿ ವಂದಿಸಿದರು. ಸೃಜನ್ ಮತ್ತು ವೃಷಾಲಿ, ಭೀಮಾಶಂಕರ, ತನಿಷ್ಕಾ ನಿರೂಪಿಸಿದರು.