ಹೊಸದುರ್ಗ: ಪಟ್ಟಣದ ಗುಡ್ಡದ ಮೇಲಿರುವ ಶ್ರೀ ತುಳುಜಾಭವಾನಿ ಅಮ್ಮನವರ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ಭಕ್ತರು ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡರು.
ದಿಪೋತ್ಸವದ ಆಂಗವಾಗಿ ದೇವಾಲಯದ ಆವರಣದಲ್ಲಿ ನೂತನವಾಗಿ ಧ್ವಜ ಸ್ಥಂಬ ಹಾಗೂ ತ್ರಿಶೂಲ ಶಕ್ತಿಪೀಠವನ್ನು ಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ತುಳಜಾ ಭವಾನಿ ಅಮ್ಮನವರಿಗೆ ವಿಶೇಷವಾಗಿ ಅರತಿ ಬೆಳಗಿ ಪೂಜೆ ಸಲ್ಲಿಸಿದರು. ಪೂಜೆಯ ವೇಳೆ ಪಾಲ್ಗೊಂಡ ಎಲ್ಲರೂ ದೇವಾಲಯ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು.
ಅಖಿಲ ಬಾರತ ಭಾವಸಾರ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಉಮೇಶ್ ಗುಜ್ಜಾರ್ ದೀಪ ಬೆಳಗಿಸುವ ಮೂಲಕ ದಿಪೋತ್ಸವಕ್ಕೆ ಚಾಲನೆ ನೀಡಿದರು.ಭಾವಸಾರ ಕ್ಷತ್ರಿಯ ಸಮಾಜ, ಶ್ರೀ ತುಳುಜಾಭವಾನಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ದೇವಿಗೆ ದೀಪ ಬೆಳಗಿ ಸಂಭ್ರಮಿಸಿದರು.
ಕಳೆದ ಎಂಟು ವರ್ಷಗಳ ಹಿಂದೆ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿ ಕೆಲಸ ಅರಂಭಿಸಲಾಗಿದೆ. ಗರ್ಭಗುಡಿ ನಿರ್ಮಾಣದ ನಂತರ ಮುಂದಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ದೇವಾಲಯ ನಿರ್ಮಾಣಗೊಳ್ಳುತ್ತಿರುವ ಸ್ಥಳವನ್ನು ಸರ್ಕಾರ ತುಳುಜಾಭವಾನಿ ಸೇವಾ ಸಮಿತಿಗೆ ನೀಡುವ ಜತೆಗೆ ದೇವಾಲಯ ನಿರ್ಮಾಣಕ್ಕೆ ಅಗತ್ಯ ಅನುಧಾನ ಒದಗಿಸಬೇಕು. ಆರ್ಥಿಕವಾಗಿ ಹಿಂದುಳಿದಿರುವ ಭಾವಸಾರ ಕ್ಷತ್ರೀಯ ಸಮಾಜಕ್ಕೆ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದರು.