ಶಿವ ಭಕ್ತರಿಗೆ ಕಾರ್ತಿಕ ಮಾಸ ಅತ್ಯಂತ ವಿಶೇಷ; ವಿ.ಎಸ್.ಕೃಷ್ಣಭಟ್

KannadaprabhaNewsNetwork |  
Published : Nov 23, 2025, 02:15 AM IST
ನರಸಿಂಹರಾಜಪುರ ಅಗ್ರಹಾರದ ಉಮೇ ಮಹೇಶ್ವರ ದೇವಸ್ಥಾನದಲ್ಲಿ ನಡೆದ 29 ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ನಿವೃತ್ತ ಕನ್ನಡ ಪಂಡಿತ ವಿ.ಎಸ್.ಕೃಷ್ಣಭಟ್  ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರಕಾರ್ತಿಕ ಮಾಸ ಶಿವಭಕ್ತರಿಗೆ ವಿಶೇಷ ತಿಂಗಳಾಗಿದೆ ಎಂದು ನಿವೃತ್ತ ಕನ್ನಡ ಪಂಡಿತ ವೇ.ಬ್ರ ವಿ.ಎಸ್.ಕೃಷ್ಣಭಟ್ ತಿಳಿಸಿದರು.ಗುರುವಾರ ರಾತ್ರಿ ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಸಮಿತಿ ಹಮ್ಮಿಕೊಂಡಿದ್ದ 29 ನೇ ವರ್ಷದ ಲಕ್ಷ ದೀಪೋತ್ಸವ ಉದ್ಘಾಟಿಸಿ ಮಾತನಾಡಿದರು. ಕಾರ್ತಿಕ ಮಾಸ ದೇವರು ಜ್ಯೋತಿರ್ಮಯ ರೂಪದಲ್ಲಿ ಬ್ರಹ್ಮಾಂಡವನ್ನು ಅನುಗ್ರಹಿಸಿದ ಮಾಸ ಎಂಬ ನಂಬಿಕೆ ಇದೆ. ಲಕ್ಷ ದೀಪಗಳ ಬೆಳಕಿನ ಹೊಳಪಿನಲ್ಲಿ ದೇವನಾದ ಮಹೇಶ್ವರ ನಾಮಸ್ಮರಣೆ ಮಾಡುತ್ತಾ ಮನದ ಕತ್ತಲನ್ನು ಹೋಗಲಾಡಿಸಿ ಎಲ್ಲರಲ್ಲೂ ಪ್ರಜ್ವಲಿಸಲಿ ಎಂದರು.

- ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ 29 ನೇ ವರ್ಷದ ಲಕ್ಷ ದೀಪೋತ್ಸವಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ. ನರಸಿಂಹರಾಜಪುರ

ಕಾರ್ತಿಕ ಮಾಸ ಶಿವಭಕ್ತರಿಗೆ ವಿಶೇಷ ತಿಂಗಳಾಗಿದೆ ಎಂದು ನಿವೃತ್ತ ಕನ್ನಡ ಪಂಡಿತ ವೇ.ಬ್ರ ವಿ.ಎಸ್.ಕೃಷ್ಣಭಟ್ ತಿಳಿಸಿದರು.

ಗುರುವಾರ ರಾತ್ರಿ ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಸಮಿತಿ ಹಮ್ಮಿಕೊಂಡಿದ್ದ 29 ನೇ ವರ್ಷದ ಲಕ್ಷ ದೀಪೋತ್ಸವ ಉದ್ಘಾಟಿಸಿ ಮಾತನಾಡಿದರು. ಕಾರ್ತಿಕ ಮಾಸ ದೇವರು ಜ್ಯೋತಿರ್ಮಯ ರೂಪದಲ್ಲಿ ಬ್ರಹ್ಮಾಂಡವನ್ನು ಅನುಗ್ರಹಿಸಿದ ಮಾಸ ಎಂಬ ನಂಬಿಕೆ ಇದೆ. ಲಕ್ಷ ದೀಪಗಳ ಬೆಳಕಿನ ಹೊಳಪಿನಲ್ಲಿ ದೇವನಾದ ಮಹೇಶ್ವರ ನಾಮಸ್ಮರಣೆ ಮಾಡುತ್ತಾ ಮನದ ಕತ್ತಲನ್ನು ಹೋಗಲಾಡಿಸಿ ಎಲ್ಲರಲ್ಲೂ ಪ್ರಜ್ವಲಿಸಲಿ ಎಂದರು.

ಲಲಿತ ಭಜನಾ ಮಂಡಳಿ ಮಾಜಿ ಕಾರ್ಯದರ್ಶಿ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, 28 ವರ್ಷಗಳ ಹಿಂದೆ ಎಚ್‌. ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾದ ಲಕ್ಷ ದೀಪೋತ್ಸವ ಸಮಿತಿ ಪ್ರತಿ ವರ್ಷ ಧರ್ಮಿಕ ಕಾರ್ಯಕ್ರಮದೊಂದಿಗೆ ಅದ್ಧೂರಿಯಾಗಿ ಲಕ್ಷ ದೀಪೋತ್ಸವ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ. ಬೆಳಕು ಎಂದರೆ ಕೇವಲ ಜ್ಯೋತಿ ಯಲ್ಲ. ಅದು ಜ್ಞಾನ, ಭಕ್ತಿ, ಶಾಂತಿ ಒಳಗೊಂಡಿದೆ. ಪ್ರಜ್ವಲಿತೋ ಜ್ಞಾನಮಯ ಪ್ರದೀಪ ಎಂಬಂತೆ ದೀಪ ಸಕರಾತ್ಮಕ ಬೆಳವಣಿಗೆಯಾಗಿದೆ. ಇಂತಹ ದೀಪ ಬೆಳಗುವುದರಿಂದ ನಮ್ಮ ಜೀವನದಲ್ಲಿ ಸಂತೋಷ, ನೆಮ್ಮದಿ ಸಿಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ತಾಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೊನೋಡಿ ಗಣೇಶ್ ಮಾತನಾಡಿ, ದೀಪೋತ್ಸವ ಆಚರಣೆ ನಮ್ಮ ಸನಾತನ ಧರ್ಮದಲ್ಲಿ ತುಂಬಾ ಮಹತ್ವ ಪಡೆದಿದೆ. ಎಲ್ಲಾ ಆಚರಣೆಗಳಿಗೂ ವೈಜ್ಞಾನಿಕ ಹಿನ್ನೆಲೆ ಇರುವುದನ್ನು ಗಮನಿಸಬಹುದು. ಇಂದಿನ ಯುವ ಪೀಳಿಗೆಯವರಿಗೆ ಇಂತಹ ಉತ್ಸವಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಬೇಕಾಗಿರುವುದು ಹಿರಿಯರ ಕರ್ತವ್ಯ.28 ವರ್ಷಗಳ ಕಾಲ ಅದ್ಧೂರಿಯಾಗೇ ಲಕ್ಷ ದೀಪೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲೂ ಇದನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಲಕ್ಷ ದೀಪೋತ್ಸವ ಸಮಿತಿ ಅಧ್ಯಕ್ಷ ಎಚ್‌.ನಂಜುಂಡಸ್ವಾಮಿ, ಗೌರವಾಧ್ಯಕ್ಷ ಡಾ.ಪ್ರಸನ್ನಕುಮಾರ್, ಅರ್ಚಕ ಪ್ರಸನ್ನ ಐತಾಳ್, ಓಂ.ಶ್ರೀ ಸುಬ್ರಮಣ್ಯ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಜೆ.ಜಿ.ಸದಾಶಿವ ಭಟ್,ಶಿವಾಂಜನೇಯ ಸಮಿತಿ ಅಧ್ಯಕ್ಷ ಕೆ.ಎಸ್.ಸುರೇಶ್, ಪೂಜಾ ಸಮಿತಿ ಅಧ್ಯಕ್ಷ ಎಚ್.ಎಲ್.ಶಿವಶಂಕರ್,ಲಲಿತ ಭಜನಾ ಮಂಡಳಿ ಅಧ್ಯಕ್ಷೆ ವತ್ಸಲ ಭಾಸ್ಕರ್ ಹಾಗೂ ಸದಸ್ಯೆಯರು ಇದ್ದರು.

ಲಕ್ಷ ದೀಪೋತ್ಸವ ಪ್ರಯುಕ್ತ ಬೆಳಿಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ,ವಿಶೇಷ ಪುಷ್ಪಾಲಂಕಾರ, ಮಹಾ ಪೂಜೆ ಹಾಗೂ ಮಂಗಳಾರತಿ ನಡೆಯಿತು. ರಾತ್ರಿ ಲಕ್ಷ ದೀಪೋತ್ಸವ ಪ್ರಜ್ವಾಲನೆ, ಮಂಗಳಾರತಿ,ಅಷ್ಟಾವಧಾನ ಸೇವೆ ನಡೆಯಿತು. ರಾಗ ಮಯೂರಿ ಅಕಾಡೆಮಿ ಕು.ಗಾನವಿ ಅವರಿಂದ ನೃತ್ಯ ಸೇವೆ, ನಾಗಲಕ್ಷ್ಮಿ ಅವರಿಂದ ಸಂಗೀತ ಸೇವೆ, ವೆಂಕಟೇಶ್ ತಂಡ ದವರಿಗೆ ವಾದ್ಯ ಸೇವೆ, ನಂತರ ಭಜನೆ, ಪ್ರಸಾದ ವಿನಿಯೋಗ ನಡೆಯಿತು.ಲಲಿತಾ ಭಜನಾ ಮಂಡಳಿ ಸದಸ್ಯೆಯರು ಬಿಡಿಸಿದ ಬಣ್ಣದ ಚಿತ್ತಾರದ ದೊಡ್ಡ ಗಾತ್ರದ ರಂಗೋಲಿ ಸಾರ್ವಜನಿಕರ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ