ಮೇದಿನಿ ಮಠದಲ್ಲಿ ಕಾರ್ತಿಕೋತ್ಸವ, ಶಿವಲಿಂಗ ಸ್ವಾಮೀಜಿಗಳ ಪುಣ್ಯಸ್ಮರಣೆ

KannadaprabhaNewsNetwork |  
Published : Nov 12, 2025, 01:00 AM IST
66 | Kannada Prabha

ಸಾರಾಂಶ

ಶಿವಲಿಂಗಸ್ವಾಮೀಜಿ ನೆಪಮಾತ್ರಕ್ಕೆ ಮೇದಿನಿಯಲ್ಲಿ ಮಠದಲ್ಲಿ ಇರುತ್ತಿದ್ದರೆ ಹೊರತು ಅವರ ಮನಸ್ಸೆಲ್ಲ ಸಂಪೂರ್ಣವಾಗಿ ಸಿದ್ದಗಂಗಾ ಮಠದಲ್ಲಿಯೇ ಇರುತ್ತಿತ್ತು.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಜ್ಞಾನದ ಸಂಕೇತವಾದ ದೀಪವನ್ನು ಬೆಳಗಿ ಮನಸಿನ ಅಂಧಕಾರವನ್ನು ತೊಲಗಿಸುವ ಉದ್ದೇಶದಿಂದ ಆಚರಿಸಲ್ಪಡುತ್ತಿರುವುದೇ ಕಾರ್ತಿಕ ಮಾಸ ಎಂದು ಕನಕಪುರ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮೇದಿನಿ ಮಠದಲ್ಲಿ ಆಯೋಜಿಸಿದ್ದ ಕಾರ್ತಿಕೋತ್ಸವ ಹಾಗೂ ಲಿಂಗೈಕ್ಯ ಶಿವಲಿಂಗ ಸ್ವಾಮೀಜಿ ಅವರ 5ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿವಲಿಂಗಸ್ವಾಮೀಜಿ ನೆಪಮಾತ್ರಕ್ಕೆ ಮೇದಿನಿಯಲ್ಲಿ ಮಠದಲ್ಲಿ ಇರುತ್ತಿದ್ದರೆ ಹೊರತು ಅವರ ಮನಸ್ಸೆಲ್ಲ ಸಂಪೂರ್ಣವಾಗಿ ಸಿದ್ದಗಂಗಾ ಮಠದಲ್ಲಿಯೇ ಇರುತ್ತಿತ್ತು. ಸಿದ್ದಗಂಗಾ ಮಠಕ್ಕೆ ಹೋದ ಈ ಭಾಗದ ಜನ ಶಿವಕುಮಾರ ಸ್ವಾಮೀಜಿ ಗಳಿಗಿಂತ ಹೆಚ್ಚಾಗಿ ಮೇದಿನಿ ಶ್ರೀಗಳನ್ನೇ ಕೇಳುತ್ತಿದ್ದರು, ಅಂತಹ ವ್ಯಕ್ತಿತ್ವ ಅವರದು, ಭಕ್ತರ ಕೈಗೆಟುಕುವ ಸಂತರಾಗಿದ್ದರು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಈ ವರ್ಷದ ಕಾರ್ತೀಕೋತ್ಸವ ಮೇದಿನಿ ಮಠದ ಆವರಣದಲ್ಲಿ ಜರುಗುತ್ತಿದೆ. ಮುಂದಿನ ವರ್ಷ ಶೀ ಮಠದ ಭಕ್ತರ ಸಹಾಯ - ಸಹಕಾರಗಳಿಂದ ಲಿಂಗೈಕ್ಯರು ಶಿವಲಿಂಗಸ್ವಾಮೀಜಿಯವರ ಗದ್ದಿಗೆಯಲ್ಲೇ ಆಚರಿಸೋಣ ಎಂದರು.

ರಾಜ್ ಕುಮಾರ್ ಪ್ರಶಸ್ತಿ ಪುರಸ್ಕೃತ ನಾಗಣ್ಣ, ಮುಡಿಗುಂಡ ಮಠದ ಶ್ರೀಕಂಠ ಸ್ವಾಮೀಜಿ, ಇಮ್ಮಡಿ ಶಿವಲಿಂಗ ಸ್ವಾಮೀಜಿ ಹಾಗೂ ಚಾಮರಾಜನಗರ ವೀರಶೈವ ನೌಕರರ ಸಂಘದ ಅಧ್ಯಕ್ಷ ಸಿದ್ಧಮಲ್ಲಪ್ಪ ಮಾತನಾಡಿದರು.

ಹರಗುರುಚರ ಮೂರ್ತಿಗಳು, ಟಿ. ನರಸೀಪುರ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಸ್ ಎಂ.ಪ್ರಕಾಶ್, ಮಳವಳ್ಳಿ ತಾಲ್ಲೂಕಿನ ಅಧ್ಯಕ್ಷ ಕುಂದೂರುಮೂರ್ತಿ, ನಂದಿನಿ, ಸುದೀಪ್, ನಿವೃತ್ತ ಮುಖ್ಯ ಶಿಕ್ಷಕ ಪುಟ್ಟಬುದ್ದಿ, ಮೂರ್ತಿ, ಕು.ಶಿ.ಭೃಂಗೀಶ್, ಶಸಾಪ ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಪ್ರಕಾಶ, ಶಿವಕುಮಾರ್, ಗುರುಸ್ವಾಮಿ, ಮಲ್ಲು, ಬ್ಯಾಂಕ್ ಕುಮಾರ್, ಕೆಬ್ಬಹುಂಡಿ ಶಿವಕುಮಾರ, ಶಿಕ್ಷಕರಾದ ಶೇಖರ್, ಸದಾಶಿವ, ಜಗದೀಶ್, ಮೂಗೂರು ಕುಮಾರಸ್ವಾಮಿ, ಮಹದೇವಪ್ಪ, ಮಹದೇವಸ್ವಾಮಿ, ಉಮೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!