ಬೇಡಿಕೆ ಈಡೇರಿಸಲು ಡಿಸಿಗೆ ಕರುನಾಡ ಕದಂಬ ರಕ್ಷಣಾ ವೇದಿಕೆ ಮನವಿ

KannadaprabhaNewsNetwork |  
Published : Aug 06, 2024, 12:37 AM IST
ಎಚ್‌ಆರ್ ಆರ್‌ 1ಕರುನಾಡ ಕದಂಬ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಹರಿಹರಕ್ಕೆ ತಾಲೂಕು ಕಛೇರಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಅವರಿಗೆ  ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಪೌರಕಾರ್ಮಿಕರು, ಆಶ್ರಯ ಯೋಜನೆ, ನೀರು ಶೇಖರಣ ಘಟಕ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರುನಾಡ ಕದಂಬ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಹರಿಹರಕ್ಕೆ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

- ಕನಿಷ್ಠ ೧೦೦ ಪೌರಕಾರ್ಮಿಕರ ನೇಮಿಸಬೇಕು: ರಾಜ್ಯಾಧ್ಯಕ್ಷ

- - - ಹರಿಹರ: ಪೌರಕಾರ್ಮಿಕರು, ಆಶ್ರಯ ಯೋಜನೆ, ನೀರು ಶೇಖರಣ ಘಟಕ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರುನಾಡ ಕದಂಬ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಹರಿಹರಕ್ಕೆ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆ ರಾಜ್ಯಾಧ್ಯಕ್ಷ ಸುಧಾಕ‌ರ್ ಮಾತನಾಡಿ, ನಗರದ ಜನಸಂಖ್ಯೆ ಅನುಗುಣವಾಗಿ ಕನಿಷ್ಠ ೧೦೦ ಪೌರಕಾರ್ಮಿಕರನ್ನು ನೇಮಿಸಬೇಕು. ಖಾಸಗಿ ಏಜೆನ್ಸಿಗೆ ನೀಡದೇ ನೇರವಾಗಿ, ನಗರಸಭೆಯಿಂದಲೇ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಹರಿಹರ ಪಕ್ಕದಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. "ಸಮುದ್ರಕ್ಕೆ ನೆಂಟಸ್ಥನ ಉಪ್ಪಿಗೆ ಬಡತನ " ಗಾದೆಯಂತೆ ಇಲ್ಲಿ ನದಿ ತುಂಬಿ ಹರಿಯುತ್ತಿದ್ದರೂ ಬೇಸಿಗೆ ಸಂದರ್ಭ ಹರಿಹರದ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ನಗರದ ಜನತೆಗೆ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಸರಿಪಡಿಸಬೇಕು. ನದಿಯ ಪಕ್ಕದಲ್ಲಿರುವ ಹರಿಹರ- ದಾವಣಗೆರೆ ನೀರಿನ ಘಟಕ ಸ್ಥಗಿತಗೊಂಡಿದೆ. ಅದನ್ನು ನಗರಸಭೆ ಸ್ವಾಧೀನಕ್ಕೆ ಪಡೆದು, ನೀರು ಶೇಖರಿಸುವ ಘಟಕ ಸ್ಥಾಪಿಸಿ ಬೇಸಿಗೆ ನೀರಿನ ಅಭಾವ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ವ್ಯಾಪ್ತಿಗೆ ಬರುವ ಆಶ್ರಯ ಕಾಲೋನಿಯ ಪಕ್ಕದಲ್ಲಿ ೨೦ ಎಕರೆಗೂ ಹೆಚ್ಚು ಜಾಗವಿದ್ದು, ಆ ಜಾಗದಲ್ಲಿ ಬಡವರಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡಬೇಕು. ಕನ್ನಡ ಭವನ ನಿರ್ಮಾಣ ಮಾಡಬೇಕು. ಕೆ.ಎಚ್.ಬಿ. ಕಾಲೋನಿ ಅನೇಕ ರಸ್ತೆಗಳು ಮಳೆಯಿಂದಾಗಿ ಕೆಸರು ಗದ್ದೆಯಾಗಿವೆ. ರಸ್ತೆಗಳಲ್ಲಿ ಬೃಹತ್ ಗಾತ್ರದ ಗುಂಡಿಗಳಾಗಿವೆ. ಇಲ್ಲಿನ ಜನ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ರಸ್ತೆ ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಸಂಘಟನೆ ಗೌರವಾಧ್ಯಕ್ಷ ಎಚ್.ಕೆ.ಕೊಟ್ರಪ್ಪ, ವಿದ್ಯಾರ್ಥಿ ಘಟಕ ಅಧ್ಯಕ್ಷ ಚೇತನ್, ಮಾರುತಿ, ಅಜ್ಜು, ಗಂಗನರಸಿ ಪರಶುರಾಮ್, ಪ್ರವೀಣ್, ಗಣೇಶ್, ಉದಯ್ ಇತರರು ಭಾಗವಹಿಸಿದ್ದರು.

- - - -4ಎಚ್‌ಆರ್ ಆರ್‌1:

ಹರಿಹರಕ್ಕೆ ತಾಲೂಕು ಕಚೇರಿಗೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಕರುನಾಡ ಕದಂಬ ರಕ್ಷಣಾ ವೇದಿಕೆ ವತಿಯಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ