ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಸೆ.13ರಂದು ಹಿರಿಯ ಸಾಹಿತಿ ಎಚ್.ಎಸ್.ಮುದ್ದೇಗೌಡರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಇದಕ್ಕೂ ಮೊದಲು ಜಿಲ್ಲೆಯ ಜನತೆಯ ಕ್ಷಮೆ ಕೋರಬೇಕು ಎಂದರು.
ಮಹೇಶ್ ಜೋಶಿ ಅವರು ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಜಿಲ್ಲೆಯ ಜನತೆಗೆ ಅವಮಾನವಾಗುವ ರೀತಿ ನಡೆದುಕೊಂಡಿದ್ದಾರೆ. ಸಾಹಿತ್ಯ ಸಮ್ಮೇಳನದ ಜಿಲ್ಲಾ ಸಂಚಾಲಕರಿಂದ ಜಿಲ್ಲಾ ಕಸಾಪ ಪದಾಧಿಕಾರಿಗಳನ್ನು ತೀರ ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.ಬೆಲ್ಲದಾರತಿ ಸ್ಮರಣ ಸಂಚಿಕೆ ಸಂಬಂಧ ಪೂರ್ವ ಭಾವಿ ಸಭೆಗೆ ಆಮಿಸುವ ಸುದ್ದಿ ತಿಳಿದು ಕ್ಷಮೆ ಕೋರಲು ಒತ್ತಾಯಿಸಲಾಗಿದೆ. ಸ್ಮರಣ ಸಂಚಿಕೆ ಬಿಡುಗಡೆಗೆ ಭೇಟಿ ನೀಡುವಾಗಲೂ ಕ್ಷಮೆ ಕೇಳಲು ಸೂಚಿಸಿದರೆ ಎರಡೂ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಕ್ಷಮೆಯಾಚಿಸಿಲ್ಲ. ಇದೀಗ ಖಾಸಗಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನೇ ವಹಿಸಲು ಮುಂದಾಗಿದ್ದಾರೆ. ಅವರು ಜಿಲ್ಲೆಯ ಜನರ ಕ್ಷಮೆ ಕೋರದಿದ್ದರೆ ಪ್ರತಿಭಟನೆಯ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಸಿದರು.
ಇಂದು ರಾಜ್ಯ ಮಟ್ಟದ ಹವ್ಯಾಸಿ ರಂಗನಟ ಪ್ರಶಸ್ತಿ ಪ್ರದಾನ, ಕೃತಿಗಳ ಬಿಡುಗಡೆ ಸಮಾರಂಭ: ಮುದ್ದೇಗೌಡ
ಜೀವನಾಡಿ ಪತ್ರಿಕೆಯ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಚಲನಚಿತ್ರ ಮತ್ತು ಕಿರುತೆರೆ ನಟ ದಿ.ಎಂ.ರವಿಪ್ರಸಾದ್ ಸ್ಮರಣಾರ್ಥ ಸೆ.13ರಂದು ರಾಜ್ಯ ಮಟ್ಟದ ಹವ್ಯಾಸಿ ರಂಗನಟ ಪ್ರಶಸ್ತಿ, ಜೀವನಾಡಿ ಸಾಹಿತ್ಯ ಸ್ಪರ್ಧೆ ವಿಜೇತರು, ಜೀವನಾಡಿ ವಿಶೇಷ ಸಂಚಿಕೆ ಬಿಡುಗಡೆ, ಜೀವನಾಡಿ ಲೇಖಕರ ಕೃತಿಗಳ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಪತ್ರಿಕೆ ಸಂಪಾದಕ ಡಾ.ಎಚ್.ಎಸ್.ಮುದ್ದೇಗೌಡ ತಿಳಿಸಿದರು.
ಸಾಹಿತಿ ಡಾ.ಎಸ್.ಶ್ರೀನಿವಾಸಶೆಟ್ಟಿ ಅವರು ಜೀವನಾಡಿ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರು ಪುಸ್ತಕಗಳನ್ನು ಬಿಡುಗಡೆ ಮಾಡುವರು. ವಿಶ್ವಾಸ್ ಡಿ.ಗೌಡ ಸಕಲೇಶಪುರ ಹಾಗೂ ಕೀರ್ತಿ ಕಿರಣ್‌ಕುಮಾರ್ ಜಂಭರಡಿ ಅವರು ಕೃತಿಗಳ ವಿಮರ್ಶೆ ಮಾಡುವರು. ಲಿಡ್ಕರ್ ಎಂಡಿ ಡಾ.ಕೆ.ಎಂ.ವಸುಂಧರಾ ಅವರು ತೀರ್ಪುಗಾರರ ಪರ ಮಾತನಾಡುವರು. ಜೈಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಪ್ರಶಸ್ತಿ ವಿತರಿಸುವರು. ಜಿ.ಎಸ್.ಮಾಲತಿ ಪ್ರಸಾದ್, ರಾಜೀವ್ ಆರ್.ಗೌಡ ಸಮಾರಂಭದಲ್ಲಿ ಭಾಗವಹಿಸುವರು ಎಂದರು.