ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಮುಖ್ಯರಸ್ತೆಯಿಂದ ಗಾಂಧಿ ಗ್ರಾಮದ 3 ಕಿ.ಮೀ. ಸಂಪರ್ಕ ರಸ್ತೆ ಬಾರೀ ಮಳೆ ಯಿಂದ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಆ ಭಾಗದ ಗ್ರಾಮಸ್ಥರು ಸೇರಿ ಶುಕ್ರವಾರ ಶ್ರಮದಾನದ ಮೂಲಕ ಗುಂಡಿಗಳಿಗೆ ಮರಳು ಮಿಶ್ರಿತ ಕಲ್ಲು, ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದರು.
ಶ್ರಮದಾನದಲ್ಲಿ ರೈತರ 7 ಟ್ರಾಕ್ಟರ್ ಬಳಸಲಾಗಿತ್ತು. 3 ಕಿ.ಮೀ. ರಸ್ತೆ ದುರಸ್ತಿ ಮಾಡಿದರು. ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ಕಡಹಿನಬೈಲು ಗ್ರಾಪಂ ಮಾಜಿ ಉಪಾಧ್ಯಕ್ಷ ಗಾಂಧಿ ಗ್ರಾಮ ನಾಗರಾಜ, ಮಾಜಿ ಉಪಾಧ್ಯಕ್ಷ ಡಿ.ಜಿ.ಸತೀಶ, ಗ್ರಾಪಂ ಸದಸ್ಯ ರವೀಂದ್ರ, ಗ್ರಾಮದ ಮುಖಂಡರಾದ ಸಂತೋಷ್, ಕೌಸಿಕ್ , ಬಾಳೆಮನೆ ಅಜಂತ, ಬಸೀರ್, ಕೌಶಿಕ್, ರಾಜೇಶ್,ದೇವರಾಜ್, ಅವಿನಾಶ್, ಅಷ್ಪಕ್, ಎ.ಬಿ.ವಿಜಯ, ರಜಿ, ಅಜಿಲೇಶ್ , ಪಿ.ಸತೀಶ್ ಸೇರಿದಂತೆ ಆಟೋ ಚಾಲಕರು, ಗ್ರಾಮಸ್ಥರು ಪಾಲ್ಗೊಗೊಂಡಿದ್ದರು.ಈ ಬಾಗದ ಮುಖಂಡರ ಕೋರಿಕೆಯಂತೆ ಶಾಸಕ ಟಿ.ಡಿ.ರಾಜೇಗೌಡ ಅವರು ಗಾಂಧಿ ಗ್ರಾಮ ರಸ್ತೆಗೆ ₹50 ಲಕ್ಷ ಮಂಜೂರು ಮಾಡಿದ್ದಾರೆ. ಆದರೆ, ಮಳೆ ಬರುತ್ತಿರು ವುದರಿಂದ ಕಾಮಗಾರಿ ವಿಳಂಬವಾಗಿದೆ. ಮಳೆ ಬಿಟ್ಟ ನಂತರ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಲ್ಯಾಂಡ್ ಆರ್ಮಿ ಎಂಜಿನಿಯರ್ ರಾಜೇಂದ್ರ ಮಾಹಿತಿ ನೀಡಿದರು.--ಕೋಟ್--
ಈ ರಸ್ತೆ ತುಂಬಾ ಹಾಳಾಗಿದೆ. ಮಳೆ ಕಾರಣ ಕಾಮಗಾರಿ ವಿಳಂಬವಾಗಿರುವುದರಿಂದ ನಮ್ಮ ಊರು, ನಮ್ಮ ರಸ್ತೆ, ನಮ್ಮ ಜನ ಕಲ್ಪನೆಯಡಿ ಪಕ್ಷತೀತವಾಗಿ ಎಲ್ಲಾ ಗ್ರಾಮಸ್ಥರು, ಆಟೋ ಚಾಲಕರು ಸೇರಿ 3 ಕಿ.ಮೀ.ರಸ್ತೆ ದುರಸ್ಥಿ ಮಾಡಿದ್ದೇವೆ. ಗ್ರಾಮಸ್ಥರು ಟ್ರಾಕ್ಟರ್ ನೀಡಿ ಸಹಕಾರ ನೀಡಿದ್ದಾರೆ ಎಂದರು.- ಡಿ.ಜಿ.ಸತೀಶ್, ಮಾಜಿ ಉಪಾಧ್ಯಕ್ಷ
ಕಹಿನಬೈಲು ಗ್ರಾಪಂ