ಕನ್ನಡದ ಭಾಷಾಭಿಮಾನ ಬೆಳೆಸುವಲ್ಲಿ ಕಸಾಪ ಕಾರ್ಯ ಶ್ಲಾಘನೀಯ

KannadaprabhaNewsNetwork |  
Published : May 07, 2026, 02:45 AM IST
ಸವಣೂರ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದ  ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕನ್ನಡಿಗರು ಭಾಷಾ ಅಭಿಮಾನಿಗಳಾಗಬೇಕು, ಕನ್ನಡದ ನೆಲ, ಜಲ, ಭಾಷೆ ಬೆಳವಣಿಗೆಗೆ ಸದಾ ಸನ್ನದ್ಧರಾಗಿರಬೇಕು. ಕನ್ನಡದ ಭಾಷಾಭಿಮಾನ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ ಹೇಳಿದರು.

ಸವಣೂರು: ಕನ್ನಡಿಗರು ಭಾಷಾ ಅಭಿಮಾನಿಗಳಾಗಬೇಕು, ಕನ್ನಡದ ನೆಲ, ಜಲ, ಭಾಷೆ ಬೆಳವಣಿಗೆಗೆ ಸದಾ ಸನ್ನದ್ಧರಾಗಿರಬೇಕು. ಕನ್ನಡದ ಭಾಷಾಭಿಮಾನ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸವಣೂರ ಹಾಗೂ ಹಿತ್ತಲಮನಿ ಕೋಚಿಂಗ್ ಕ್ಲಾಸೆಸ್ ಸವಣೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ನೆನಪಿಸಿಕೊಂಡು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಡಾ. ಜಾಫರುಲ್ಲಾಖಾನ್ ಕೆ.ಕೆ. ಉಪನ್ಯಾಸ ನೀಡಿ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೊಂಡ ಹಿನ್ನೆಲೆಯನ್ನು ತಿಳಿಸಿ, ಪರಿಷತ್ತು ಸ್ಥಾಪನೆಗೊಳ್ಳಲು ಕಾರಣರಾದ ರಾಜರ್ಸಿ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ, ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆಯನ್ನು ಸ್ಮರಿಸಿಕೊಂಡು, ಪರಿಷತ್ತು ಹಲವಾರು ಸಮ್ಮೇಳನಗಳು ಹಾಗೂ ಕಾರ್ಯಕ್ರಮಗಳ ಮೂಲಕ ಕನ್ನಡದ ಅಭಿಮಾನ ಪೂರ್ವಕವಾದ ಚಟುವಟಿಕೆಗಳನ್ನು ಹಮ್ಮಿಕೊಂಡು ಕನ್ನಡದ ನೆಲ, ಜಲ ಭಾಷೆಗಾಗಿ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿದೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಚಂದ್ರಗೌಡ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪ್ರಭು ಅರಗೋಳ, ವೀರೇಶ ಹಿತ್ತಲಮನಿ, ಬಸವರಾಜ ಕಟಗಿಹಳ್ಳಿ, ಆರ್.ಎನ್. ತುಂಡೂರ, ಈರಯ್ಯ ಹಿರೇಮಠ, ಎಂ.ಎಸ್. ಅಕ್ಕಿ, ವಿಶ್ವನಾಥ ಹಾವಣಗಿ, ಬಸನಗೌಡ ಪಾಟೀಲ, ಮಹಾಂತೇಶ ಕುತನಿ, ಎಚ್.ಎನ್. ಭಜಂತ್ರಿ, ರಾಜು ಕುಮರಿ, ಕೋಚಿಂಗ್ ಕ್ಲಾಸ್‌ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸನ್ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಾದ ತವರಮಳ್ಳಿ ಹಳ್ಳಿ ಪ್ರೌಢಶಾಲೆಯ ನವೀನ್ ಕುಮಾರ್, ಪ್ರಕಾಶ್ ಬಾರ್ಕಿ, ಕುಣಿ ಮಳ್ಳಿಹಳ್ಳಿ ಪ್ರೌಢಶಾಲೆಯ ಎಲ್ಲಪ್ಪ ಜಗದೀಶ್ ಆಡೂರ್, ಮತ್ರೋಡಿ ಪ್ರೌಢಶಾಲೆಯ ಐಶ್ವರ್ಯ ಜಯಪ್ರಕಾಶ್ ಗಾಡಗೋಳಿ, ಜಲ್ಲಾಪುರ ಪ್ರೌಢಶಾಲೆಯ ತನುಜಾ, ರಾಜು ಕುಮರಿ ಈ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೋಚಿಂಗ್ ಸೆಂಟರನ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಗೂ ನಾಡಗೀತೆಯನ್ನು ಹಾಡಿದರು. ಎಸ್.ವಿ. ಕೋಳಿವಾಡ ಸ್ವಾಗತಿಸಿದರು. ಸಿ.ವಿ. ಗುತ್ತಲ ನಿರೂಪಿಸಿದರು. ಎಂ.ಎಸ್. ಮಲ್ಲನಗೌಡ್ರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹೆ-ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಒಪ್ಪಂದ
ಉಡುಪಿ: ಅಗ್ನಿಶಾಮಕ ದಳದ ಬಲವರ್ಧನೆ ಬಿಜೆಪಿ ಯುವಮೋರ್ಚಾ ಮನವಿ