ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ಗೆ ಕಶ್ವಿ ಸುನೀಲ್ ಆಯ್ಕೆ

KannadaprabhaNewsNetwork |  
Published : May 08, 2025, 12:31 AM IST
೭ಕೆಎಂಎನ್‌ಡಿ-೬ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಿಇಟಿ ಆಡಳಿತಾಧಿಕಾರಿ ಡಾ.ಅನಂತ ಪದ್ಮನಾಭಪ್ರಭು ಹಾಜರಿದ್ದರು. | Kannada Prabha

ಸಾರಾಂಶ

೨೦೨೪ರ ಡಿಸೆಂಬರ್‌ನಲ್ಲಿ ರಾಜಸ್ತಾನದ ಅಜ್ಮೀರ್‌ನಲ್ಲಿ ನಡೆದ ೬೭ನೇ ರಾಷ್ಟ್ರೀಯ ಕ್ರೆಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕಶ್ವಿ ಸುನೀಲ್ ತಂಡದ ಪರವಾಗಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದಿದ್ದು, ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೇ ೧೦ರಿಂದ ೧೪ರ ವರೆಗೆ ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಕಶ್ವಿ ಸುನೀಲ್ ಆಯ್ಕೆಯಾಗಿದ್ದಾರೆ ಎಂದು ಪಿಇಎಸ್ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಪಿಇಟಿ ಆಡಳಿತಾಧಿಕಾರಿ ಡಾ.ಅನಂತ ಪದ್ಮನಾಭಪ್ರಭು ತಿಳಿಸಿದರು.

೨೦೨೪ರ ಡಿಸೆಂಬರ್‌ನಲ್ಲಿ ರಾಜಸ್ತಾನದ ಅಜ್ಮೀರ್‌ನಲ್ಲಿ ನಡೆದ ೬೭ನೇ ರಾಷ್ಟ್ರೀಯ ಕ್ರೆಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕಶ್ವಿ ಸುನೀಲ್ ತಂಡದ ಪರವಾಗಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದಿದ್ದು, ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

೨೦೨೪ರ ಮಾರ್ಚ್‌ನಲ್ಲಿ ಜೆ-೩೦ ಮತ್ತು ಆಗಸ್ಟ್‌ನಲ್ಲಿ ಜೆ-೬೦ ಅಂತಾರಾಷ್ಟ್ರೀಯ ಟೆನ್ನಿಸ್ ಫೆಡರೇಷನ್ ವತಿಯಿಂದ ನಡೆದ ಪಂದ್ಯಾವಳಿಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದು, ೨೦೨೦ರಿಂದ ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಷನ್‌ನ ಹಲವು ಪಂದ್ಯಾವಳಿಗಳನ್ನು ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಟೆನ್ನಿಸ್ ಫೆಡರೇಷನ್ ಜೂನಿಯರ್ ವರ್ಲ್ಡ್ ರ್ಯಾಂಕಿಂಗ್ ೨೦೨೫ರ ಜನವರಿಯ ಪ್ರಕಟಣೆಯಂತೆ ೬೩೨ನೇ ರ್ಯಾಂಕ್ ಹೊಂದಿದ್ದರು ಎಂದು ತಿಳಿಸಿದರು.

ಕಶ್ವಿ ಅವರ ತಂದೆ ಸುನೀಲ್ ಮಾತನಾಡಿ, ರಾಷ್ಟ್ರದಲ್ಲಿ ಆಯೋಜಿಸಲಾಗುತ್ತಿರುವ ಸಾಕಷ್ಟು ಪಂದ್ಯಾವಳಿಗಳಲ್ಲಿ ಭಾಗವಹಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಕೈಲಾದಷ್ಟು ಪಂದ್ಯಾವಳಿಗಳಲ್ಲಿ ಮಗಳ ಪ್ರತಿಭೆ ಅನಾವರಣಗೊಳಿಸಲು ಪ್ರಯತ್ನಿಸುತ್ತಿದ್ದು, ಆಯ್ಕೆ ಸಮಸ್ಯೆ ಎದುರಾಗಿ ಎಲ್ಲ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರು.

ತರಬೇತುದಾರ ಎಂ.ಎಸ್. ಮಂಜುನಾಥ್ ಮಾತನಾಡಿ, ಕಶ್ವಿ ಸುನಿಲ್‌ಗೆ ಪ್ರಾಯೋಜಕತ್ವ ದೊರೆತಲ್ಲಿ ಆಕೆಯ ಪ್ರತಿಭೆಯನ್ನು ಮತ್ತಷ್ಟು ಮುನ್ನಡೆಗೆ ತಂದು ಉತ್ತಮ ರ್‍ಯಾಂಕಿಂಗ್ ಪಡೆಯಲು ಸಾಧ್ಯವಾಗುತ್ತದೆ. ಹಾಗಾದಲ್ಲಿ ೧೮ ವರ್ಷ ತುಂಬುವುದರೊಳಗೆ ಕಶ್ವಿ ರಾಷ್ಟ್ರವನ್ನು ಪ್ರತಿನಿಸಲು ಸಶಕ್ತ ಕ್ರೆಡಾಪಟುವಾಗಲಿದ್ದಾರೆ ಎಂದು ಶ್ಲಾಘಿಸಿದರು.

ಸುದ್ದಿಗೋಷ್ಠಿಯಲ್ಲಿ ಲಾನ್ ಟೆನ್ನಿಸ್ ಕ್ರೆಡಾಪಟು ಕಶ್ವಿ ಸುನಿಲ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ