ಸಂಭ್ರಮದಿಂದ ನಡೆದ ಕಸ್ತೂರು ಬಂಡಿಜಾತ್ರೆ

KannadaprabhaNewsNetwork |  
Published : Dec 29, 2025, 02:00 AM IST
ಚಾಮರಾಜತಾಲ್ಲೂಕಿನಕಸ್ತೂರುದೊಡ್ಡಮ್ಮತಾಯಿ ಬಂಡಿಜಾತ್ರೆ ಪ್ರಯುಕ್ತದೊಡ್ಡಮ್ಮತಾಯಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. | Kannada Prabha

ಸಾರಾಂಶ

ತಾಲೂಕಿನ ಕಸ್ತೂರು ದೊಡ್ಡಮ್ಮತಾಯಿ ಬಂಡಿಜಾತ್ರೆಯಲ್ಲಿ ಭಾನುವಾರ ಸಾವಿರಾರು ಭಕ್ತರ ಸಡಗರ ಸಂಭ್ರಮದೊಂದಿಗೆ ವಿವಿಧ ಗ್ರಾಮಗಳ ಬಂಡಿಗಳು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವುದರೊಂದಿಗೆ ವಿಜೃಂಭಣೆಯಿಂದ ಜರುಗಿತು .

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಕಸ್ತೂರು ದೊಡ್ಡಮ್ಮತಾಯಿ ಬಂಡಿಜಾತ್ರೆಯಲ್ಲಿ ಭಾನುವಾರ ಸಾವಿರಾರು ಭಕ್ತರ ಸಡಗರ ಸಂಭ್ರಮದೊಂದಿಗೆ ವಿವಿಧ ಗ್ರಾಮಗಳ ಬಂಡಿಗಳು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವುದರೊಂದಿಗೆ ವಿಜೃಂಭಣೆಯಿಂದ ಜರುಗಿತು .

ಕಸ್ತೂರಿನ ದೊಡ್ಡಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ಹದಿನಾರು ಹಳ್ಳಿಗಳ ಅಲಂಕೃತ ಬಂಡಿಗಳು ಸಮಾಗಮಗೊಂಡು ಜಾತ್ರೆಗೆ ಮೆರವು ನೀಡಿದವು.

ಭಾನುವಾರ ಬೆಳಗ್ಗೆಯೇ ಭಕ್ತರು ದೊಡ್ಡಮ್ಮತಾಯಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದರಿಂದ ಎಲ್ಲೆಲ್ಲೂ ಜನರೇ ಕಾಣತೊಡಗಿದರು. ಮಧ್ಯಾಹ್ನ ಆಗುತ್ತಿದ್ದಂತೆಯೇ ಒಂದೊಂದಾಗಿ ವಿವಿಧ ಗ್ರಾಮಗಳ ಬಂಡಿಗಳು ಜಾತ್ರೆಯಂಗಳಕ್ಕೆ ಆಗಮಿಸುತ್ತಿದ್ದಂತೆ ಭಕ್ತರು ಜಯಘೋಷ ಹಾಕಿ ಸಂಭ್ರಮಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಬಂಡಿಜಾತ್ರೆಯಲ್ಲಿ ಪಾಲ್ಗೊಂಡು ದೊಡ್ಡಮ್ಮತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ನಾಡಿಗೆ ಉತ್ತಮ ಮಳೆ-ಬೆಳೆಯಾಗಿ ಸಮೃದ್ದಿ ನೆಲೆಸಿ ರೈತರಿಗೆ ಅನುಕೂಲವಾಗಿ ಎಲ್ಲರಿಗೂ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿ ಹಬ್ಬ-ಜಾತ್ರೆಗಳ ಮೂಲಕ ಗ್ರಾಮೀಣ ಸಂಪ್ರದಾಯ ಸಂಸ್ಕೃತಿಯು ಯುವಜನರಲ್ಲಿ ಅರಿವನ್ನುಂಟು ಮಾಡಿ ಸಂಸೃತಿ ಉಳಿವಿಗೆ ಮುಂದಾಗಲಿ ಎಂದು ಆಶಿಸಿದರು

ಚಳಿಗಾಲದಲ್ಲೂ ಮಧ್ಯಾಹ್ನದ ಸುಡುವ ಬಿಸಿಲಿದ್ದರೂ, ಜಾತ್ರೆಯ ಸಂಭ್ರಮಕ್ಕೆ ತಡೆವೊಡ್ಡಲಿಲ್ಲ. ವ್ಯಾಪಾರ, ವಹಿವಾಟು ಸಹ ಜೋರಾಗಿಯೇ ಸಾಗಿತ್ತು. ಕಸ್ತೂರು, ಮರಿಯಾಲ, ಮರಿಯಾಲದ ಹುಂಡಿ, ಕೆಲ್ಲಂಬಳ್ಳಿ, ಭೋಗಾಪುರ, ಕಿರಗಸೂರು, ದಾಸನೂರು, ಸಪ್ಪಯ್ಯನಪುರ, ಹನಹಳ್ಳಿ, ಮೂಕಹಳ್ಳಿ, ಚಿಕ್ಕಹೊಮ್ಮ, ದೊಡ್ಡಹೊಮ್ಮ, ಅಂಕುಶರಾಯನಪುರ, ತೊರವಳ್ಳಿ, ಪುಟ್ಟಯ್ಯನಹುಂಡಿ, ಹೊನ್ನೇಗೌಡನಹುಂಡಿ, ಬಸವನಪುರ ಸೇರಿದಂತೆ ೨೩ ಗ್ರಾಮಗಳಲ್ಲೂ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು.೧೬ ಗ್ರಾಮಗಳ ಬಂಡಿಗಳನ್ನು ಬಾಳೆಹಣ್ಣು ಗೊನೆ, ಬೃಹತ್‌ಗಾತ್ರದ ಹೂವಿನ ಹಾರ, ತೆಂಗಿನಕಾಯಿ ಗೊಂಚಲು, ತಳಿರುತೋರಣ ಕಟ್ಟಿ, ಸಿಂಗರಿಸಿಲಾಗಿತ್ತು. ಭಾನುವಾರ ಮಧ್ಯಾಹ್ನ ೧೨.೩೦ರ ಹೊತ್ತಿಗೆ ಜಾತ್ರೆ ನಡೆಯುವ ಕಸ್ತೂರುಗ್ರಾಮದ ಬಳಿಯಿರುವ ಜಾತ್ರೆಯಂಗಳಕ್ಕೆ ತೆರಳಿದ ಬಂಡಿಗಳು, ದೇವಸ್ಥಾನಸುತ್ತ ಪ್ರದಕ್ಷಿಣೆ ಹಾಕಿ, ತೀರ್ಥ ಸಂಪ್ರೋಕ್ಷಣೆ ಮಾಡಿಸಿಕೊಂಡವು. ನೆರೆದಿದ್ದ ಭಕ್ತಾದಿಗಳು ಬಂಡಿಗೆ ಕಾಯಿ ಒಡೆದು ಭಕ್ತಿ ಸಮರ್ಪಿಸಿದರು.ಕಸ್ತೂರು ಬಂಡಿಯ ನಂತರ ಕಿರಗಸೂರು, ಭೋಗಾಪುರ, ಕೆಲ್ಲಂಬಳ್ಳಿ, ತೊರವಳ್ಳಿ, ದಾಸನೂರು, ಮರಿಯಾಲ ಸೇರಿದಂತೆ ೧೬ ಗ್ರಾಮಗಳ ಬಂಡಿಗಳು ಜಾತ್ರೆಯಂಗಳದಲ್ಲಿ ಸಮಾವೇಶಗೊಂಡವು.ಎತ್ತುಗಳ ಕೊಂಬುಗಳಿಗೆ ಬಣ್ಣತುಂಬಿ, ಕೊರಳಿಗೆ ಗೆಜ್ಜೆಹಾರವನ್ನು ಕಟ್ಟಿ ದೇವಸ್ಥಾನ ಸುತ್ತ ದೀವಟಿಗೆ ಸೇವೆ ಮಾಡಿದರು. ಹರಕೆ ಹೊತ್ತ ಭಕ್ತರು ಪಂಜಿನ ಸೇವೆ ನೆರವೇರಿಸಿದರು. ಸರತಿ ಸಾಲಿನಲ್ಲಿ ನಿಂತು ಭಕ್ತರುದೇವರದರ್ಶನ ಪಡೆದರು.ದೇವರ ದರುಶನಕ್ಕೆ ತೆರಳುವ ಭಕ್ತರಿಗೆ ಸರತಿ ಸಾಲಿನಲ್ಲಿ ನಿಲ್ಲಲು ಬ್ಯಾರಿಕೇಡ್ ಅಳವಡಿಸಿದ್ದರಿಂದ ನೂಕುನುಗ್ಗಲು ಉಂಟಾಗಲಿಲ್ಲ. ಭಕ್ತಾದಿಗಳು ವ್ಯವಸ್ಥಿತವಾಗಿ ದೇವರದರ್ಶನ ಪಡೆದರು. ಪಕ್ಕದಲ್ಲೇ ಇರುವ ಮಹದೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆಜರುಗಿದವು. ಯಾವುದೇ ಅಹಿತಕರಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು.

ಜಾತ್ರೆಗೆ ಆಗಮಿಸುವ ಭಕ್ತರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ದ್ವಿಚಕ್ರ ವಾಹನ ಹಾಗೂ ಬಸ್ ನಿಲುಗಡೆಗೆ ಜಾತ್ರಾವರಣ ಸಮೀಪದಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ಝಳ ಹೆಚ್ಚಿದ್ದರಿಂದ ತಂಪು ಪಾನೀಯಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಪೊಲೀಸರು ಸಂಚಾರ ವ್ಯವಸ್ಥೆ ಸರಿಪಡಿಸಲು ಹರಸಾಹಸ ಪಡಬೇಕಾಯಿತು, ನಿಲ್ಲಿಸಿದ್ದ ವಾಹನಗಳನ್ನು ತೆಗೆದುಕೊಳ್ಳಲು ಜನರು ಹರಸಾಹಸಪಟ್ಟರು.ಈ ಸಂಧರ್ಭದಲ್ಲಿ ತಹಸೀಲ್ದಾರ್ ಗಿರಿಜ, ಗ್ರಾಪಂ ಮಾಜಿ ಅಧ್ಯಕ್ಷ ಶಿವಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ