ಪರ್ಯಾಯ ಶಿರೂರು ಮಠ ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಪಿವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ಸಾಹಿತ್ಯ ಸಮ್ಮೇಳನ 2026 ಶ್ರೀ ಕೃಷ್ಣ ಮಠದ ಉಡುಪಿಯ ರಾಜಾಂಗಣದಲ್ಲಿ ಏ. 12 ರಂದು ಜರುಗಲಿದೆ.
ಉಡುಪಿ: ಪರ್ಯಾಯ ಶಿರೂರು ಮಠ ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಪಿವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ಸಾಹಿತ್ಯ ಸಮ್ಮೇಳನ 2026 ಶ್ರೀ ಕೃಷ್ಣ ಮಠದ ಉಡುಪಿಯ ರಾಜಾಂಗಣದಲ್ಲಿ ಏ. 12 ರಂದು ಜರುಗಲಿದೆ.
ಅಂದು 20 ಕೃತಿಗಳ ಅನಾವರಣ ನಡೆಯಲಿದೆ. ಬಿಕೆ ಮಾಧವರವರಿಗೆ ಕಲಾ ತಿಲಕ ಬಿರುದು ಪ್ರದಾನ ಹಾಗೂ ಗಾಯನ ಕ್ಷೇತ್ರದಲ್ಲಿ ಪುಷ್ಪರಾಧ್ಯ ಮತ್ತು ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಸಾಹಿತ್ಯ, ಡಾ. ಬಾಲಕೃಷ್ಣ ಎಸ್ ಮುದ್ದೋಡಿ ಸಾಮಾಜಿಕ, ಸಂಧ್ಯಾ ರಾಣಿ ಟೀಚರ್ ಕನ್ನಡ ಭವನ ಕಾಸರಗೋಡು, ಲಕ್ಷ್ಮಿ ಕೆ ಸಾಹಿತ್ಯ ಮತ್ತು ನಾಣ್ಯ ಸಂಗ್ರಹ, ಶೋಭಾ ಹರಿಪ್ರಸಾದ್ ಸಾಹಿತ್ಯ, ಕುಸುಮಾ ಹತ್ಯಾಳ ಸಾಹಿತ್ಯ ಹಾಗೂ ಸುಮಕಿರಣ್ ಸಾಹಿತ್ಯ ಅಯನ ವಿ. ರಮಣ್ ಬಹುಮುಖ ಪ್ರತಿಭೆ ಹಾಗೂ ವಂಶಿ ವೈ ಕೋಟ್ಯಾನ್ ನೃತ್ಯ ಇವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಶ್ರೀ ಕೃಷ್ಣ ಮಠ ಉಡುಪಿ, ಪರ್ಯಾಯ ಶ್ರೀ ಶಿರೂರು ಮಠದ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು ಉದ್ಘಾಟನೆಯನ್ನು ನೆರವೇರಿಸುವರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹಾಗೂ ಶ್ರೀಪತಿ ಭಟ್, ಪ್ರದೀಪ್ ಕುಮಾರ್ ಕಲ್ಕೂರ ಇವರು ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಅನಾವರಣವನ್ನು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಡಾ. ಕೊಳಚೆಪ್ಪೆ ಗೋವಿಂದ ಭಟ್, ಜಯಾನಂದ ಪೆರಾಜೆ ಆಗಮಿಸಲಿದ್ದಾರೆ ಎಂದು ಕಥಾಬಿಂದು ಪಿವಿ ಪ್ರದೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.