ಮುಧೋಳ: ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿದ್ದಾರೆ ನಿಜ. ಆದ್ರೆ ಮಧೋಳ ತಾಲೂಕಿನಲ್ಲಿ ಸಮರ್ಪಕ ಮಳೆ ಆಗಲಾರದ ಕಾರಣ ಮುಂಗಾರು ಬೆಳೆಯು ಸಂಪೂರ್ಣ ಹಾನಿ ಆಗಿ, ಧನಕರುಗಳಿಗೆ ಮೇವಿನ ತೊಂದರೆ ಉಂಟಾಗಿ ರೖೆತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಮುಧೋಳ: ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿದ್ದಾರೆ ನಿಜ. ಆದ್ರೆ ಮಧೋಳ ತಾಲೂಕಿನಲ್ಲಿ ಸಮರ್ಪಕ ಮಳೆ ಆಗಲಾರದ ಕಾರಣ ಮುಂಗಾರು ಬೆಳೆಯು ಸಂಪೂರ್ಣ ಹಾನಿ ಆಗಿ, ಧನಕರುಗಳಿಗೆ ಮೇವಿನ ತೊಂದರೆ ಉಂಟಾಗಿ ರೖೆತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಹಿಂದೆಂದೂ ಇರಲಾರದ ಬರಗಾಲದ ಛಾಯೆ ಈಗ ಉಧ್ಭವಿಸಿದ್ದು, ತಾಲೂಕಿನ ಶಾಸಕರಿಗೆ ಈ ವಿಷಯ ಗೊತ್ತಿದ್ದರು ಮೌನವಹಿಸಿರುವುದು ಕ್ಷೇತ್ರದ ಜನತೆಗೆ ಮಾಡಿರುವ ಮಹಾ ಮೋಸವಾಗಿದೆ. ಇದನ್ನು ಬಿಜೆಪಿ ಸಹಿಸುವುದಿಲ್ಲ, ಈಗಲಾದರೂ ಕ್ಷೇತ್ರದ ಶಾಸಕರು ಮರು ಪರಿಶೀಲಿಸಿ ಮುಧೋಳ ತಾಲೂಕು ಬರಗಾಲ ಘೋಷಣೆ ಮಾಡಿಸಬೇಕು. ಇಲ್ಲದಿದ್ದರೆ ಬಿಜೆಪಿ ನಗರ ಹಾಗೂ ಗ್ರಾಮೀಣ ಘಟಕದಿಂದ ಉಗ್ರ ಹೋರಾಟ ನಡೆಸುವುದಾಗಿ ಮುಧೋಳ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗನಗೌಡ ಕಾತರಕಿ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.