ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ 2003-04ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಕಾಖಂಡಕಿಯ ಗುರುದೇವ ಆಶ್ರಮದ ಶಿವಯೋಗೇಶ್ವರ ಸ್ವಾಮೀಜಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆಗೆ ವಿಶೇಷ ಸ್ಥಾನವಿದೆ. ಶಿಕ್ಷಕ ವೃತ್ತಿ ಕೇವಲ ಕೆಲಸವಲ್ಲ. ಕೆಲಸ ಅಂತ ತಿಳಿದುಕೊಂಡರೆ ಅದು ನಮಗೆ ಅವಮಾನ. ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆಗೆ ವಿಶೇಷ ಸ್ಥಾನವಿದೆ. ಶಿಷ್ಯನಾದವನಲ್ಲಿ ಆತುರತೆ ಇರುವ ಜೊತೆಗೆ ಕಲಿಯುವ ಹಂಬಲ ಇರಬೇಕು. ವಿದ್ಯೆಯನ್ನು ಬಯಸುವನೇ ನಿಜವಾದ ವಿದ್ಯಾರ್ಥಿ. ಗುರುಗಳಿಗೆ ಶಿಷ್ಯರಾದವರು ಯಾವಾಗಲೂ ವಿನೀತರಾಗಿರಬೇಕು ಎಂದು ಕಾಖಂಡಕಿಯ ಗುರುದೇವ ಆಶ್ರಮದ ಶಿವಯೋಗೇಶ್ವರ ಸ್ವಾಮೀಜಿ ಹೇಳಿದರು.ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ 2003-04ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾಹಿತಿ ಅಶೋಕ ಹಂಚಲಿ ಮಾತನಾಡಿ, ಜ್ಞಾನದ ಭಿಕ್ಷೆ ನೀಡುವ ಗುರುಗಳಿಗೆ ನಮನ ಸಲ್ಲಿಸುವುದು ಒಂದು ಸತ್ಕಾರ್ಯ. ಗುರುವಿನ ಋಣ ತೀರಿಸಲು ಅಸಾಧ್ಯ. ಜ್ಞಾನದ ಬೆಳಕನ್ನು ತೋರಿಸಿ ಕತ್ತಲೆ ದೂರ ಮಾಡಿ ನಮ್ಮೊಳಗಿನ ಸಾಮರ್ಥ್ಯ ಗುರುತಿಸಿ, ಅದನ್ನು ಬೆಳೆಸಿದ ಗುರುವಿಗೆ ವಂದನೆ ತಿಳಿಸಿರುವುದು ಶ್ಲಾಘನೀಯ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ವಿ.ಡಿ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡಿದಿನ್ನಿ ಮಾತನಾಡಿ, ಶಿಕ್ಷಣದಿಂದ ಜ್ಞಾನ, ಸಂಸ್ಕಾರ, ಉತ್ತಮ ಮೌಲ್ಯಗಳು ಸಿಗುತ್ತವೆ. ಅಂತಹ ಶಿಕ್ಷಣವನ್ನ ಪ್ರಸಾರ ಮಾಡುವವರು ನಮ್ಮ ಎಲ್ಲ ಗುರುಗಳು. ಗುರುಗಳ ಮಾರ್ಗದರ್ಶನವನ್ನು ಜೀವನದುದ್ದಕ್ಕೂ ಪಡೆದು ನೀವು ಮುಂದಿನ ಪೀಳಿಗೆಗೆ ಮಾದರಿಯಾಗಿರಿ ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ ಸಾರವಾಡ ಗ್ರಾಮದ ರೇಣುಕಾಸ್ವಾಮಿ ಹಿರೇಮಠ ಮಾತನಾಡಿದರು.ಪ್ರಾಥಮಿಕದಿಂದ ಹಿಡಿದು ಪ್ರೌಢಶಾಲೆಯ ಎಲ್ಲ ಶಿಕ್ಷಕರಿಗೂ ಕೂಡ ಗೌರವಿಸಿ ಸನ್ಮಾನಿಸಲಾಯಿತು. ಎಲ್.ಪಿ.ಬಿರಾದಾರ, ಎಸ್.ಆರ್.ಗುದಿಗೆನ್ನವರ ಮಾತನಾಡಿದರು. ಈರಪ್ಪ ಕುಂಬಾರ, ಪ್ರೊ.ಪ್ರೇಮಾನಂದ ದೇಸಾಯಿ, ಸಂಗಮೇಶ ಚಟ್ಟೇರ, ಶಾಂತು ಹೊಸಮನಿ, ಪ್ರೊ.ದೀಪಾ ಲಗಳಿ, ಕಾಶಿಬಾಯಿ ನಾಗೊಂಡ ಅನಿಸಿಕೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಎಂ.ಐ.ಕೋಟಿ, ಕೆ.ಐ.ಪಾರಶೆಟ್ಟಿ, ಎನ್.ಪಿ.ಲಮಾಣಿ, ಶಿವಲೀಲಾ ತೆಲಗಿ, ರೇಣುಕಾ ಉಗಾರ, ಬೀಬಿಜಾನ ಅತ್ತಾರ, ಡಾ.ರವಿ ಕೌಲಗಿ, ಪ್ರೊ.ಪ್ರೇಮಾನಂದ ದೇಸಾಯಿ, ಪ್ರಹ್ಲಾದ ತಿಗಣಿಬಿದರಿ ಇದ್ದರು.