ಇಂಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಅನಿರ್ದಿಷ್ಟಾಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಇಂಡಿಯನ್ನು ಬರಗಾಲ ಪೀಡಿತ ತಾಲೂಕೆಂದು ಘೋಷಿಸಬೇಕು ಎಂದು ಆಗ್ರಹಿಸಿ ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಅನಿರ್ದಿಷ್ಟಾಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.

ಧರಣಿ ಉದ್ದೇಶಿಸಿ ಮಾತನಾಡಿದ, ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಶೀಲವಂತ ಉಮರಾಣಿ, ಕಾಸುಗೌಡ ಬಿರಾದಾರ, ಎಸ್.ಎ.ಪಾಟೀಲ,

ಬಿ.ಎಸ್.ಪಾಟೀಲ, ದೇವೆಂದ್ರ ಕುಂಬಾರ, ಶಂಕರಗೌಡ ಪಾಟೀಲ, ಬಾಳು ಮುಳಜಿ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ ತಾಲೂಕಿನಾದ್ಯಂತ ಭೀಕರ ಪರಿಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಇಂಡಿ ತಾಲೂಕನ್ನು ಬರಗಾಲ ಪಟ್ಟಿಗೆ ಸೇರಿಸದಿರುವುದು ದುರ್ದೈವ. ರಾಜ್ಯ ಸರ್ಕಾರ ಇಂಡಿ ಕ್ಷೇತ್ರದ ರೈತರ ಹಿತರಕ್ಷಣೆಯನ್ನು ಸಂಪೂರ್ಣವಾಗಿ ಮರೆತು ತೀವ್ರ ಅನ್ಯಾಯ ಎಸಗಿದೆ ಎಂದು ಆರೋಪಿಸಿದ ಅವರು, ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಿ ಇಂಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಮುಂಗಾರು ಮಳೆಯಾಗದೆ ತಾಲೂಕಿನಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಗಳು ಎಲ್ಲ ಹಾನಿಗೊಂಡಿವೆ. ತಾಲೂಕಿಗೆ ಮುಂಗಾರು ಮಳೆಗೆ ಬೇಕಾದಷ್ಟು ಮಳೆಯಾಗಿಲ್ಲ. ಬೆಳೆಯ ಬೆಳವಣಿಗೆ ಕುಂಠಿತಗೊಂಡಿದೆ. ಕಬ್ಬು ಹುಲುಸಾಗಿ ಬೆಳೆದಿಲ್ಲ. ಲಿಂಬೆ ಗಿಡಗಳು ಹೂ ಬಿಡುತ್ತಿಲ್ಲ. ಹೆಸರು, ತೊಗರಿ, ಮೆಕ್ಕೆಜೋಳ ಕೈಕೊಡು ಭೀತಿ ಆವರಿಸಿದೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಸಿದ್ದಲಿಂಗ ಹಂಜಗಿ, ಸಂತೋಷ ಪಾಟೀಲ, ರವಿ ವಗ್ಗೆ, ರಾಮಸಿಂಗ ಕನ್ನೊಳ್ಳಿ, ಮಹೇಶ ಹೂಗಾರ, ಮಲ್ಲು ಗುಡ್ಲ, ಶಿವು ಬಗಲಿ, ರಾಜಕುಮಾರ ಸಗಾಯಿ, ಪ್ರಶಾಂತ ಗವಳಿ, ಪ್ರಶಾಂತ ಲಾಳಸಂಗಿ, ಮಂಜು ದೇವರ, ಭೀಮಾಶಂಕರ ಆಳೂರ, ಶ್ರೀಶೈಲಗೌಡ ಪಾಟೀಲ, ಮಲ್ಲು ವಾಲಿಕಾರ, ಸಚೀನ ಬೊಳೆಗಾಂವ, ಈರಣ್ಣಗೌಡ ಪಾಟೀಲ, ಜಟ್ಟೆಪ್ಪ ಮರಡಿ, ನಾಗೇಶ ಹೆಗಡ್ಯಾಳ, ರಮೇಶ ಧರೇನವರ, ಮಹೇಶ ಹೂಗಾರ ಇತರರು ಉಪಸ್ಥಿತರಿದ್ದರು.