ಕಟೀಲು ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಪಂಚಮ ಸಂಭ್ರಮ ಮತ್ತು ಎಂಆರ್‌ಪಿಎಲ್ ಕೊಡುಗೆಯಾಗಿ ನೀಡಿದ ‘ಹೋಮ್ ಕೇರ್ ವ್ಯಾನ್ -ಮನೆ ಬಾಗಿಲಿಗೆ ಆರೋಗ್ಯ ಸೇವೆ’ ವಾಹನದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕೇವಲ ಐದು ವರ್ಷಗಳಲ್ಲಿ ಕಟೀಲು ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯು ಗ್ರಾಮೀಣ ಭಾಗದ ವೈದ್ಯಕೀಯ ಸೇವೆಯಲ್ಲಿ ಮಾದರಿ ಆಸ್ಪತ್ರೆಯಾಗಿ ಜನರ ಮೆಚ್ಚುಗೆ ಗಳಿಸಿದೆ ಎಂದು ಮಣಿಪಾಲದ ಮಾಹೆಯ ಕುಲಪತಿ ಡಾ ಎಚ್ ಎಸ್ ಬಲ್ಲಾಳ್ ಹೇಳಿದ್ದಾರೆ.ಕಟೀಲು ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯಲ್ಲಿ ಜರುಗಿದ ಪಂಚಮ ಸಂಭ್ರಮ ಮತ್ತು ಎಂಆರ್‌ಪಿಎಲ್ ಕೊಡುಗೆಯಾಗಿ ನೀಡಿದ ‘ಹೋಮ್ ಕೇರ್ ವ್ಯಾನ್ -ಮನೆ ಬಾಗಿಲಿಗೆ ಆರೋಗ್ಯ ಸೇವೆ’ ವಾಹನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಟೀಲು ದೇವಳದ ಅರ್ಚಕ ವೇ.ಮೂ. ವೆಂಕಟರಮಣ ಅಸ್ರಣ್ಣ ಆಶೀರ್ವಚನ ನೀಡಿದರು, ಮಾಹೆಯ ಉಪ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ ಎಂ. ಡಿ. ವೆಂಕಟೇಶ್, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಸಂಜೀವನಿ ಟ್ರಸ್ಟ್ ಅಧ್ಯಕ್ಷ ಡಾ.ಸುರೇಶ್ ರಾವ್, ಮಾಹೆ ಮಣಿಪಾಲದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ.ಆನಂದ್ ವೇಣುಗೋಪಾಲ್, ಎಂಆರ್‌ಪಿಎಲ್ -ಎಚ್.ಆರ್. ಡಾ ಅರವಿಂದ್, ಕೆಎಂಸಿ ಆಸ್ಪತ್ರೆ ಯ ಡೀನ್ ಡಾ. ಉಣ್ಣಿ ಕೃಷ್ಣನ್, ಡಾ.ಪ್ರಸನ್ನ ಮಿತ್ರ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಾಧಕ ವೈದ್ಯರಿಗೆ ಗೌರವಾರ್ಪಣೆ ನಡೆಯಿತು. ಆಸ್ಪತ್ರೆ ಯೊಂದಿಗೆ ನಿರಂತರ ಸಂಪರ್ಕದೊಂದಿಗೆ ಇದ್ದ ಸ್ಥಳೀಯ ಸಂಘ ಸಂಸ್ಥೆ ಮುಖ್ಯಸ್ಥರನ್ನು ಗೌರವಿಸಲಾಯಿತು.ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಾನಂದ ಪ್ರಭು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.