ಕನ್ನಡಪ್ರಭ ವಾರ್ತೆ ಉಳ್ಳಾಲಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಸ್ಥಾಪಕರ ದಿನಾಚರಣೆ ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜಿನ ಕಾನ್ಪೆರೆನ್ಸ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಧಾರವಾಡ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎ.ಎಂ. ಖಾನ್ ಮಾತನಾಡಿ, ಕಣಚೂರು ಸಂಸ್ಥೆ ಸ್ಥಾಪಕ ಯು. ಕಣಚೂರು ಮೋನು ಅಪಾರ ಶ್ರಮ, ದೃಢ ಸಂಕಲ್ಪ ಮತ್ತು ದೀರ್ಘ ದೃಷ್ಟಿಯಿಂದ ಇಂದು ಎಲ್ಲರಿಗೂ ಪ್ರೇರಣೆಯಾಗಿರುವ ವ್ಯಕ್ತಿ. ಕಣಚೂರು ಮೋನು ಅವರು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆದವರು ಎಂದರು.ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಚೇರ್ ಮೆನ್ ಡಾ. ಯು.ಕೆ.ಮೋನು ಮಾತನಾಡಿ, ಕಷ್ಟದ ದಿನಗಳನ್ನು ಕಳೆದು , ಬಡತನದಲ್ಲಿನ ಜೀವನದಲ್ಲಿ ಅಕ್ಕಿಗೂ ಪರದಾಡಿದ ದಿನಗಳಿತ್ತು. ಬ್ರಿಟೀಷ್ ಸರ್ಕಾರದ ಉದ್ಯೋಗಿಯಾಗಿದ್ದ ತಂದೆ, ತಾಯಿ ಕುಟುಂಬಕ್ಕೆ ಜಮೀನಿದ್ದರೂ ಒಕ್ಕಲು ಮನೆಯವರ ಆಶ್ರಯವಿದ್ದಲ್ಲಿ ಮಾತ್ರ ಅಕ್ಕಿ ಸಿಗುವ ಕಾಲವದು. ಹಣವಿದ್ದರೂ ಅಕ್ಕಿ ಸಿಗದೆ ಪರದಾಡಿದ್ದೆವು. ಹಣವಿದ್ದರೂ ಹೆತ್ತವರನ್ನು ಹಜ್ ಯಾತ್ರೆಗೆ ಕಳುಹಿಸಲು ಸಾಧ್ಯವಾಗಲಿಲ್ಲ ಅನ್ನುವ ದುಃಖ ಸದಾ ಇರುತ್ತದೆ ಎಂದರು.ಕಣಚೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ಅಬ್ದುಲ್ ರಹಿಮಾನ್, ಕಣಚೂರು ಇಸ್ಲಾಮಿಕ್ ಎಜ್ಯೂಕೇಷನ್ ಟ್ರಸ್ಟ್ ನ ಟ್ರಸ್ಟಿ ಜೊಹಾರ ಮೋನು, ಟ್ರಸ್ಟಿ ಉಮಾಯ ಬಾನು ಆರೀಫ್, ಫರೀದ ನಸೀರ್, ಸಹಾದ ರಹಿಮಾನ್, ಡಾ. ಅಬಿದ ಹಸೀಮ್ಅಬ್ದಲ್ ರೆಹಿಮಾನ್, ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ. ಅಬ್ದುಲ್ ರೆಹಿಮಾನ್, ಕಣಚೂರು ಹೆಲ್ತ್ ಸೈನ್ಸ್ ಸಲಹಾ ಮಂಡಳಿಯ ಚೇರ್‌ಮೆನ್ ಡಾ.ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕಣಚೂರು ಹೆಲ್ತ್ ಸೈನ್ಸ್ ಸಲಹಾ ಮಂಡಳಿಯ ಸದಸ್ಯ ಪ್ರೊ.ವೆಂಕಟರಾಯ್ ಪ್ರಭು ಇದ್ದರು.
ಕಣಚೂರು ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್ ಸನ್ಮಾನಿತರ ವಿವರ ನೀಡಿದರು. ಕಣಚೂರು ಆಸ್ಪತ್ರೆಯ ಫಿಸಿಯೋಥೆರಫಿ ವಿಭಾಗದ ಪ್ರಾಂಶುಪಾಲ ಡಾ.ಸುಹೇಲ್ ಸ್ವಾಗತಿಸಿದರು.ಕಣಚೂರು ಅಲೈಡ್ ಸೈನ್ಸ್ ನ ಅಸಿಸ್ಟೆಂಟ್ ಪ್ರೊ. ಪ್ರತಿಕ್ಷಾ ಶೆಟ್ಟಿ, ಪಬ್ಲಿಕ್ ಶಾಲೆಯ ಟಿಜಿಟಿ ಸೌಮ್ಯ ಸುವರ್ಣ ನಿರೂಪಿಸಿದರು. ಕಣಚೂರು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಮೊನಿಸ್ ಸಲ್ಡಾನ ವಂದಿಸಿದರು.