ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವವು 14 ರಂದು ಧ್ವಜಾರೋಹಣಗೊಂಡು 21 ರ ವರೆಗೆ ಜರಗಲಿದೆಯೆಂದು ದೇವಳದ ಅನುವಂಶಿಕ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣ ಹಾಗೂ ಅನುವಂಶಿಕ ಮೊಕ್ತೇಸರ, ಆಡಳಿತ ಸಮಿತಿ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ, ಕೊಡೆತ್ತೂರುಗುತ್ತು ತಿಳಿಸಿದ್ದಾರೆ.
ಮೂಲ್ಕಿ: ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವವು 14 ರಂದು ಧ್ವಜಾರೋಹಣಗೊಂಡು 21 ರ ವರೆಗೆ ಜರಗಲಿದೆಯೆಂದು ದೇವಳದ ಅನುವಂಶಿಕ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣ ಹಾಗೂ ಅನುವಂಶಿಕ ಮೊಕ್ತೇಸರ, ಆಡಳಿತ ಸಮಿತಿ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ, ಕೊಡೆತ್ತೂರುಗುತ್ತು ತಿಳಿಸಿದ್ದಾರೆ.
12 ರಂದು ಬೆಳಿಗ್ಗೆ ಅಷ್ತೋತ್ತರ ಶತದ್ರವ್ಯಕಲಶಾಭಿಷೇಕ, ರಾತ್ರಿ ತೋರಣ ಕಟ್ಟುವುದು, ದೊಡ್ಡ ರಂಗಪೂಜೆ, 13 ರ ರಾತ್ರಿ ಅಂಕುರ ಬಲಿ, ಅಂಕುರಾರೋಪಣ,14 ರಂದು ಬೆಳಿಗ್ಗೆ ಧ್ವಜಾರೋಹಣ, ರಾತ್ರಿ ಉತ್ಸವ ಬಲಿ, 15 ರಂದು ಬೆಳಿಗ್ಗೆ ಯುಗಾದಿ ದೀಪದ ಬಲಿ, ರಾತ್ರಿ ಉತ್ಸವ ಬಲಿ, 16ರಂದು ಬೆಳಿಗ್ಗೆ ಭ್ರಾಮರೀ ವನದಲ್ಲಿ ಪ್ರತಿಷ್ಠಾ ವರ್ಧಂತಿ, ರಾತ್ರಿ ಉತ್ಸವ ಬಲಿ, ಮೂಡುಸವಾರಿ, 17 ರಂದು ಬೆಳಿಗ್ಗೆ ದೀಪದ ಬಲಿ, ರಾತ್ರಿ ಉತ್ಸವ ಬಲಿ, 18 ರಂದು ರಾತ್ರಿ ಬೆಳ್ಳಿರಥೋತ್ಸವ, ಉತ್ಸವಬಲಿ, ,19 ರಂದು ಬೆಳಿಗ್ಗೆ ಬ್ರಹ್ಮ ಸನ್ನಿಧಿಯಲ್ಲಿ ಪರ್ವ, ರಾತ್ರಿ ಉತ್ಸವ ಬಲಿ, ಪಡು ಸವಾರಿ, 20ರಂದು ಹಗಲು ಬ್ರಹ್ಮರಥೋತ್ಸವ, ರಾತ್ರಿ ಉತ್ಸವಬಲಿ ,ಶಯನ, 21ರಂದು ಬೆಳಿಗ್ಗೆ ಕವಾಟೋದ್ಘಾಟನೆ, ರಾತ್ರಿ ಅವಭೃತೋತ್ಸವ,(ಅರಾಟ), ಎಕ್ರುನ ಯಾತ್ರೆ ಬ್ರಹ್ಮರಥೋತ್ಸವ, ತೂಟೆದಾರ, ಶಿಬರೂರು ಕೊಡಮಣಿತ್ತಾಯ ಭೇಟಿ, ಧ್ವಜಾವರೋಹಣ ನಡೆಯಲಿದೆ. ಕಟೀಲು ದೇವಳದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ 14ರಿಂದ 21ರ ವರೆಗೆ ಪ್ರತಿದಿನ ಸಂಜೆ 5 ರಿಂದ ರಾತ್ರಿ 8.30ರವರೆಗೆ ಸರಸ್ವತಿ ಸದನದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಲಿದೆ. 14 ರಂದು ಸಂಜೆ 5 ರಿಂದ 7ರವರೆಗೆ ಪೂಜಾಶ್ರೀ ಮುಕ್ಕರಿಂದ ಭರತನಾಟ್ಯ, 7ರಿಂದ 8ರವರೆಗೆ ಬೆಂಗಳೂರು ಸಂಜೀವಿನಿ ಕಲಾ ಟ್ರಸ್ಟ್ ವತಿಯಿಂದ ಭರತನಾಟ್ಯ ನಡೆಯಲಿದೆ. ಮನೋಜ್ಞ ಬೆಂಗಳೂರು ಅವರ ವತಿಯಿಂದ 6 ರಿಂದ 8ರವರೆಗೆ ಭರತನಾಟ್ಯ, 16 ರಂದು ಸಂಜೆ 4ರಿಂದ 5ರವರೆಗೆ ಬೆಂಗಳೂರು ಡಿ.ನಾಗವೇಣಿ ಲಲಿತ ನೃತ್ಯಕಲಾ ಮಂದಿರ ಅವರಿಂದ ಭರತನಾಟ್ಯ, 5ರಿಂದ 6.30ರವರೆಗೆ ರಾಧಿಕಾಎಸ್. ಕಾರಂತ್ ಬೆಂಗಳೂರು ಅವರಿಂದ ಶಾಸ್ತ್ರೀಯಸಂಗೀತ, 6.30ರಿಂದ 7.30ರವರೆಗೆ ಶಿರಸಿ ಸೌಮ್ಯ ಪ್ರದೀಪ್ ಹೆಗಡೆ ಮೈತ್ರಿ ನೃತ್ಯ ಕಲಾ ಟ್ರಸ್ಟ್ ಸದಸ್ಯರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಅಮೃತ ನರೇಶ್ ರಾವ್, ಬೆಂಗಳೂರು ಅವರಿಂದ 7.30ರಿಂದ 8ರವರೆಗೆ ಭರತನಾಟ್ಯ, 17 ರಂದು ಸಂಜೆ 5 ರಿಂದ 6.30 ನೃತ್ಯ ಪ್ರದರ್ಶನ ನಡೆಯಲಿದೆ. 6.30ರಿಂದ 8ರವರೆಗೆ ಬೆಂಗಳೂರು ನಂದಿನಿ ಕೆ.ವಿ. ಕಲಾಸಂಗಮ ವತಿಯಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. 8ರಿಂದ 9.30ರವರೆಗೆ ಮೈಸೂರು ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀವಿದ್ಯಾ ಶಶಿಧರ್ ಅವರಿಂದ ಭಕ್ತಿ ರಸಮಂಜರಿ ನಡೆಯಲಿದೆ. 18 ರಂದು ಮಧ್ಯಾಹ್ನ 3ರಿಂದ 5ರವರೆಗೆ ವೈಷ್ಣವಿ ನಾಟ್ಯಾಶಾಲಾ ಬಾಣಸವಾಡಿ ಬೆಂಗಳೂರು ಇವರಿಂದ ಭರತನಾಟ್ಯ, ಸಂಜೆ 5ರಿಂದ 6.30 ರವರೆಗೆ ಬೆಂಗಳೂರು ಸೌಧಾಮಿನಿ ರಾವ್ ಅವರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ರಾತ್ರಿ 7 ರಿಂದ 8ರವರೆಗೆ ಧನ್ಯಶ್ರೀ ನೃತ್ಯ ಕಲಾ ನಿಕೇತನ ಬೆಂಗಳೂರು ಅವರಿಂದ ಸಮೂಹನೃತ್ಯ ಪ್ರದರ್ಶನವಿದೆ.
19 ರಂದು ಮಧ್ಯಾಹ್ನ 3 ರಿಂದ 5ರವರೆಗೆ ನಂದಳಿಕೆ ವಿಶಾಲ ಯಕ್ಷಕಲಾ ಮಂಡಳಿ ಸದಸ್ಯರಿಂದ ತಾಳಮದ್ದಳೆ ಪ್ರದರ್ಶನವಿದೆ.
3.30ರಿಂದ 5ರವರೆಗೆ ಉಮಾ ರಾಮಚಂದ್ರನ್ ಬೆಂಗಳೂರು ಅವರಿಂದ ಸಂಗೀತ ಕಾರ್ಯಕ್ರಮವಿದೆ. ಸಂಜೆ 5ರಿಂದ 7ಗಂಟೆವರೆಗೆ ನಾಟ್ಯಶೈಲಿ ನೃತ್ಯ ಸಂಸ್ಥೆ ಬೆಂಗಳೂರು ವತಿಯಿಂದ ಭರತನಾಟ್ಯಪ್ರದರ್ಶನವಿದೆ. ರಾತ್ರಿ 77ರಿಂದ 8ರವರೆಗೆ ಶರತ್ ಹಳೆಯಂಗಡಿ ಅವರಿಂದ ಗಿಟಾರುವಾದನ ನಡೆಯಲಿದೆ. 20ರಂದು ಸಂಜೆ 5ರಿಂದ 88ರವರೆಗೆ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದವರಿಂದ ಭಕ್ತಮಾರ್ಕಂಡೇಯ ಚರಿತ್ರೆ ಯಕ್ಷಗಾನ ಪ್ರದರ್ಶನವಿದೆ.
21ರಂದು ರಾತ್ರಿ 8 ರಿಂದ ಬೆಂಗಳೂರು ಕೀರ್ತನ್ ಹೊಳ್ಳ ಅವರಿಂದ ಸಂಗೀತಾರ್ಚನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ಚಿತ್ರ:8ಕಟೀಲು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.