ಕಾಪು ಯೋಜನಾ ಪ್ರಾಧಿಕಾರದ ಸಿಬ್ಬಂದಿ ಕಚೇರಿಯೊಳಗೆ ಲಾಕ್ !

KannadaprabhaNewsNetwork |  
Published : Feb 12, 2026, 03:15 AM IST
11ಲಾಕ್ | Kannada Prabha

ಸಾರಾಂಶ

ಸಿಬ್ಬಂದಿಯೊಬ್ಬರ ಆಚಾರ್ತುರ್ಯದಿಂದ ಇಲ್ಲಿನ ಕಾಪು ತಾಲೂಕು ಯೋಜನಾ ಪ್ರಾಧಿಕಾರದ ಸಿಬ್ಬಂದಿ ಕಚೇರಿ ಒಳಗೆ ಲಾಕ್ ಆದ ಘಟನೆ ಮಂಗಳವಾರ ಸಂಜೆ ನಡೆದಿದೆ. ಕೊನೆಗೆ ಪೊಲೀಸರು ಬಂದು ಬೀಗ ತೆಗೆಸಿ, ಸಿಬ್ಬಂದಿ

ಕಾಪು: ಸಿಬ್ಬಂದಿಯೊಬ್ಬರ ಆಚಾರ್ತುರ್ಯದಿಂದ ಇಲ್ಲಿನ ಕಾಪು ತಾಲೂಕು ಯೋಜನಾ ಪ್ರಾಧಿಕಾರದ ಸಿಬ್ಬಂದಿ ಕಚೇರಿ ಒಳಗೆ ಲಾಕ್ ಆದ ಘಟನೆ ಮಂಗಳವಾರ ಸಂಜೆ ನಡೆದಿದೆ. ಕೊನೆಗೆ ಪೊಲೀಸರು ಬಂದು ಬೀಗ ತೆಗೆಸಿ, ಸಿಬ್ಬಂದಿಗಳನ್ನು ಮನೆಗೆ ಕಳುಹಿಸಿದ್ದಾರೆ. ಪುರಸಭೆ ಕಟ್ಟಡದ ಕೆಳ‍ಗಿನ ಮತ್ತು ಮೇಲಿನ ಮಹಡಿಗಳಲ್ಲಿ ಯೋಜನಾ ಪ್ರಾಧಿಕಾರದ ಎರಡು ಕಚೇರಿಗಳಿವೆ. ಪ್ರತಿದಿನ ಸಂಜೆ 5.30 ರಿಂದ 6 ಗಂಟೆಯ ನಡುವೆ ಪುರಸಭೆ ಸಿಬ್ಬಂದಿ ಪ್ರಾಧಿಕಾರದ ಎರಡೂ ಕಚೇರಿಗಳ ಎಲ್ಲ ಸಿಬ್ಬಂದಿ ಹೊರಗೆ ಹೋದ ಮೇಲೆ ಪುರಸಭೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಮನೆಗೆ ತೆರಳುತ್ತಿದ್ದ. ಆದರೆ ಮಂಗಳವಾರ ಬೀಗ ಹಾಕುವ ಸಿಬ್ಬಂದಿ ಅನಾರೋಗ್ಯದಿಂದ ರಜೆ ಮಾಡಿದ್ದರು. ಅವರ ಬದಲಿಗೆ ಇನ್ನೊಬ್ಬ ಸಿಬ್ಬಂದಿ ಪುರಸಭೆಯ ಕೆಳಗಿನ ಮಹಡಿಯಲ್ಲಿ ಕೆಲಸ ಮಾಡುವವರು ಹೊರಗೆ ಹೋದ ನಂತರ ಬೀಗ ಹಾಕಿಮನೆಗ ತೆರಳಿದ್ದ. ಆತ ಮೇಲಿನ ಮಹಡಿಯ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಸಿಬ್ಬಂದಿಗಳಿರುವುದನ್ನು ಗಮನಿಸಿರಲಿಲ್ಲ. ಮೇಲಿನ ಮಹಡಿ ಸಿಬ್ಬಂದಿ ಕೆಲಸ ಮುಗಿಸಿ ಕೆಳಗೆ ಬಂದಾಗ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿತ್ತು. ನಂತರ ಅವರು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಂದು ಪುರಸಭೆಯ ಮುಖ್ಯಾಧಿಕಾರಿಗೆ ಮಾಹಿತಿ ನೀಡಿ, ಅವರು ಪುರಸಭೆ ಸಿಬ್ಬಂದಿಯನ್ನು ಕರೆಸಿ ಬೀಗ ತೆಗೆಸಿದ್ದಾರೆ. ಪುರಸಭೆ ಕಟ್ಟಡದ ಕೆಳ‍ಗಿನ ಮತ್ತು ಮೇಲಿನ ಮಹಡಿಗಳಲ್ಲಿ ಯೋಜನಾ ಪ್ರಾಧಿಕಾರದ ಎರಡು ಕಚೇರಿಗಳಿವೆ. ಪ್ರತಿದಿನ ಸಂಜೆ 5.30 ರಿಂದ 6 ಗಂಟೆಯ ನಡುವೆ ಪುರಸಭೆ ಸಿಬ್ಬಂದಿ ಪ್ರಾಧಿಕಾರದ ಎರಡೂ ಕಚೇರಿಗಳ ಎಲ್ಲ ಸಿಬ್ಬಂದಿ ಹೊರಗೆ ಹೋದ ಮೇಲೆ ಪುರಸಭೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಮನೆಗೆ ತೆರಳುತ್ತಿದ್ದ. ಆದರೆ ಮಂಗಳವಾರ ಬೀಗ ಹಾಕುವ ಸಿಬ್ಬಂದಿ ಅನಾರೋಗ್ಯದಿಂದ ರಜೆ ಮಾಡಿದ್ದರು. ಅವರ ಬದಲಿಗೆ ಇನ್ನೊಬ್ಬ ಸಿಬ್ಬಂದಿ ಪುರಸಭೆಯ ಕೆಳಗಿನ ಮಹಡಿಯಲ್ಲಿ ಕೆಲಸ ಮಾಡುವವರು ಹೊರಗೆ ಹೋದ ನಂತರ ಬೀಗ ಹಾಕಿಮನೆಗ ತೆರಳಿದ್ದ. ಆತ ಮೇಲಿನ ಮಹಡಿಯ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಸಿಬ್ಬಂದಿಗಳಿರುವುದನ್ನು ಗಮನಿಸಿರಲಿಲ್ಲ. ಮೇಲಿನ ಮಹಡಿ ಸಿಬ್ಬಂದಿ ಕೆಲಸ ಮುಗಿಸಿ ಕೆಳಗೆ ಬಂದಾಗ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿತ್ತು. ನಂತರ ಅವರು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಂದು ಪುರಸಭೆಯ ಮುಖ್ಯಾಧಿಕಾರಿಗೆ ಮಾಹಿತಿ ನೀಡಿ, ಅವರು ಪುರಸಭೆ ಸಿಬ್ಬಂದಿಯನ್ನು ಕರೆಸಿ ಬೀಗ ತೆಗೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂದಾಪುರ: ಐಎಂಜೆಐಎಸ್‌ಸಿ ಹಳೆವಿದ್ಯಾರ್ಥಿ ಘಟಕ ಉದ್ಘಾಟನೆ
ದೇವಾಲಯಗಳು ದೇವರ ಅಸ್ತಿತ್ವದ ಪವಿತ್ರ ಸ್ಥಳ: ಜೆರಾಲ್ಡ್ ಲೋಬೊ