ಕಾಪು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

KannadaprabhaNewsNetwork |  
Published : Mar 13, 2025, 12:51 AM IST
12ಕಾಪು | Kannada Prabha

ಸಾರಾಂಶ

ಕಾಪು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾ಼ಷಾ ವಿಭಾಗ ಹಾಗೂ ಮಹಿಳಾ ವೇದಿಕೆಯ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಮಂಗಳೂರಿನ ಸ್ವಸ್ತಿಕಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಮಾಲಿನಿ ಹೆಬ್ಬಾರ್‌ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಂಗ್ಲ ಭಾ಼ಷಾ ವಿಭಾಗ ಹಾಗೂ ಮಹಿಳಾ ವೇದಿಕೆಯ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಮಂಗಳೂರಿನ ಸ್ವಸ್ತಿಕಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಾಲಿನಿ ಹೆಬ್ಬಾರ್‌ ಅವರು ಮಾತನಾಡಿ, ಮಹಿಳೆಯರು ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾರೆ ಮತ್ತು ಪುರುಷರಂತೆಯೇ ದಕ್ಷರಾಗಿದ್ದಾರೆ, ಆದರೆ ಎಲ್ಲೆಡೆ ಸಮಾನ ಅವಕಾಶವನ್ನು ನಿರಾಕರಿಸಲಾಗುತ್ತದೆ. ಪುರುಷರಿಗೆ ಮಹಿಳೆಯರನ್ನು ಗೌರವಿಸುವ ಬಗ್ಗೆ ಅರಿವು ಮೂಡಿಸಬೇಕು. ಮಹಿಳೆಯರು ತಾವು ಶ್ರೇಷ್ಠರೆಂದು ಹೇಳಿಕೊಳ್ಳುತ್ತಿಲ್ಲ, ಆದರೆ ಅವರು ಖಂಡಿತವಾಗಿಯೂ ಪುರುಷರಿಗಿಂತ ಕೆಳಮಟ್ಟದಲ್ಲಿಲ್ಲ. ನಾವು ಕೇಳುತ್ತಿರುವುದು ಸಮಾನತೆ ಮಾತ್ರ ಎಂದು ಹೇಳಿದರು.

ನಂತರ ಅವರು ವಿವಿಧ ವಿಭಾಗಗಳ ಮಹಿಳಾ ಸಾಧಕರ ಸಾಧನೆಯ ಬಗ್ಗೆ ಚಿತ್ರ ಪ್ರದರ್ಶನ ಹಾಗೂ ಮಹಿಳಾ ಲೇಖಕಿಯರ ಪುಸ್ತಕ ಪ್ರದರ್ಶನವನ್ನು ಅನಾವರಣಗೊಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಸ್ತ್ರಿರೋಗ ತಜ್ಞೆ ಡಾ.ರಾಜಲಕ್ಷ್ಮಿ, ಮಹಿಳೆ ದೈಹಿಕ ಕಾಯಿಲೆಗಳ ಬಗ್ಗೆ, ಹದಿಹರೆಯದ ಸಮಸೈಗಳು, ಆಹಾರಕ್ರಮ, ಯೋಗ, ಪ್ರಾಣಾಯಮ, ಉತ್ತಮ ಆಹಾರ ಪದ್ಧತಿಗಳ ಬಗ್ಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಗೋಪಾಲಕೃಷ್ಣ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ದೀಪಿಕಾ ಸುವರ್ಣ ಸ್ವಾಗತಿಸಿದರು. ಮಹಿಳಾ ವೇದಿಕಯ ಸಂಘಟಕಿ ಯಶೋದಾ ವಂದಿಸಿದರು. ವಿದ್ಯಾರ್ಥಿನಿಯರಾದ ಸುಶ್ಮೀತ ಮತ್ತು ನಿಧಿ ಪ್ರಾರ್ಥಿಸಿದರು, ರಕ್ಷಾಶ್ರೀ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ.1ರಿಂದ ಭೂರಹಿತರಿಂದ ಹೋರಾಟಕ್ಕೆ ನಿರ್ಣಯ
ಚಿನ್ನಕ್ಕಿಂತ ಆರೋಗ್ಯ, ನೆಮ್ಮದಿ ಮುಖ್ಯ: ಮಹಂತೇಶ್‌