ಹುಬ್ಬಳ್ಳಿ: ಜ. ರೇಣುಕಾಚಾರ್ಯರರ ಹಾಗೆ ನಾವೆಲ್ಲರೂ ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ ಹೇಳಿದರು.
ನಾವೆಲ್ಲರೂ ಧರ್ಮದಿಂದ ಬದುಕಬೇಕು. ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದರು.
ತಿರುಮಲಕೊಪ್ಪದ ರೇಣುಕ ಧರ್ಮ ನಿವಾಸದ ದಾನಯ್ಯ ದೇವರು ಮಾತನಾಡಿ, ರೇಣುಕಾಚಾರ್ಯರ ತತ್ವಗಳು ಮತ್ತು ಆದರ್ಶಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಧರ್ಮದ ಬಗ್ಗೆ ನಾವು ಮೊದಲು ಅರಿವು ಮೂಡಿಸಿಕೊಳ್ಳಬೇಕಾಗಿದೆ ಎಂದರು.ಕೆ.ಎಲ್.ಇ. ಸೊಸೈಟಿಯ ಸದಸ್ಯ ಶಂಕ್ರಣ್ಣ ಮುನವಳ್ಳಿ ಮಾತನಾಡಿದರು. ಡಾ. ಎಚ್.ವಿ. ಬೆಳಗಲಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ರೇಣುಕಾಚಾರ್ಯ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.
ಗ್ರೇಡ್ 2 ತಹಸೀಲ್ದಾರ್ ಜಿ.ವಿ. ಪಾಟೀಲ, ಸಮಾಜ ಮುಖಂಡ ನಿರಂಜನ ಹಿರೇಮಠ, ವಿಶ್ವನಾಥ ಹಿರೇಗೌಡ್ರ, ಶಿವಾನಂದ ಗುಂಜಾಳ, ಬಸವರಾಜ ಚಿಕ್ಕಮಠ, ಪ್ರಕಾಶ ಬೆಂಡಿಗೇರಿ, ನಿಂಗನಗೌಡ್ರ, ಸುಮಿತ್ರಾ ಗುಂಜಾಳ, ರಮೇಶ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಚನ್ನಯ್ಯ ಚೌಕಿಮಠ ನಿರೂಪಿಸಿದರು.