ನಾಪೋಕ್ಲು : ಕಾವೇರಿ ತೀರದ ಪವಿತ್ರ ಯಾತ್ರಾಸ್ಥಳವಾದ ಬಲಮುರಿಯಲ್ಲಿ ವಾರ್ಷಿಕ ಕಾವೇರಿ ಸಂಕ್ರಮಣ ಜಾತ್ರೋಮಹೋತ್ಸವ ಇಂದು ಅತ್ಯಂತ ಸಂಭ್ರಮದಿಂದ ಜರುಗಲಿದ್ದು, ಭಕ್ತರಿಗಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಅಸಂಖ್ಯಾತ ಭಕ್ತರು ಅಧಿಕ ಸಂಖ್ಯೆಯಲ್ಲಿ ಬಲಮುರಿಗೆ ಆಗಮಿಸಿ, ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗಿದ್ದಾರೆ. ಪ್ರತಿವರ್ಷ ಕಾವೇರಿ ತೀರ್ಥೋದ್ಭವದ ಮರುದಿನ ಇಲ್ಲಿ ಜಾತ್ರೆ ನಡೆಯುವುದು ವಾಡಿಕೆಯಾಗಿದೆ.ಜಾತ್ರೆಯ ಅಂಗವಾಗಿ ಇಂದು ಬೆಳಗ್ಗಿನಿಂದಲೇ ಬಲಮುರಿಯ ಪ್ರಸಿದ್ಧ ಅಗಸ್ತ್ಯೇಶ್ವರ (ಮಾಧುರಪ್ಪ) ದೇವಾಲಯ ಹಾಗೂ ಕಣ್ವ ಮುನೀಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.ಪ್ರಾತಃಕಾಲ ತೀರ್ಥಸ್ನಾನ, ಪಿಂಡಾದಿ ದಾರ್ಮಿಕ ಕಾರ್ಯ, ಅಗಸ್ತ್ಯೇಶ್ವರನಲ್ಲಿ ಹಣ್ಣು ಕಾಯಿ ಪೂಜೆ ಹಾಗು ತೀರ್ಥಪ್ರಸಾದ.11:30 ಗಂಟೆಗೆ ಕಾವೇರಿಪುರಾಣ ಬಾಳೊ ಪಾಟ್.12 ಗಂಟೆಗೆ ಕಾವೇರಿ ಮಹಾ ಆರತಿ,12:30 ಗಂಟೆಗೆ ಅಗಸ್ತ್ಯೇಶ್ವರ (ಮಾಧುರಪ್ಪ)ನಲ್ಲಿ ಮಹಾಪೂಜೆ.ಮದ್ಯಾಹ್ನ 1:00 ಗಂಟೆಗೆ ಅನ್ನ ಸಂತರ್ಪಣೆ ಜರುಗಲಿದೆ.
ಅಭಿವೃದ್ಧಿ ಹೊಂದುತ್ತಿದೆ. ದೇವಾಲಯದ ಗರ್ಭಗುಡಿ, ಮುಖಮಂಟಪ ಹಾಗೂ ಪೌಳಿಗಳನ್ನು ಹೊಸತಾಗಿ
ನಿರ್ಮಾಣ ಮಾಡಲಾಗಿದ್ದು, ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂಜಾತ್ರೆಯ ಸಂದರ್ಭದಲ್ಲಿ ಗ್ರಾಮಸ್ಥರು ದೇವಾಲಯದ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು
17-ಎನ್
ಬಲಮುರಿಯ ಕಣ್ವ ಮುನೀಶ್ವರ ದೇವಾಲಯ.