ಸಂಕಷ್ಟ ಮೆಟ್ಟಿನಿಂತು ಶಾಲೆಗೆ ಫಸ್ಟ್ ಬಂದ ಕವಿತಾ ಪೂಜಾರಿ

KannadaprabhaNewsNetwork |  
Published : Apr 25, 2026, 03:30 AM IST
ಲೋಕಾಪುರ ಪಟ್ಟಣದ ಆರ್.ಬಿ.ಜಿ.ಪ್ರೌಢಶಾಲೆಯ ವಿದ್ಯಾರ್ಥಿನಿ ಕವಿತಾ ಪೂಜಾರ ಅವಳನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ, ಪ್ರತಿದಿನ ೪ ಕಿಮೀ ಕಾಲ್ನಡಿಗೆ ಮೂಲಕ ಶಾಲೆಗೆ ಬರಬೇಕು. ತಾಯಿ ಮಾತು ಬಾರದವಳು, ತಂದೆ ಬೇರೆ ಕಡೆ ಇದ್ದಾರೆ. ಇಷ್ಟೆಲ್ಲ ಅಡತಡೆ ಮಧ್ಯೆಯೂ ಲೋಕಾಪುರ ಪಟ್ಟಣದ ಆರ್.ಬಿ.ಜಿ. ಪ್ರೌಢಶಾಲೆಯ ವಿದ್ಯಾರ್ಥಿನಿ ಕವಿತಾ ಪೂಜಾರ ಎದೆಗುಂದದೆ ಸತತ ಪರಿಶ್ರಮದಿಂದ ಅಧ್ಯಯನ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷಯಲ್ಲಿ 608 (ಶೇ.97) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಾಧನೆ ಮಾಡಿದ ಕವಿತಾ ಪೂಜಾರಗೆ ಶಾಲೆಯ ಮುಖ್ಯಶಿಕ್ಷಕ ಎಸ್.ಎಫ್. ನಾಯ್ಕ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಿದರು. ಮಂಜುನಾಥ ಪಾಟೀಲ, ಎಚ್.ವಿ. ಕೇರಿ, ಎ.ಬಿ. ಕಳ್ಳೆನ್ನವರ, ಎಚ್.ಆರ್. ದಾಸನಗೌಡರ, ಮಲ್ಲನ್ನವರ ಹಾಗೂ ಕವಿತಾ ಕುಟುಂಬದವರು ಇದ್ದರು. ಸಾಧನೆಗೆ ಲೋಕೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂವ೯ಭಾವಿ ಸಭೆ
ವಿವಿಧೆಡೆ ಕಳ್ಳತನದ ಪ್ರಕರಣಗಳ ಆರೋಪಿತರ ಬಂಧನ