ಕನ್ನಡಪ್ರಭ ವಾರ್ತೆ ಸಿಂದಗಿ

21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ವಾಂಸರಿಂದ ಗೋಷ್ಠಿಗಳನ್ನು ಏಪ೯ಡಿಸಿ ಸಮ್ಮೇಳನಕ್ಕೆ ಬಂದ ಕನ್ನಡ ಅಭಿಮಾನಿಗಳಿಗೆ ಜ್ಞಾನ ದಾಸೋಹ ಉಣ ಬಡಿಸುವಂತಾಗಲಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹ ಮ ಪೂಜಾರ ಸಲಹೆ ನೀಡಿದ್ದಾರೆ.

ತಾಪಂ ಕಾಯಾ೯ಲಯದಲ್ಲಿ ಗುರುವಾರ ಜರುಗಿದ ಸಾಹಿತಿಗಳ, ಲೇಖಕರ, ಕವಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 14 ವಷ೯ದ ಹಿಂದೆ ಸಿಂದಗಿಯಲ್ಲಿ ಜಿಲ್ಲಾ ಸಮ್ಮೇಳನ ಜರುಗಿತ್ತು. ಈಗ ಹಮ್ಮಿಕೊಳ್ಳಲಾಗಿರುವ ಸಮ್ಮೇಳನಕ್ಕೆ ಸಿಂದಗಿ ತಾಲೂಕಿನ ಎಲ್ಲ ಕನ್ನಡ ಅಭಿಮಾನಿಗಳು ತನು, ಮನ, ಧನದಿಂದ ಸಹಕಾರ ನೀಡುವದು ಅತ್ಯಗತ್ಯ ಎಂದರು.

ಎಚ.ಜಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರೊ.ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಸ್ಥಳಿಯ ವ್ಯಾಪಾರಸ್ಥರು ಹಾಗೂ ಹಿರಿಯರು. ದಾನಿಗಳನ್ನು ಗುರುತಿಸಿ ಅವರಿಗೂ ಜವಾಬ್ದಾರಿ ನೀಡಬೇಕು. ಗ್ರಾಮೀಣ ಪ್ರದೇಶದ ಜಾನಪದ ಕಲಾವಿದರನ್ನು ಗೌರವಿಸಬೇಕು. ಎಚ್ ಜಿ ಪ.ಪೂ. ಕಾಲೇಜಿನಿಂದ ಆಥಿ೯ಕ ಬೆಂಬಲ ನೀಡಿ ಸಂಪೂರ್ಣ ವ್ಯವಸ್ಥೆಗೆ ಸಹಕಾರ ನೀಡಲಾಗುವುದು ಎಂದರು.

ವಿಶ್ರಾಂತ ಗುರುಮಾತೆ ಜಯಶ್ರೀ ಕುಲಕರ್ಣಿ ಮಾತನಾಡಿ, ಮಹಿಳೆಯರ ಕುರಿತು ಗೋಷ್ಠಿಯನ್ನು ಏಪ೯ಡಿಸಬೇಕು. ಸ್ಥಳೀಯ ಮಹಿಳೆಯರಿಗೆ ಸೂಕ್ತ ವೇದಿಕೆ ನೀಡಬೇಕು. 80 ವಷ೯ ಮೀರಿದ ಸಾಧಕ ಮಹಿಳೆಯರನ್ನು ವೇದಿಕೆಯಲ್ಲಿ ಗೌರವಿಸಬೇಕು ಎಂದರು.


ವಿಶ್ರಾಂತ ಪ್ರಾಚಾರ್ಯ ರಾ ಶಿ ವಾಡೆದ, ತಾಲೂಕ ಕಸಾಪ ಅಧ್ಯಕ್ಷ ವೈ ಸಿ ಮಯೂರ, ಶಿಕ್ಷಕಿ ಶೋಭಾ ಚಿಗರಿ, ವಚನ ಗಾಯಕಿ ಶೈನಾಬಿ ಮಸಳಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಆನಂದ ಶಾಬಾದಿ, ಮಹಿಳಾಪರ ಹೋರಾಟಗಾರ್ತಿ ಜಗದೇವಿ ಬಿರಾದಾರ, ಶರಣು ಲಂಗೋಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಸಾತಿಹಾಳ, ಶಿವಕುಮಾರ ಶಿವಸಿಂಪಿ, ಶಾಂತು ರಾಣಾಗೋಳ , ಸುನಂದಾ ಯಂಪೂರೆ, ಅನಸೂಯಾ ಪಾರಗೊಂಡ, ಪುರುಷೋತ್ತಮ ಕುಲಕರ್ಣಿ, ಶಾಂತಾ ಮೋಸಲಗಿ, ಆರ್ ಎಸ್ ಕೊಪ್ಪ, ಡಾ ವಾಯ ಡಿ ನಾಟೀಕಾರ, ಡಾ ಎನ್.ಎಂ.ಚಪ್ಪರಬಂದ, ವಷಾ೯ ಪಾಟೀಲ, ನಾಗೇಶ ತಳವಾರ,ಬಸವರಾಜ ಅಗಸರ, ಅಮರ ಗಾಯಕವಾಡ, ರಮೇಶ ಬಡದಾಳ, ರಾಜಶೇಖರ ಕಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.