ಗದಗ: ಬಾಲ್ಯದಿಂದಲೇ ಸಾಂಸ್ಕೃತಿಕ ಮನಸ್ಸನ್ನು ಹೊಂದಿದ್ದ ಕವಿತಾ ಕಾಶಪ್ಪನವರು ನಾಟಕಾಭಿನಯದಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಆಕಾಶವಾಣಿ, ದೂರದರ್ಶನ ಹಾಗೂ ಧಾರಾವಾಹಿಗಳಲ್ಲಿ ಪಾತ್ರ ನಿರ್ವಹಿಸಿ ಅಪಾರ ಕೊಡುಗೆ ನೀಡಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ನಿವೃತ್ತ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಮಾತನಾಡಿ, ರಂಗಭೂಮಿ, ಶಿಕ್ಷಣ ಮತ್ತು ಸಂಘಟನೆಯ ಹಿನ್ನೆಲೆಯಲ್ಲಿ ತೊಡಗಿಕೊಂಡು ಗದುಗಿನ ಸಾಂಸ್ಕೃತಿಕ ಪರಿಸರ ಮೇಲ್ದರ್ಜೆಗೆ ಏರಿಸಿದರು. ಅದಮ್ಯ ಜೀವನೋತ್ಸಾಹ ಹೊಂದಿದ್ದರು ಎಂದರು.
ಅನ್ನದಾನಿ ಹಿರೇಮಠ, ಡಾ. ಜಿ.ಬಿ. ಪಾಟೀಲ ಮಾತನಾಡಿ, ಅಭಿನಯರಂಗ, ಆರ್.ಎನ್.ಕೆ.ಮಿತ್ರ ಮಂಡಳಿಯ ಅನೇಕ ನಾಟಕಗಳಲ್ಲಿ ಅಭಿನಯಿಸಿ ನಟಿಯರ ಕೊರತೆ ನೀಗಿಸಿ, ನಾಟಕ ಲೋಕಕ್ಕೆ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ ಎಂದು ತಿಳಿಸಿದರು.ಪತ್ರಕರ್ತ ಅಜಿತ ಘೋರ್ಪಡೆ, ಕವಿತಾ ಕಾಶಪ್ಪನವರ ವೃತ್ತಿ ಮತ್ತು ಪ್ರವೃತ್ತಿಯ ಕುರಿತು ರತ್ನಕ್ಕ ಪಾಟೀಲ, ಬಸವರಾಜ ಗಣಪ್ಪನವರ, ದತ್ತಪ್ರಸನ್ನ ಪಾಟೀಲ, ಕಿಶೋರಬಾಬು ನಾಗರಕಟ್ಟಿ, ಎಸ್.ಯು. ಸಜ್ಜನಶೆಟ್ಟರ್, ಸತೀಶ ಚನ್ನಪ್ಪಗೌಡ್ರ ಮಾತನಾಡಿದರು.
ಬಿ.ಎಸ್. ಹಿಂಡಿ, ಅಮರೇಶ ರಾಂಪುರ, ಡಿ.ಎಸ್. ಬಾಪುರಿ, ಶರಣಪ್ಪ ಹೊಸಂಗಡಿ, ಶಾಂತಾ ಗಣಪ್ಪನವರ, ಶಕುಂತಲಾ ಗಿಡ್ನಂದಿ, ರಾಹುಲ್ ಗಿಡ್ನಂದಿ, ಶಶಿಕಾಂತ ಕೊರ್ಲಹಳ್ಳಿ ಮೊದಲಾದವರು ಭಾಗವಹಿಸಿದ್ದರು.