ಕವಿತಾಳ: ಪಟ್ಟಣದ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ 8ನೇ ವಾರ್ಡ್ ಸದಸ್ಯೆ ಕಾಸೀಂಬೀ ಚಾಂದ್ ಪಾಶಾ ಮತ್ತು ಉಪಾಧ್ಯಕ್ಷರಾಗಿ 7ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಎಲಿಜಾ ಒವಣ್ಣ ಆಯ್ಕೆಯಾದರು. ಒಟ್ಟು 16 ಸದಸ್ಯರಲ್ಲಿ 8 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಎರಲು ಶಾಸಕ ಹಾಗೂ ಸಂಸದರ ಎರಡು ಮತ ಕೈ ಹಿಡಿದವು. ಪಪಂ ಒಟ್ಟು 16 ಸದಸ್ಯರಲ್ಲಿ ಕಾಂಗ್ರೆಸ್ 8, ಬಿಜೆಪಿ 4, ಜೆಡಿಎಸ್ 3 ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದು ಸಮಬಲ ಉಂಟಾಗಿತ್ತು ಶಾಸಕ ಜಿ.ಹಂಪಯ್ಯ ನಾಯಕ ಮತ್ತು ಸಂಸದ ಜಿ.ಕುಮಾರ ನಾಯಕ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾದರು.
ಸದಸ್ಯರುಗಳಾದ ಮಲ್ಲಿಕಾರ್ಜುನ ಗೌಡ, ಹುಲಗಪ್ಪ, ಅಮರೇಶ ಕಟ್ಟಿಮನಿ, ಲಿಂಗರಾಜ ಕಂದಗಲ್, ರಾಜೇಶ್ವರಿ ತಿಪ್ಪಯ್ಯ ಸ್ವಾಮಿ, ರಮಾದೇವಿ ಸುರೇಶ ರೆಡ್ಡಿ, ಮುಖಂಡರಾದ ಕಿರಲಿಂಗಪ್ಪ, ಮಾಳಪ್ಪ ತೋಳ, ಶಿವಣ್ಣ ವಕೀಲ, ಅಯ್ಯಪ್ಪ ನಿಲಗಲ್, ರಾಜೇಶ, ಮಂಜುಳಾ ಅಮರೇಶಪ್ಪ ಮತ್ತಿತರರು ಇದ್ದರು.