ವಯನಾಡು ಭೂಕುಸಿತದಲ್ಲಿ ಮೃತಪಟ್ಟವರಿಗೆ ಕಾವ್ಯ ಕಂಬನಿ

KannadaprabhaNewsNetwork |  
Published : Aug 04, 2024, 01:28 AM IST
ವಯನಾಡು ಭೂಕುಸಿತದಲ್ಲಿ ಮೃತಪಟ್ಟವರಿಗೆ  ಕಾವ್ಯ ಕಂಬನಿ- ಸಂತಾಪ ಸೂಚಿಸುವ ಸಭೆ | Kannada Prabha

ಸಾರಾಂಶ

ತರೀಕೆರೆ, ಪ್ರಕೃತಿಯ ಮೇಲೆ ನಡೆಯುತ್ತಿರುವ ಮಾನವ ಪ್ರಹಾರಗಳಿಂದ ವಯನಾಡ್ ಜಿಲ್ಲೆಯಲ್ಲಿ ಅಪಾರ ಸಾವು ನೋವುಗಳು ಉಂಟಾಗಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್. ಪ್ರಶಾಂತ್ ಹೇಳಿದರು.

ಸಂತಾಪ ಸೂಚನಾ ಸಭೆಯಲ್ಲಿ ಎಚ್. ಪ್ರಶಾಂತ್

ಕನ್ನಡಪ್ರಭ ವಾರ್ತೆ, ತರೀಕೆರೆ

ಪ್ರಕೃತಿಯ ಮೇಲೆ ನಡೆಯುತ್ತಿರುವ ಮಾನವ ಪ್ರಹಾರಗಳಿಂದ ವಯನಾಡ್ ಜಿಲ್ಲೆಯಲ್ಲಿ ಅಪಾರ ಸಾವು ನೋವುಗಳು ಉಂಟಾಗಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್. ಪ್ರಶಾಂತ್ ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ತು ತರೀಕೆರೆ ಮತ್ತು ಪಟ್ಟಣದ ಎನ್ ಇಎಚ್ ಪಿ ಶಾಲೆ ಸಭಾಂಗಣದಲ್ಲಿ ಶುಕ್ರವಾರ ವಯನಾಡಿನಲ್ಲಿ ಭೂ ಕುಸಿತದಿಂದ ಮೃತಪಟ್ಟವರಿಗೆ ಏರ್ಪಡಿಸಿದ್ದ ಕಾವ್ಯ ಕಂಬನಿ ಸಂತಾಪ ಸೂಚಕ ಸಭೆ ಉದ್ಘಾಟಿಸಿ ಮಾತನಾಡಿ, ಪರಿಸರ ರಕ್ಷಣೆ ಹಾಗೂ ಪ್ರಕೃತಿ ರಕ್ಷಣೆ ಮೂಲಕ ಇಂತಹ ಅವಘಡಗಳನ್ನು ತಡೆಯಬಹುದು ಎಂದ ಅವರು, ದೇವರ ನಾಡಿನಲ್ಲಿ ದೇವರೆ ಸಾವು ನೋವುಗಳ ತಡೆಯಲಿಲ್ಲ ಎಂಬ ಕವಿತೆಯನ್ನು ವಾಚಿಸಿದರು.

ಪುರಸಭೆ ಸದಸ್ಯೆ ಗಿರಿಜಾ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಎಲ್ಲಾದರು ಸಾವು ನೋವುಗಳು ಸಂಭವಿಸಿದರೆ ಮಿಡಿಯುವ, ಸ್ಪಂದಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಲೇಖಕ ಮನಸುಳಿ ಮೋಹನ್ ಮಾತನಾಡಿ ಮನುಷ್ಯತ್ವ ಗುಣಗಳು ಮಾತ್ರ ನೋವಿನಲ್ಲಿ ರುವವರಿಗೆ ಸಾಂತ್ವನ ಹೇಳುತ್ತವೆ, ಶೋಕತಪ್ತ ಜನರ ಜೊತೆ ನಾವೆಲ್ಲ ನಿಲ್ಲೋಣ ಎಂದರು.

ಪುರಸಭೆ ಮಾಜಿ ಅಧ್ಯಕ್ಷೆ ಹೇಮಲತಾ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಿಗೆ ಇನ್ನೊಬ್ಬರ ಕಷ್ಟದಲ್ಲಿ ನೆರವಾಗುವ ಗುಣಗಳನ್ನು ಶಿಕ್ಷಣ ಕಲಿಸಬೇಕು ಎಂದು ಹೇಳಿದರು.

ಕಸಾಪ ಅಧ್ಯಕ್ಷ ರವಿ ದಳವಾಯಿ. ಚುಸಾಪ ಅಧ್ಯಕ್ಷ ಟಿ.ದಾದಾಪೀರ್, ಕಾರ್ಯದರ್ಶಿ ಮದು ಸೂಧನ್, ಟಿ.ಜಿ.ಸದಾನಂದ್, ಕವಯತ್ರಿ ಹರ್ಷಿಣಿ, ತ.ಮ. ದೇವಾನಂದ್, ಶಿಕ್ಷಕಿ ರೋಷನ್ ಆರಾ, ಪತ್ರಕರ್ತ ಅನಂತನಾಡಿಗ್ ಅವರು ಸ್ವರಚಿತ ಭಾವಾನಾತ್ಮಕ ಕವಿತೆಗಳ ಮೂಲಕ ಸಂತಾಪ ಸೂಚಿಸಿದರು.ಶಾಲೆ ಶಿಕ್ಷಕಿಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

2ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ಭೂಕುಸಿತದಲ್ಲಿ ಮೃತಪಟ್ಟವರಿಗೆ ಕಾವ್ಯ ಕಂಬನಿ- ಸಂತಾಪ ಸೂಚನಾ ಸಭೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಅಧ್ಕ್ಷಕ್ಷ ಟಿ.ದಾದಾಪೀರ್ ಮಾತನಾಡಿದರು. ಪುರಸಭೆ ಸದಸ್ಯೆ ಗಿರಿಜಾ ಟಿ.ಎಸ್.ಪ್ರಕಾಶ್ ವರ್ಮ, ಕಸಾಪ ಅಧ್ಯಕ್ಷ ರವಿ ದಳವಾಯಿ, ಲೇಖಕ ಮಸನುಳಿ ಮೋಹನ್, ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್ ಎಚ್. ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ