ಕನ್ನಡಪ್ರಭ ವಾರ್ತೆ ಜಪಾನ್
ಇದು ಕರ್ನಾಟಕದ ಉತ್ಪಾದನಾ ಮತ್ತು ಎಂಜಿನಿಯರಿಂಗ್ ವಲಯಕ್ಕೆ ದೊಡ್ಡ ಉತ್ತೇಜನ ನೀಡಲಿದ್ದು, ಡಿ.ಕೆ.ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರ ಸಮ್ಮುಖದಲ್ಲಿ ಟೋಕಿಯೊದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಹಾಗೂ ಕವಾಸಕಿ ಹೆವಿ ಇಂಡಸ್ಟ್ರೀಸ್‌ನ ಕೆಂಜಿ ಮಟ್ಸುಶಿತಾ ಮತ್ತು ವಿಪ್ರೋ ಕವಾಸಕಿ ಪ್ರಿಸಿಷನ್ ಮೆಷಿನರಿಯ ಸಿಇಒ ಮಿನೋರು ಹಟ್ಸುಡಾ ಅವರು ಒಪ್ಪಂದ ವಿನಿಮಯ ಮಾಡಿಕೊಂಡರು.600 ಉನ್ನತ ಮಟ್ಟದ ಉದ್ಯೋಗ ಸೃಷ್ಟಿ ನಿರೀಕ್ಷೆ:
ಕರ್ನಾಟಕ ಜಪಾನ್ ಹೂಡಿಕೆದಾರರ ನೆಚ್ಚಿನ ತಾಣ:
2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ- ''''ಇನ್ವೆಸ್ಟ್ ಕರ್ನಾಟಕ 2027'''' (ಹೂಡಿಕೆದಾರರ ಸಮಾವೇಶ) ದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರು ಕವಾಸಕಿ ಸಂಸ್ಥೆ ನಾಯಕತ್ವಕ್ಕೆ ಆಹ್ವಾನ ನೀಡಿದರು.
ಡಿ.ಕೆ.ಶಿವಕುಮಾರ್ ಅವರು ಟೋಕಿಯೊದಲ್ಲಿ ಜಪಾನ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಯಸುತಾಕಾ ನಕಸೋನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಜಪಾನ್ ಮತ್ತು ಕರ್ನಾಟಕದ ನಡುವಿನ ಆರ್ಥಿಕ ಸಹಕಾರ ಹಾಗೂ ದ್ವಿಪಕ್ಷೀಯ ಸಹಭಾಗಿತ್ವ ಬಲಪಡಿಸುವ ಅಗತ್ಯದ ಬಗ್ಗೆ ಹೇಳಿದರು. ಅಲ್ಲದೆ ಕರ್ನಾಟಕದಲ್ಲಿ ಜಪಾನ್ ಹೂಡಿಕೆಗಳನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದು ಒತ್ತಿ ಹೇಳಿದರು.
ಇದೇ ವೇಳೆ ಜೆಎಫ್‌ಇ ಎಂಜಿನಿಯರಿಂಗ್ ಕಾರ್ಪೊರೇಷನ್ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ನೇತೃತ್ವದ ನಿಯೋಗ ಭೇಟಿ ಮಾಡಿ ತ್ಯಾಜ್ಯ ನಿರ್ವಹಣೆ ಹಾಗೂ ನಗರ ಮೂಲಸೌಕರ್ಯ ಕ್ಷೇತ್ರದಲ್ಲಿ ಸಹಯೋಗ ಕುರಿತು ಚರ್ಚೆ ನಡೆಸಿದರು. ರಾಜ್ಯದ ಪ್ರಮುಖ ನಗರಗಳಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕುರಿತು ಸರ್ಕಾರದ ಆಸಕ್ತಿ ಬಗ್ಗೆ ವಿವರಿಸಿದರು.ಪ್ಯಾನಾಸೋನಿಕ್ ಕಂಪೆನಿ ಅಧ್ಯಕ್ಷರೊಂದಿಗೆ ಚರ್ಚೆ:
ರಕ್ಷಣಾ ಇಲಾಖೆ ಭೂಮಿಯಲ್ಲಿ ಅಭಿವೃದ್ಧಿ ಹೊಂದಿದ ಚೈತನ್ಯಶೀಲ ನಗರವಾದ ಟೋಕಿಯೋ ಮಿಡ್ಟೌನ್ ರೊಪ್ಪೊಂಗಿಗೆ ಶಿವಕುಮಾರ್ ನೇತೃತ್ವದ ನಿಯೋಗ ಭೇಟಿ ನೀಡಿತು. ಇದೇ ವೇಳೆ ಯೋಜನೆಯ ಮಾಸ್ಟರ್ ಪ್ಲಾನಿಂಗ್‌ನಲ್ಲಿ ನಿಕಟವಾಗಿ ಕೆಲಸ ಮಾಡಿದ್ದ ನಿಕ್ಕೆನ್ ಸೆಕ್ಕಿ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಾಗತಿಕ ವ್ಯವಹಾರ ವಿಭಾಗದ ಮುಖ್ಯಸ್ಥರಾದ ವಟಾರು ತನಕಾ ಅವರೊಂದಿಗೆ ನಿಯೋಗ ಸಂವಾದ ನಡೆಸಿತು. ವಿಶ್ವದರ್ಜೆಯ ನಗರ ಮೂಲಸೌಕರ್ಯ, ಎಲ್ಲಾ ರೀತಿಯ ಮೂಲಸೌಕರ್ಯ ಅಭಿವೃದ್ಧಿ ಅಧ್ಯಯನ ನಡೆಸಿ ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು.